ಇದು ಸೋಷಿಯಲ್ ಮೀಡಿಯಾ ಜಮಾನ. ಯಾವಾಗ ಏನು ವೈರಲ್ ಆಗುತ್ತದೆ ಎಂಬುದನ್ನು ಅಂದಾಜು ಮಾಡುವುದಕ್ಕೂ ಆಗುವುದಿಲ್ಲ. ಇತ್ತಿಚೆಗಂತೂ ಬೆಳ್ಳುಳ್ಳಿ ಕಬಾಬ್ ಸಿಕ್ಕಾಪಟ್ಟೆ ಫೇಮಸ್ ಆಗಿದ್ದು, ರಾವುಲ್ಲಾ ಕೂಡ ಎಲ್ಲರ ತಲೆಯಲ್ಲೂ ರಿಜಿಸ್ಟರ್ ಆಗಿದ್ದಾನೆ. ಈಗ ಭಟ್ರು ಕೂಡ ಟ್ರೆಂಡಿಂಗ್ ಕಡೆಗೆ ವಾಲಿದ್ದು, ಬೆಳ್ಳುಳ್ಳಿ ಕಬಾಬ್ ಚಂದ್ರು ಜೊತೆಗೆ ಕೈ ಜೋಡಿಸಿದ್ದಾರೆ.
ಇದನ್ನೂ ಓದಿ ಮಾರ್ಚ್ 15ರಿಂದ ನಿಮ್ಮುಂದೆ ಮೆಹಬೂಬಾ
ಕರಟಕದಮನಕ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಪ್ರಮೋಷನ್ ಶುರುವಾಗಿದೆ. ಭಟ್ರು ಅಂದ್ರೇನೆ ವಿಭಿನ್ನತೆ, ವೈಶಿಷ್ಟ್ಯತೆ. ಇನ್ನು ಪ್ರಚಾರದ ವಿಚಾರದಲ್ಲಿ ಕೇಳಬೇಕಾ. ಅಲ್ಲಿಯೂ ಇದು ಮುಂದುವರೆದಿದೆ. ಬೆಳ್ಳುಳ್ಳಿ ಕಬಾಬ್ ಚಂದ್ರು ಕರೆತಂದು ಪ್ರಮೋಷನ್ ಮಾಡಿಸಿದ್ದಾರೆ.
ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವುದು ಏನಂದರೆ ಬೆಳ್ಳುಳ್ಳಿ ಕಬಾಬ್ ಹಾಗೂ ಕರಟಕದಮನಕ ಅಣ್ಣತಮ್ಮಂದಿರ ವಿಚಾರ. ಬೆಳ್ಳುಳ್ಳಿ ಕಬಾಬ್ ಚಂದ್ರು ನೋಡುವುದಕ್ಕೆ ಕೊಂಚ ಯೋಗರಾಜ್ ಭಟ್ಟರ ರೀತಿಯೆ ಕಾಣುತ್ತಾರೆ. ಹೀಗಾಗಿ ಕೆಲವು ಟ್ರೋಲ್ ಗಳಲ್ಲಿ ಇಬ್ಬರ ಫೋಟೋ ಬಳಸಿ ಅಣ್ಣತಮ್ಮಂದಿರು ಎಂದೆಲ್ಲಾ ಟ್ರೋಲ್ ಮಾಡಲಾಗಿತ್ತು. ಒಬ್ಬರು ಸಿನಿಮಾ ಭಟ್ರು, ಇನ್ನೊಬ್ಬರು ಅಡುಗೆ ಭಟ್ರು. ಒಬ್ಬರು ಗಾಳಿಪಟ, ಇನ್ನೊಬ್ಬರು ಚಟಪಟ ಅಂತ ಟ್ರೋಲ್ ಮಾಡಲಾಗಿತ್ತು. ಇದೀಗ ಕರಟಕದಮನಕದಲ್ಲಿ ಆ ಟ್ರೋಲ್ ಗಳೇ ಪ್ರಚಾರದ ಬುತ್ತಿಯಾಗಿದೆ.
ಇದನ್ನೂ ಓದಿ ಸದ್ಯದಲ್ಲೇ ಚಿತ್ರಮಂದಿರಗಳಲ್ಲಿ “ಸಂತೋಷ ಸಂಗೀತ” . ಇದು ಹೃದಯ ಹಾಗೂ ಮೆದುಳು ನಡುವಿನ ಸಂಘರ್ಷ .
ಯೋಗರಾಜ್ ಭಟ್ಟರು ಒಂದು ವಿಡಿಯೋ ಮಾಡಿ ಬಿಟ್ಟಿದ್ದಾರೆ. ‘ಹಂಗೋ ಹಿಂಗೋ ಹೆಂಗೋ ಇದ್ದೋ ಹಿಂಗಾಗೋದೋ ನೋಡೋ ಅಣ್ತಮ್ಮ ಅಂತ ಭಟ್ರು ಹಾಡೇಳಿದ್ರೆ ಅದಕ್ಕೆ ಚಂದ್ರು ಪ್ರತಿಕ್ರಿಯೆ ನೀಡಿದ್ದು, ಒಬ್ರು ಬರ್ತಾರೆ ಒನ್ ಮೋರ್ ಒನ್ ಮೋರ್ ಅಂತಾರೆ. ಆಗ ಗೊತ್ತಾಗುತ್ತೆ ನಮ್ಮಲ್ಲಿ ಅಣ್ಣ ಯಾರು ತಮ್ಮ ಯಾರು ಅಂತ’ ವಿಡಿಯೋ ಮೂಲಕ ಸಖತ್ ಟ್ವಿಸ್ಟ್ ಕೊಟ್ಟಿದ್ದಾರೆ.