Sandalwood Leading OnlineMedia

ಯೋಗರಾಜ್ ಭಟ್ಟರ `ಮೀಸೆ ಕತ್ತರಿ ಪ್ರಯೋಗ’ದ ಹಿಂದಿನ ರಹಸ್ಯ!

ಶಿವ ರಾಜ್ ಕುಮಾರ್ ಮತ್ತು ಪ್ರಭುದೇವ. ಇಬ್ಬರನ್ನೂ ಒಟ್ಟಿಗೇ ಸೇರಿಸಿರುವ ನಿರ್ದೇಶಕ ಯೋಗರಾಜ್ ಭಟ್. ಕನ್ನಡದವರೇ ಆದ ಪ್ರಭುದೇವ ಅವರನ್ನು ಕನ್ನಡಕ್ಕೆ ದೊಡ್ಡಮಟ್ಟದಲ್ಲಿ ತಂದವರು ಉಪೇಂದ್ರ. ಉಪ್ಪಿಯನ್ನು ಬಿಟ್ಟರೆ, ಅಷ್ಟೇ ದೊಡ್ಡ ಮಟ್ಟದ ಸೆನ್ಸೇಷನ್ ಸೃಷ್ಟಿಸಿರುವುದು ಯೋಗರಾಜ್ ಭಟ್ಟರ ಕರಟಕ ದಮನಕ. ವಿಶೇಷವೆಂದರೆ ಈ ಚಿತ್ರಕ್ಕೆ ಯೋಗರಾಜ್ ಭಟ್, ನಿರ್ದೇಶನವಷ್ಟೇ ಮಾಡುತ್ತಿಲ್ಲ, ಒಂದು ಪ್ರಮುಖ ಪಾತ್ರಕ್ಕಾಗಿ ನಟಿಸುತ್ತಿದ್ದಾರೆ. ನಟನೆ ಭಟ್ಟರಿಗೆ ಹೊಸದಲ್ಲ. ದ್ಯಾವ್ರೇ, ಬೆಲ್`ಬಾಟಂ ಮೊದಲಾದ ಚಿತ್ರಗಳಲ್ಲಿ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದವರು. ಇನ್ನೂ ಕೆಲವು ಚಿತ್ರಗಳಲ್ಲಿ ತೆರೆಯ ಮೇಲೆ ಹೀಗೆ ಬಂದು ಹಾಗೆ ಮರೆಯಾಗಿದ್ದವರು. ಆದರೆ ಈ ಚಿತ್ರದಲ್ಲಿ ಹಾಗಲ್ಲ.

ಇದನ್ನೂ ಓದಿ:  ನಾಳೆ ಮಂಡ್ಯದಲ್ಲಿ ಅಭಿಷೇಕ್-ಅವಿವಾ ಅದ್ಧೂರಿ  ಬೀಗರೂಟ :  ಒಂದು ಲಕ್ಷಕ್ಕೂ ಹೆಚ್ಚು ಜನಕ್ಕೆ ಭೂರಿ ಭೋಜನದ ಸಿದ್ಧತೆ

ಭಟ್ಟರು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಈ ಪಾತ್ರಕ್ಕೆ ಬಾಲಿವುಡ್, ತಮಿಳು, ತೆಲುಗು ಚಿತ್ರರಂಗಗಳ ಪ್ರಮುಖ ನಟರನ್ನು ಕೇಳಲಾಗಿತ್ತು. ಅವರ ಡೇಟ್ಸ್ಗಾಗಿ ಇಡೀ ಚಿತ್ರತಂಡ ಸೇರಿದಂತೆ ಶಿವರಾಜ್ಕುಮಾರ್ ಮತ್ತು ಪ್ರಭುದೇವ ಕಾಯಬೇಕಿತ್ತು. ಹಾಗಾಗಿ ಭಟ್ಟರೇ ಅಖಾಡಕ್ಕೆ ಇಳಿದಿದ್ದಾರೆ. ಈ ಪಾತ್ರಕ್ಕಾಗಿ ಭಟ್ಟರು ತಮ್ಮ ಮೀಸೆಗೆ ಕತ್ತರಿಯನ್ನೂ ಹಾಕಿದ್ದಾರಂತೆ. ಗೊಂಬೆ ಆಡ್ಸೋರಿಗೆ, ಗೊಂಬೆ ಆಗೋದು ಹೊಸದೇನಲ್ಲ. ಆದರೆ ಎದುರಲ್ಲಿ ಇರುವುದು ಶಿವಣ್ಣ ಮತ್ತು ಪ್ರಭುದೇವ. ಹೀಗಾಗಿ ಒಂದಿಷ್ಟು ಕುತೂಹಲವೂ ಇದೆ. ಈವರೆಗೆ ಬೇರೆಯವರ ನಿರ್ದೇಶನದಲ್ಲಿ ನಟಿಸಿದ್ದ ಅವರು ಇದೇ ಮೊದಲ ಬಾರಿಗೆ ತಮ್ಮದೇ ನಿರ್ದೇಶನದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಕೋಲಾರ, ಬೆಂಗಳೂರು, ಮೈಸೂರು ಸೇರಿದಂತೆ ಹಲವು ಕಡೆಗಳಲ್ಲಿ ನಡೆದಿದ್ದು, ಪ್ರಿಯಾ ಆನಂದ್ ಮತ್ತು ನಿಶ್ವಿಕಾ ನಾಯ್ಡು ನಾಯಕಿಯರಾಗಿದ್ದಾರೆ.

Share this post:

Translate »