Sandalwood Leading OnlineMedia

ಕನಸು ಹೊತ್ತ ಕಂಗಳಲ್ಲಿ ಕಥೆಗಳು ತುಂಬಿದ್ದವು, ಯುವ ನಿರ್ದೇಶಕ ವೈಭವ್ ಜರ್ನಿ …

ಕನಸುಗಳನ್ನು ಹೊತ್ತು ಗಾಂಧಿನಗರವನ್ನು ತುಳಿದವರು ಮತ್ತು ಆಳಿದವರು ಇದ್ದಾರೆ. ಅದೇ ತರಹ ಸಾವಿರ ಕನಸು ಹೊತ್ತು ಗಾಂಧಿನಗರದಲ್ಲಿ ನೆಲೆ ನಿಂತು ತನ್ನ ಕನಸನ್ನು ಸಾಕಾರಗೊಳಿಸಿಕೊಳ್ಳುತ್ತಿರುವ ಯುವ ಪ್ರತಿಭೆ ವೈಭವ್

ಇವರು ಸಿನಿಮಾ ನಿರ್ದೇಶಕನಾಗುವ ಕನಸು ಕಾಣುತ್ತಿದ್ದನೋ ಅಥವಾ ಅದೇ ಕನಸಾಗಿ ನನ್ನ ಕಣ್ಣೊಳಗೆ ತೂರುತ್ತಿತ್ತೋ ಗೊತ್ತಿಲ್ಲ. ಇವರಿಗೆ ಬಾಲ್ಯದಿಂದಲೂ ನಟಿಸುವುದು ಮತ್ತು ನಿರ್ದೇಶನ ಮಾಡುವುದೆಂದರೆ ಬಹಳ ಇಷ್ಟ. ಇವರು ಹುಟ್ಟಿದ್ದು ಬೆಂಗಳೂರಿನ ರಾಜಾಜಿನಗರದಲ್ಲಿ ಬೆಳೆದದ್ದು ಓದಿದ್ದು ಅದೇ ಏರಿಯಾದಲ್ಲೆ. ಶಾಲಾ ದಿನಗಳಿಂದಲೂ ಶಾಲಾ ಕಾರ್ಯಕ್ರಮಗಳಿಗೆ ನಾಟಕಗಳನ್ನು ಬೆರಯೋದು ಮತ್ತು ಆ ನಾಟಕಗಳನ್ನು ಇವರೇ ನಿರ್ದೇಶನ ಮಾಡುವುದು ಇವರಿಗೆ ಬಾಲ್ಯದಲ್ಲಿಯೇ ಕಲೆಯ ಮೇಲೆ ಇದ್ದ ಆಸಕ್ತಿ. ಯಾವಾಗಲೂ ಇವರಿಗೆ ಕಥೆಗಳು ಹೊಳೆಯುತ್ತಿರಲಿಲ್ಲವಂತೆ ಬದಲಿಗೆ ಕಥೆಗಳು ಕಾಣಿಸುತ್ತಿದ್ದವು ಅನ್ನುತ್ತಾರೆ. ಅಂದರೆ ಇವರು ಕಥೆಯನ್ನು ಮೊದಲಿಗೆ ತಮ್ಮ ಕಲ್ಪನೆಯಲ್ಲಿ ನೋಡುವುದು ಮತ್ತು ಅದನ್ನು ಒಂದು ಫಿನಿಶಿಂಗ್ ಹಂತದವರೆಗೂ ತೆಗೆದುಕೊಂಡುಹೋಗಿ ನಿಲ್ಲಿಸುವುದು, ಆಗಲೂ ಆ ಕಥೆ ಇವರಿಗೆ ಅಷ್ಟೇ ಇಷ್ಟವಾಗುತ್ತಿದ್ದರೆ ಆ ಕಥೆಯನ್ನು ಕಾಗದದ ಮೇಲೆ ಬರೆಯುತ್ತಿದ್ದರು. ಯಾವುದೇ ಕಥೆಯಾಗಲಿ ಪ್ರಸಂಗವಾಗಲೀ ಇವರು ಇದೇ ರೀತಿ ಮಾಡಿ ಹೊರ ತರುತ್ತಿದ್ದರು.

ಇನ್ನೂ ಒದಿ  ಮಾಸ್ ಲುಕ್‌ನಲ್ಲಿ ಎಂಟ್ರಿ ಕೊಟ್ಟ ಪ್ರವೀಣ್ ತೇಜ್: ‘ಜಿಗರ್’ ಟೀಸರ್ ಔಟ್

ಕೆಲಸ ಕಲಿಯಲು ಕೆಲಸ ಮಾಡಿದೆ.

ಸಿನಿಮಾ ನಿರ್ದೇಶಕನಾಗುವ ಕನಸು ಹೊತ್ತ ಇವರು ಸುಮಾರು ಸಿನಿಮಾಗಳಲ್ಲಿ ಎಲ್ಲಾ ತರನಾದ ಕೆಲಸಗಳನ್ನು ಮಾಡಿ ಸಿನಿಮಾದ ಅಷ್ಟು ಮಜಲುಗಳನ್ನು ಒಂದೊAದಾಗಿ ಕಲಿತುಕೊಂಡು ಬಂದರು. ನಂತರ ನಿರ್ದೇಶನ ಕಲಿಯಲು ಮೊದಲಿಗೆ ‘ಭೀಮ ಸೇನ ನಳ ಮಹಾರಾಜ’ ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿ ನಿರ್ದೇಶಕ ಕಾರ್ತಿಕ್ ಸರಗೂರುರವರ ಬಳಿ ಕೆಲಸ ಮಾಡುತ್ತಾರೆ. ಇನ್ನು ಹಲವು ಸಿನಿಮಾಗಳಿಗೆ ಹೆಸರಾಂತ ನಿರ್ದೇಶಕರುಗಳ ಜೊತೆ ಸ್ಕಿçಪ್ಟಿಂಗ್ ಕೆಲಸದಿಂದ ಪ್ರೊಡಕ್ಷನ್ ಕೆಲಸದವರೆಗೂ ಎಲ್ಲ ಕೆಲಸಗಳನ್ನು ಮಾಡುತ್ತಾರೆ. ನಾನು ನಿರ್ದೇಶಕನಾಗಬೇಕು ಎಂದು ತನ್ನ ಸ್ವಂತ ಹಣದಲ್ಲಿ ಒಂದು ಶಾರ್ಟ್ ಮೂವಿ ಮಾಡುತ್ತಾರೆ. ಅದು ಚೆನ್ನಾಗಿ ಮಾಡದ ಕಾರಣ ಇನ್ನೊಂದು ಮಾಡುತ್ತಾರೆ, ಹೀಗೆ ಐದು ಶಾರ್ಟ್ ಮೂವಿ ಮಾಡಿದಾಗ ಐದನೇ ಕಿರುಚಿತ್ರ ನೋಡಿದವರು ಈ ಕಥೆಗೆ ನಾನೆ ಹಣ ಹಾಕುತ್ತೇನೆ ಇದರ ಪೂರ್ತಿ ಕಥೆ ಮಾಡಿ ನೀವೆ ನಿರ್ದೇಶನ ಮಾಡಿ ಎಂದು ಇವರಿಗೆ ಅವಕಾಶ ಕೊಡುತ್ತಾರೆ. ಹೀಗೆ ಛಲ ಬಿಡದ ತ್ರಿವಿಕ್ರಮನಂತೆ ಚಂದನವನದಲ್ಲಿ ಇಂದು ‘ಬಸರಿಕಟ್ಟೆ’ ಎನ್ನುವ ಸಿನಿಮಾ ಮಾಡಿ ನಿರ್ದೇಶಕನಾಗಿ ಗಾಂಧಿನಗರಕ್ಕೆ ಬಂದಿದ್ದಾರೆ.

ಇನ್ನೂ ಒದಿ  ದಿ untold ಸ್ಟೋರಿ ಆಫ್ ಬಸರಿಕಟ್ಟೆ ,ನವೆಂಬರ್ 3 ಕ್ಕೆ ಬಿಡುಗಡೆಯಾಗಲಿದೆ

ರವಣಿಗೆಯಲ್ಲಿ ಚತುರ.

ಇವರು ಬರವಣಿಗೆ ವಿಚಾರದಲ್ಲಿ ತುಂಬಾ ನಿಪುಣರು ಮತ್ತು ವಿಷಯಕ್ಕೆ ಸಂಬAಧಿಸಿದ ಆಧಾರಗಳನ್ನು ಹುಡುಕುವುದರಲ್ಲಿ ಎತ್ತಿದ ಕೈ. ಒಂದು ಕಥೆಯನ್ನು ಸಿನಿಮಾ ಮಾಡಲು ಏನೆಲ್ಲ ವಿಷಯಗಳನ್ನು ಕಲೆಕ್ಟ್ ಮಾಡಬೇಕು ಕಥೆಗೆ ಏನೇನು ಬೇಕು ಎಲ್ಲವನ್ನು ಹುಡುಕಿ ಹೊಂಚಿಸುತ್ತಾರೆ. ಮತ್ತು ಸಿನಿಮಾ ಸ್ಕಿçಪ್ಟ್ ವಿಷಯಕ್ಕೆ ಬಂದರೆ ಇವರು ಒಮ್ಮೆ ಸ್ಕಿçಪ್ಟ್ ಮುಗಿಸಿದರೆ ಅದು ಶೂಟಿಂಗ್‌ಗೆ ಮತ್ತು ಸಿನಿಮಾ ಎಡಿಟಿಂಗ್‌ಗೆ ಎರಡಕ್ಕೂ ರೆಡಿಯಾಗಿರುತ್ತೆ. ಮತ್ತು ಸಿನಿಮಾದ ಪ್ರತೀ ಹಂತದ ಕೆಲಸ ಬಲ್ಲ ಇವರಿಗೆ ಸಿನಿಮಾದ ಯಾವ ಕೆಲಸವಾದರೂ ಸರಿಯೇ ನೀರು ಕುಡಿದಹಾಗೆ ಅನ್ನಬಹುದು.

ಇನ್ನೂ ಒದಿ  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಂದ ಅನಾವರಣವಾಯಿತು “ಉಸಿರೇ ಉಸಿರೇ” ಚಿತ್ರದ ಟ್ರೇಲರ್ .

Share this post:

Translate »