ದೊಡ್ಮನೆ ಕುಡಿ ಯುವ ರಾಜ್ ಕುಮಾರ್ ಸ್ಯಾಂಡಲ್ ವುಡ್ ಪ್ರವೇಶಿಸಲು ವೇದಿಕೆ ಸಜ್ಜಾಗಿದೆ. ಯುವ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಸಂತೋಷ್ ಆನಂದ್ ರಾಮ್ ನಿರ್ದೇಶನದ ಯೂತ್ ಸಿನಿಮಾ ಹೆಚ್ಚು ನಿರೀಕ್ಷಿತವಾಗಿದೆ. ಅಪ್ಪು ಸಾವಿನ ನಂತರ ಅಪ್ಪು ಅಭಿಮಾನಿಗಳೆಲ್ಲ ಯುವನ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅವರು ತನ್ನ ತಂದೆಯ ತದ್ರೂಪಿ ಎಂದು ಆಚರಿಸಿಕೊಳ್ಳುತ್ತಿದ್ದಾರೆ .ಇದೀಗ ಟ್ರೇಲರ್ ಬಿಡುಗಡೆಯಾಗಿದ್ದು, ಅಬ್ಬರದ ಪ್ರಚಾರದಲ್ಲಿದೆ.
ಯುವ ಸಿನಿಮಾದ ಟ್ರೇಲರ್ ನೋಡಿದ ದೊಡ್ಮನೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಯುವ ರಾಜ್ಕುಮಾರ್ ಅವರ ನಟನೆಗೆ ಫುಲ್ ಮಾರ್ಕ್ಸ್ ನೀಡಿದ್ದಾರೆ. ಆ್ಯಕ್ಟಿಂಗ್, ಫೈಟಿಂಗ್ , ಡ್ಯಾನ್ನಲ್ಲಿ ಸಖತ್ ಸೈ ಎನಿಸಿಕೊಂಡಿರುವ ಯುವರಾಜ್ ಕುಮಾರ್ ‘ಯುವ’ ಸಿನಿಮಾದಲ್ಲಿ ಕಾಲೇಜ್ ಸ್ಟೂಡೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಸಖತ್ ಡೈಲಾಗ್ ಹೊಡೆಯುತ್ತಾ ಪುನೀತ್ ರಾಜ್ ಕುಮಾರಂತೆ ಕಾಣಿಸುವ ಯುವ ಅಭಿಮಾನಿಗಳ ಮನಗೆದ್ದಿದ್ದಾರೆ. ಯುವನಿಗೆ ನಾಯಕಿಯಾಗಿ ಸಪ್ತಮಿ ಗೌಡ ಮಿಂಚಿದ್ದಾರೆ. ಕಾಲೇಜು ಜೀವನದ ಗ್ಯಾಂಗ್ವಾರ್ನಿಂದ ಹಿಡಿದು, ತಂದೆ-ಮಗನ ಬಾಂಧವ್ಯವನ್ನು ಈ ಸಿನಿಮಾ ಕಟ್ಟಿಕೊಟ್ಟಂತೆ ಮೇಲ್ನೋಟಕ್ಕೆ ಕಂಡಿದೆ. ಇದಲ್ಲದೆ, ಜೀವನದಲ್ಲಿ ಕಷ್ಟಪಟ್ಟು ಬದುಕು ಕಟ್ಟಿಕೊಳ್ಳುವ ಯುವ, ಫುಡ್ ಡೆಲಿವರಿ ಬಾಯ್ ಆಗಿಯೂ ಕೆಲಸ ಮಾಡೋದನ್ನ ಟ್ರೇಲರ್ ಬಿಟ್ಟುಕೊಟ್ಟಿದೆ.
ಟ್ರೇಲರ್ ನೋಡಿದ ಅಭಿಮಾನಿಗಳು ಅಪ್ಪು ಅವರನ್ನು ನೆನೆಯುತ್ತಿದ್ದಾರೆ. ಅಪ್ಪು ತರ ಹೋಲಿಕೆನೂ ಇದೆ. ಆದರೆ, ಬಹು ನಿರೀಕ್ಷಿತ ಸಿನಿಮಾ ಇಷ್ಟೇ ಸಾಕಾ? ಯೆಸ್, ಯುವ ಅವರ ಬಳಿ ಎಲ್ಲಾ ಸಾಮರ್ಥ್ಯವೂ ಇದೆ ಅನ್ನೋದು ನಮ್ಮೆಲ್ಲರಿಗೂ ಗೊತ್ತಿದೆ. ನಿರ್ದೇಶಕರು ಯುವ ಅವರ ಡ್ಯಾನ್ಸ್, ಸ್ಟಂಟ್ಸ್ ಹಾಗೂ ಡೈಲಾಗ್ ಹೇಳುವ ಕಲೆಯನ್ನು ಚೆನ್ನಾಗಿಯೇ ಬಳಸಿಕೊಂಡಿದ್ದಾರೆ. ಇದು ಕೇವಲ ಆರಂಭ ಅಷ್ಟೇ. ಸಿನಿಮಾ ಇನ್ನೂ ಬಾಕಿ ಇದೆ. ದೊಡ್ಮನೆ ಅಂದರೆ ನಿರೀಕ್ಷೆ ಜಾಸ್ತಿ ಇರುತ್ತೆ. ಸಿನಿಮಾ ಬರುವವರೆಗೂ ಕಾಯಿರಿ ಎಂದೆಲ್ಲಾ ಕಮೆಂಟ್ ಹಾಕುತ್ತಿದ್ದಾರೆ.