ಚಿತ್ತಾರ, ಕರ್ನಾಟಕದಲ್ಲಿ ಅಗ್ರಸ್ಥಾನದಲ್ಲಿ ನಿಂತಿರೋ ಎಂಟರ್ಟೈನ್ಮೆಂಟ್ ಮ್ಯಾಗಜಿನ್. 14 ನೇ ವಸಂತದ ಸಂಭ್ರಮದಲ್ಲಿರೋ ಚಿತ್ತಾರ ಕುಟುಂಬ, ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಚಿತ್ತಾರ ಸ್ಟಾರ್ ಅವಾರ್ಡ್ಸ್ ಕಾರ್ಯಕ್ರಮವನ್ನ ಅದ್ಧೂರಿಯಾಗಿ ಆಯೋಜಿಸುತ್ತಿದೆ.
ನೀವು ಪ್ರೀತಿ ನೀಡಿ ಬೆಳೆಸಿರುವ ನಿಮ್ಮ ಅಚ್ಚು ಮೆಚ್ಚಿನ ಕಲಾವಿದರನ್ನು ವೇದಿಕೆಯ ಮೇಲೆ ಆಹ್ವಾನಿಸಿ, ಅವರೊಂದಿಗೆ ನಿಮಗಿರುವ ನಂಟು, ಕಾಳಜಿಯನ್ನು ಸಂಭ್ರಮಿಸುವ ಅಭೂತಪೂರ್ವ ಕಾರ್ಯಕ್ರಮ ‘ಚಿತ್ತಾರ ಸ್ಟಾರ್ ಅವಾರ್ಡ್ಸ್ 2023’
ಸದ್ಯದಲ್ಲೇ ತಮ್ಮ ನೆಚ್ಚಿನ ತಾರೆಯರು, ಸಿನಿಮಾ, ಮತ್ತು ತಾಂತ್ರಿಕ ವರ್ಗದವರನ್ನ ಆಯ್ಕೆ ಮಾಡಲು ಚಿತ್ತಾರ ಸಿನಿ ರಸಿಕರಿಗೆ ವೋಟಿಂಗ್ ಅವಕಾಶ ಕಲ್ಪಿಸಲಿದ್ದು ಈ ಬಾರಿ ಪ್ರಶಸ್ತಿಗಾಗಿ ಪೈಪೋಟಿ ಜೋರಾಗಿಯೇ ನಡೆಯುವುದು ಖಂಡಿತಾ.