ಬಿಗ್ ಬಾಸ್ ಮನೆಯಲ್ಲಿ ಈ ವಾರವೂ ಭಾರಿ ಗಲಾಟೆ! ಕೂಗಾಟ, ಅರಚಾಟ, ವಾದ-ವಿವಾದಗಳು ಎಲ್ಲವೂ ಹೆಚ್ಚಾಗಿದ್ದು, ಸುದೀಪ್ ಅವರ ಸಹನೆಯನ್ನೇ ಪರೀಕ್ಷಿಸಿದೆ.

ವಾರದ ಕಥೆ ಸಂಚಿಕೆಯಲ್ಲಿ ಸುದೀಪ್ ಸ್ಪರ್ಧಿಗಳತ್ತ ಕೋಪ ವ್ಯಕ್ತಪಡಿಸಿದರು. “ನೀವು ಮಾಡ್ತಿರೋದು ಸರಿ ಅಲ್ಲ. ಹೊರಗೆ ನೀವು ಜೋಕರ್ಸ್ ರೀತಿ ಕಾಣಿಸ್ತಿದ್ದೀರಾ!” ಎಂದು ಎಚ್ಚರಿಸಿದರು. ಮನೆಯಲ್ಲಿ ಎಲ್ಲರೂ ತಮ್ಮ ಆಟವೇ ಸೂಪರ್ ಎಂದು ಭಾವಿಸುತ್ತಿದ್ದಾರೆ, ಆದರೆ ಹೊರಗಿನ ದೃಷ್ಟಿಕೋನ ಬೇರೆ ಇದೆ ಎಂದು ಸ್ಪಷ್ಟಪಡಿಸಿದರು.
“ಹೊರಗಿನವರು ನೋಡ್ತಾರೆ, ಅರ್ಥ ಮಾಡ್ಕೊಳ್ತಾರೆ. ನಿಮಗೆ ಬೇಕಾದ್ದನ್ನು ತೆಗೆದುಕೊಳ್ಳಿ, ಬೇಡದ್ದು ಬಿಡಿ,” ಎಂದು ಅವರು ಹೇಳಿದರು.
ಅಷ್ಟೇ ಅಲ್ಲದೆ, ತಂಡಗಳ ನಿಯಮ ಪಾಲನೆ ಬಗ್ಗೆ ಸುದೀಪ್ ಅಸಮಾಧಾನ ವ್ಯಕ್ತಪಡಿಸಿದರು. “ಬ್ಲೂ, ರೆಡ್ ಟೀಮ್ ಅನ್ನೋದರ ಅರ್ಥವೇ ಉಳಿದಿಲ್ಲ. ನೀವು ರೂಲ್ಸ್‌ನ್ನೇ ಮೀರಿ ಹೋಗಿದ್ದೀರಿ,” ಎಂದು ಸುದೀಪ್ ತರಾಟೆಗೆ ತೆಗೆದುಕೊಂಡರು.
ಮನೆಯವರಿಂದ ಬಂದ ಫೋನ್ ಕಾಲ್‌ಗಳ ವಿಷಯದಲ್ಲಿಯೂ ಅವರು ಕಿಡಿ ಹಚ್ಚಿದರು. “ಮನೆಯವರ ಮಾತು ನಂಬಿದ್ರೆ, ನಿಮ್ಮಷ್ಟು ಮುಟ್ಠಾಳರು ಮತ್ತೊಬ್ಬರು ಇಲ್ಲ!” ಎಂದು ಸುದೀಪ್ ಸ್ಪರ್ಧಿಗಳನ್ನು ಗದರಿಸಿದರು.
ಈ ವಾರದ ಬಿಗ್ ಬಾಸ್ ಎಪಿಸೋಡ್ ಸುದೀಪ್ ಅವರ ತೀಕ್ಷ್ಣ ಮಾತುಗಳಿಂದ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
