ನಟಿ ನೀತೂ ಸದ್ಯಕ್ಕೆ ಚಿತ್ರರಂಗದಿಂದ ದೂರಾನೇ ಉಳಿದಿದ್ದಾರೆ. ‘ಗಾಳಿಪಟ’ ಸಿನಿಮಾ ನಟಿ ನೀತುಗೆ ಹೊಸ ಇಮೇಜ್ ಕೊಟ್ಟಿತ್ತು. ಇಲ್ಲಿಂದ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ, ಇತ್ತೀಚೆಗೆ ಶಸ್ತ್ರ ಚಿಕಿತ್ಸೆಗೆ ಒಳಗಾದ ಬಳಿಕ ಅವರು ದೈಹಿಕವಾಗಿ ಸ್ವಲ್ಪ ದಪ್ಪ ಆಗಿದ್ದಾರೆ. ಈ ಬಗ್ಗೆ ಜನರು ಸಾಕಷ್ಟು ಕಮೆಂಟ್ ಗಳನ್ನು ಹಾಕುತ್ತಾರೆ. ಈ ಬಗ್ಗೆ ನಟಿ ನೀತೂ, ಆರ್ಜೆ ರಾಜೇಶ್ ನಡೆಸಿಕೊಟ್ಟ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಇದನ್ನೂ ಓದಿ :ಬಿಗ್ ಬಾಸ್ ಖ್ಯಾತಿಯ ರಾಜೀವ್ ಹನು ಅಭಿನಯದ “ಉಸಿರೇ ಉಸಿರೇ” ಚಿತ್ರ ಮೇ 3 ರಂದು ತೆರೆಗೆ .
ʻಒಂದು ದಿನ ನನ್ನ ತಂಗಿ ವಿಂಟರ್ ಬ್ರೇಕ್ನಲ್ಲಿ ಇಲ್ಲಿಗೆ ಬಂದಳು. ನಾನು ಬಂದಲ್ಲಿಂದ ನೋಡುತ್ತಿದ್ದೇನೆ. ಏನು ಎಲ್ಲೂ ಹೋಗುತ್ತಿಲ್ಲ ನೀತು. ಬರೀ ಸೋಫಾ ಮೇಲೆ ಕೂತುಕೊಂಡಿದ್ದೀಯ. ಏನಿದು ವ್ಯಾಯಾಮ ಮಾಡು ಅಂದಳು. ನನಗೂ ಮಾಡಬೇಕು ಅಂತಿದೆ. ಆದರೆ, ನನಗೆ ವ್ಯಾಯಾಮ ಮಾಡುವುದಕ್ಕೆ ಆಗುತ್ತಿಲ್ಲ. ಅವಳು ಹೇಳುತ್ತಿರೋದರು ಸರಿ. ಆದರೆ, ಆಗಲ್ಲ. ಯಾರೇ ಅದೆಷ್ಟೇ ಸ್ಪೂರ್ತಿದಾಯಕ ಮಾತುಗಳನ್ನು ಆಡಿದರೂ ಆದು ಆಗಲ್ಲ. ಕೆಲವರು ದಪ್ಪ ಆಗುತ್ತಾರೆ. ಕೆಲವರು ಸಣ್ಣ ಆಗುತ್ತಾರೆ. ಅದರಲ್ಲೇನು ದೊಡ್ಡ ವಿಷಯವಿದೆ.
ಇದನ್ನೂ ಓದಿ :ಪಂಚಭೂತಗಳಲ್ಲಿ ಲೀನರಾದ ದ್ವಾರಕೀಶ್
ಎಲ್ಲರಿಗೂ ಶೇಮ್ ಇತ್ತು. ದಪ್ಪ ಆಗಿಬಿಟ್ಟಿದ್ದಾಳೆ. ಇನ್ನೂ ಸ್ವಲ್ಪ ಸಣ್ಣ ಆಗಬೇಕಿತ್ತು. ನನಗೆ ಎಷ್ಟು ಜನ ಬೀಯರ್ ಕುಡಿಯುತ್ತೀರಾ ಅಂತ ಕೇಳಿದ್ದಾರೆ ಗೊತ್ತಾ? ನನಗೆ ಅದರ ಸ್ಮೆಲ್ ಆಗಲ್ಲ. ನನ್ನ ಸ್ನೇಹಿತರು ಕುಡಿಯುತ್ತಾರೆ. ಅವರೊಂದಿಗೆ ನಾನು ಕೂರುತ್ತೇನೆ. ಆದರೆ, ನಾನು ಕುಡಿಯಲ್ಲ. ಯಾಕಂದ್ರೆ ಅದರ ಸ್ಮೆಲ್ ಕಂಡರೆ ಆಗುವುದಿಲ್ಲ. ಆದರೆ, ಇದನ್ನೆಲ್ಲ ಕೇಳುವುದಕ್ಕೆ ಇಷ್ಟವಿಲ್ಲ.
ದಪ್ಪ ಇದ್ದೀರಾ ಅಂದರೆ, ನೀನು ಯಾರದ್ದೋ ಜೊತೆಯಲ್ಲಿ ಇದ್ದೀಯ ಅನ್ನುವ ಕೆಟ್ಟ ಮನ:ಸ್ಥಿತಿ ಜನರಲ್ಲಿ ಇದೆ. ಆ ಟೈಮ್ನಲ್ಲಿ ನಿಮಗೆ ಬಾಯ್ ಫ್ರೆಂಡ್ ಕೂಡ ಇಲ್ಲದೆ ಇರಬಹುದು. ನೀನು ಯಾರೊಂದಿಗೋ ದೈಹಿಕ ಸಂಬಂಧ ಇಟ್ಟುಕೊಂಡಿದ್ದೀಯ. ಮಜಾ ಮಾಡುತ್ತಿದ್ದೀಯಾ ಅಂತಾನೂ ಹೇಳಿದ್ದಾರೆʼ ಎಂದು ಬೇಸರ ಹೊರ ಹಾಕಿದ್ದಾರೆ.