ಬನಾರಸ್ ಹೀರೋ ಝೈದ್ ಖಾನ್ ಮಹಾಲಯ ಅಮವಾಸ್ಯೆ ನಿಮಿತ್ತ ಬಂಡಿ ಮಹಾಕಾಳಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ವಿಶೇಷ ಪೂಜೆಯಲ್ಲಿಯೂ ಝೈದ್ ಭಾಗಿಯಾಗಿದ್ದರು.
ಈ ಭಕ್ತಿಪೂರ್ವಕ ವಾತಾವರಣದ ನಡುವೆಯೇ ಅಭಿಮಾನಿಗಳು ಬನಾರಸ್ ಹೀರೋನೊಂದಿಗೆ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು. ಬನಾರಸ್ ದೊಡ್ಡ ಮಟ್ಟದಲ್ಲಿ ಹಿಟ್ ಆಗಲೆಂದು ಮನದುಂಬಿ ಹಾರೈಸಿದರು.
ಚಂದನವನದಲ್ಲಿ ಮತ್ತೊಂದು ಸುಂದರ ದೃಶ್ಯಕಾವ್ಯ ತೆರೆಮೇಲೆ ಬರಲು ಸಜ್ಜಾಗಿದೆ. ಈಗಾಗಲೇ ಬಹಳಷ್ಟು ನಿರೀಕ್ಷೆ ಹುಟ್ಟುಹಾಕಿರುವಂತಹ ಚಿತ್ರವೇ “ಬನಾರಸ್”.ತಿಲಕ್ ರಾಜ್ ಬಲ್ಲಾಳ್ ನಿರ್ಮಾಣದಲ್ಲಿ ಪಂಚ ಭಾಷೆಯಲ್ಲಿ ಮೂಡಿ ಬರ್ತಿರುವ “ಬನಾರಸ್” ಸಿನಿಮಾದ ಟ್ರೇಲರ್ ಇಂದು ಸಂಜೆ 06:21ಕ್ಕೆ ಬಿಡುಗಡೆ ಆಗುತ್ತಿದೆ.
ಝೈದ್ ಖಾನ್ ನಾಯಕನಾಗಿ, ಸೋನಲ್ ಮೊಂಥೆರೋ ನಾಯಕಿಯಾಗಿ ನಟಿಸಿದ್ದು, ಜಯತೀರ್ಥ ನಿರ್ದೇಶನದಲ್ಲಿ ಚಿತ್ರ ತಯಾರಾಗಿರುವ ಈ ಚಿತ್ರ ನವೆಂಬರ್ 4ರಂದು ವರ್ಲ್ಡ್ ವೈಡ್ ತೆರೆಗಪ್ಪಳಿಸಲಿದೆ. ಚಿತ್ರದ ಟ್ರೈಲರ್ ಲಾಂಚ್ PAN INDIA Press Meet ನಲ್ಲಿ ಮುಖ್ಯ ಅತಿಥಿಗಳಾಗಿ ಕ್ರೇಜಿಸ್ಟಾರ್ ರವಿಚಂದ್ರನ್, ಅರ್ಬಾಜ್ ಖಾನ್ ವೇದಿಕೆ ಅಲಂಕರಿಸಲಿದ್ದಾರೆ .