Sandalwood Leading OnlineMedia

ದೊಡ್ಮನೆ ಕುಡಿ ಯುವರಾಜ್ ಕುಮಾರ್-ಶ್ರಿದೇವಿ ಡಿವೋರ್ಸ್..!

 

ಬೆಂಗಳೂರು: ದೊಡ್ಮನೆಯ ಕುಡಿ ಯಿವ ರಾಜ್‍ಕುಮಾರ್ ಹಾಗೂ ಶ್ರೀದೇವಿ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ಮುಂದಾಗಿದ್ದಾರೆ. ಸ್ಯಾಂಡಲ್​ವುಡ್‌ನ ದೊಡ್ಮನೆಯಲ್ಲಿ ಬೆಳಕಿಗೆ ಬಂದಿರೋ ಮೊದಲ ಡಿವೋರ್ಸ್ ಕೇಸ್ ಇದಾಗಿದೆ. ಕಳೆದ 4 ದಿನಗಳ ಹಿಂದೆಯೇ ಯುವ ರಾಜ್‌ಕುಮಾರ್ ಅವರು ಫ್ಯಾಮಿಲಿ ಕೋರ್ಟ್​​ನಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.

ಯುವ ರಾಜ್‍ಕುಮಾರ್ ಪತ್ನಿ ಶ್ರೀದೇವಿ ರಾಜ್ ಅಕಾಡೆಮಿ ನಡೆಸಿಕೊಂಡು ಹೋಗುತ್ತಿದ್ದರು. ಮದುವೆಯಾಗಿ ನಾಲ್ಕು ವರ್ಷಗಳ ಬಳಿಕ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಶ್ರೀದೇವಿ ಮೈಸೂರು ಮೂಲದವರಾಗಿದ್ದರು. ವೈಯಕ್ತಿಕ ಭಿನ್ನಾಭಿಪ್ರಾಯಗಳಿಂದ ಯುವ-ಶ್ರೀದೇವಿ ದೂರವಾಗುತ್ತಿದ್ದಾರೆ. ಶ್ರೀದೇವಿಗೆ ಈಗಾಗಲೇ ಯುವರಾಜ್ ಕುಮಾರ್ ಕಡೆಯಿಂದ ನೋಟೀಸ್ ಕೂಡ ಕಳುಹಿಸಲಾಗಿದೆ. ಆದರೆ ಶ್ರೀದೇವಿ ಸದ್ಯಕ್ಕೆ ಅಮೆರಿಕಾದಲ್ಲಿ ವಾಸಿಸುತ್ತಿದ್ದಾರೆ.

ಇದನ್ನೂ ಓದಿ:ಬಾಲಿವುಡ್ ಗೆ ಹಾರಿದ ಶ್ರೀಲೀಲಾ : ಹೀರೋ ಯಾರು ಗೊತ್ತಾ..?

ಶ್ರೀದೇವಿ ವಿರುದ್ಧ ಕ್ರೌರ್ಯದ ಆರೋಪ ಮಾಡಿರೋ ಯುವರಾಜ್ ಕುಮಾರ್, ಶಾಂತಿನಗರದ ಫ್ಯಾಮಿಲಿ ಕೋರ್ಟ್ ನಲ್ಲಿ ಡಿವೋರ್ಸ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. 6ನೇ ತಾರೀಖು ಅರ್ಜಿ ಸಲ್ಲಿಸಿರುವ ಯುವರಾಜ್‌ಕುಮಾರ್, ಕೋರ್ಟ್ ನಿಂದ ಯುವ ಪತ್ನಿ ಶ್ರೀದೇವಿಗೆ ನೋಟಿಸ್ ನೀಡಿದ್ದಾರೆ. ಶ್ರೀದೇವಿ ಮೇಲೆ ಮಾನಸಿಕ ಕಿರುಕುಳ ಕೊಟ್ಟ ಆರೋಪ ಮಾಡಿದ್ದಾರೆ.

ಇದನ್ನೂ ಓದಿ:ಕೋಮು ಉದ್ವಿಗ್ನತೆ ಆತಂಕ: ‘ಹಮಾರೆ ಬಾರಹ್’ ಚಿತ್ರ ಬಿಡುಗಡೆಗೆ ಕರ್ನಾಟಕದಲ್ಲಿ ನಿಷೇಧ!

Share this post:

Translate »