Bepanaah – Y | Yuvan Hariharan, Leonilla |
ಕನ್ನಡಿಗರ ಹವಾ ಏನು ಅನ್ನೋದು ಈಗ ಇಡೀ ಇಂಡಿಯನ್ ಸಿನಿಮಾ ಲೋಕಕ್ಕೆ ಗೊತ್ತಿದೆ. ನಮ್ ಇಂಡಸ್ಟ್ರೀ ಮಂದಿಯನ್ನು ಪರಭಾಷೆಯವರು ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸ್ತಿದ್ದಾರೆ. ಇಂತಹ ಟೈಮ್ ನಲ್ಲಿ ಕನ್ನಡದ ಯುವ ನಟ ಯುವನ್ ಹರಿಹರನ್ ನಾಯಕನಾಗಿ ಅಭಿನಯಿಸಿರುವ ಚೊಚ್ಚಲ ಹಿಂದಿ ಸಿನಿಮಾ ವೈ ಅಂಗಳದ ಬೆಪನ್ಹಾ ಹಾಡು ರಿಲೀಸ್ ಆಗಿದ್ದು, ಯೂಟ್ಯೂಬ್ ಪ್ರಪಂಚದಲ್ಲಿ ಭಾರೀ ಸದ್ದು ಮಾಡ್ತಿದೆ
ಆರಂಭವಾಗ್ತಿದೆ ಕಿರುತೆರೆ ಕಲಾವಿದರ ಕ್ರಿಕೆಟ್ ಪಂದ್ಯಾವಳಿ
ಶಂಭು ಕುಮಾರ್ ಸಾಹಿತ್ಯ ಬರೆದಿರುವ ಆಯುಷಿ ಷಾ ಧ್ವನಿಯಾಗಿರುವ ಬೆಪನ್ಹಾ ಗಾನ ಲಹರಿ ಖ್ಯಾತ ನಿರ್ದೇಶಕಿ ಕಂ ನಿರ್ಮಾಪಕಿ ಸೋನಾಲಿ ಬೋಸೆ, ಮಿಷನ್ ಮಂಗಲ್ ಸಿನಿಮಾ ಖ್ಯಾತಿಯ ನಿರ್ದೇಶಕ ಜಗನ್ ಶಕ್ತಿ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾಯಕ ಹಾಗೂ ನಾಯಕಿ ನಡುವಿನ ನವೀರಾದ ಪ್ರೇಮ ಕಥೆಯ ಈ ಸಿಂಗಿಂಗು ಬರೋಬ್ಬರಿ ಐದು ಲಕ್ಷಕ್ಕೂ ಹೆಚ್ಚು ವೀವ್ಸ್ ಸಿಕ್ಕಿದೆ. ಕೇಳುಗರನ್ನು ಮಂತ್ರ ಮುಗ್ದರನ್ನಾಗಿಸುವ ಬೆಪನ್ಹಾ ಗಾನಬಜನಾಕ್ಕೆ ಸಂಗೀತ ಪ್ರಿಯರು ಫಿದಾ ಆಗಿದ್ದಾರೆ. ಮುಂಬೈನ ರೋಷನ್ ತನೇಜಾ ಸ್ಕೂಲ್ ನಲ್ಲಿ ಜಿಮ್ನಾಸ್ಟಿಕ್ಸ್, ಮಾರ್ಷಲ್ ಆರ್ಟ್ಸ್, ಕರಾಟೆ, ಡ್ಯಾನ್ಸ್, ಫೈಟ್ ಹೀಗೆ ನಟನೆಗೆ ಸಂಬಂಧಿಸಿ ಎಲ್ಲಾ ಕಲೆಗಳನ್ನು ಕರಗತ ಮಾಡಿಕೊಂಡಿರುವ ಯುವನ್ ನಿರ್ದೇಶಕ ಗಿರಿದೇವ್ ಹಾಸನ್ ಸಾರಥ್ಯದಲ್ಲಿ ಮೂಡಿ ಬಂದಿರುವ ವೈ ಸಿನಿಮಾದಲ್ಲಿ ನಾಯಕನಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಸದ್ದಿಲ್ಲದೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ರಿಲೀಸ್ ಗೆ ಎದುರು ನೋಡುತ್ತಿದೆ.
`ವಾಮನ’ನ ಬದುಕಿಗೆ `ಏಕ್‌ಲವ್‌ಯಾ’ ಬೆಡಗಿ ಎಂಟ್ರಿ!
ಈ ಹಿಂದೆ ಜೀರೋ: ಮೇಡ್ ಇನ್ ಇಂಡಿಯಾ ಸಿನಿಮಾ ಮಾಡಿ ಗಮನ ಸೆಳೆದಿದ್ದ ಗಿರಿದೇವ್ ಗೆ ರಾಕ್ಸಿ, ಜೆ.ಎಂ.ಮಧು, ಡಾ.ಅರ್ಜಿತ್ ಸಾಥ್ ಕೊಟ್ಟಿದ್ದಾರೆ. ಗಿರಿದೇವ್ ಆಕ್ಷನ್ ಕಟ್ ಹೇಳಿರುವ ವೈ ಸಿನಿಮಾವನ್ನು ಈ ಮೂವರು ರಾಕೆಟ್ ಫಿಲ್ಮಸ್ ಬ್ಯಾನರ್ ನಡಿ ನಿರ್ಮಾಣ ಮಾಡಿದ್ದಾರೆ. ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಮಂಗಳೂರು ಮೂಲದ ಲಿಯೋನಿಲ್ಲಾ ನಾಯಕಿಯಾಗಿ ನಟಿಸಿದ್ದು, ತಂತ್ರಜ್ಞರು ಕನ್ನಡಿಗರು ಅನ್ನೋದೇ ವಿಶೇಷ.