ಯೋಗರಾಜ್ ಭಟ್ಟರು ಏನೇ ಮಾಡಿದರೂ ಒಂದು ಹೊಸತನ ಇದ್ದೇ ಇರುತ್ತದೆ, ಆದರೇ ಅದು ಅದೇ ಹಳೇ ಯೋಗರಾಜ್ ಭಟ್ಟರ ಪರಿಧಿಯಲ್ಲೇ ಗಿರಕಿ ಹೊಡೆಯುತ್ತಿರುತ್ತದೆ. ಅಂತಹ ಒಂದು ನಿರೂಪಣಾ ತಾಕತ್ತು ಇರುವುದು ನಮ್ಮ ಭಟ್ಟರಿಗೆ. ಎತ್ತಲೆತ್ತಲಿಂದಲೋ ಏನನ್ನೋ ಎರವಲು ತಂದು ಇಲ್ಲಿ ನಮ್ಮದೇ ಅಚ್ಚಿನಲಿ ಎರಕ ಹೊಯ್ದರೆ ಹೇಗೆ ವಿಭಿನ್ನವಾಗಿ ಇರುತ್ತದೋ ಹಾಗೆ ನಮ್ಮ ಯೋಗರಾಜ್ ಭಟ್ಟರ ಸಂಯೋಜನೆಗಳು,
ಇದನ್ನೂ ಓದಿ: ಗಿನ್ನಿಸ್ ದಾಖಲೆ ಮಾಡುವತ್ತ “ದೇವರ ಆಟ ಬಲ್ಲವರಾರು”
ಅದು ಹಾಡೇ ಆಗಿರಲಿ, ಕತೆಯೇ ಆಗಿರಲಿ, ದೃಶ್ಯವೇ ಆಗಿರಲಿ, ಸಂಬಾಷಣೆಯೇ ಆಗಿರಲಿ, ಎಲ್ಲವನ್ನು ಎಲ್ಲೋ ಕೇಳಿದ ಹಾಗೆ ನೆನಪು ಬರಬಹುದು ಆದರೇ ಎಲ್ಲೋ ನೋಡಿದ ನೆನಪು ಬರುವುದಿಲ್ಲಾ, ಯಾಕೆಂದರೆ ಯಾವುದೋ ಊರಿನ, ಯಾವುದೋ ಬೀದಿಯ ಪೆಟ್ಟಿ ಅಂಗಡಿಯಲ್ಲಿ ಕುಳಿತುಮಾತನಾಡುವ ಸಾಮಾನ್ಯ ಜನರ ಸಾಮಾನ್ಯ ಪದವೇ ಭಟ್ಟರ ಅಸಲು ಸಾಹಿತ್ಯ. ಕೆಲವೊಂದು ಭಟ್ಟರ ಕಲ್ಪನೆಯ, ಕನಸುಗಳ ಕಣಜದಲ್ಲೂ ಹುಟ್ಟಿಕೊಂಡಿರುತ್ತವೆ, ಅವರಿಗೆ ಏನೂ ತೋಚದೆ ಇದ್ದಾಗಲೂ ಅಲ್ಲೊಂದು ಹೊಸ ಸಾಲು ಹುಟ್ಟುತ್ತದೆ, ಅಂತದೇ ಪದಗಳು ಇವು
ಇದನ್ನೂ ಓದಿ: ಪಸಂದಾಗಿದೆ “ಗರಡಿ” ಚಿತ್ರದ ಮೊದಲ ಹಾಡು; “ಹೊಡಿರೆಲೆ ಹಲಗಿ” ಎಂದ ಭಟ್ರು
“ತಲೆಕೆಟ್ಟ ಭಟ್ಟ ಯಬುಡಾ ತಬುಡಾ”, “ಯಾವನಿಗೊತ್ತು” ಇಂತಹ ಪದಗಳು ಭಟ್ಟರಿಗೆ ಏನೂ ತೋಚದೆ ಇದ್ದಾಗ ಹುಟ್ಟಿ ತಾವು ಮೆರೆದು ಭಟ್ಟರನ್ನು ಮೆರೆಸಿದ ಪದಗಳಿವು, ಇದು ಭಟ್ಟರ ಇನ್ನೊಂದು ಮುಖ ಆ ಮುಖದ ಹೆಸರು “ವಿಚಿತ್ರ ಸಾಹಿತಿ”
ಯೋಗರಾಜ ಭಟ್ಟರು ಹಾಗೆಯೇ ‘ಗರಡಿ’ ಸಿನಿಮಾ ಬಗ್ಗೆ ಅದರ ಕಥೆ ಬಗ್ಗೆ ಹೇಳಿದ್ದೆನಪ್ಪ ಅಂದ್ರೇ, ಗರಡಿ ಮನೆಯ ಸುತ್ತಲೂ ಸುತ್ತುವರಿದು ನಡೆಯೋ ಕಥೆ, ಅದೇ ಹಳೇ ಮೈಸೂರಿನಲ್ಲಿ ಇಂತಹ ಗರಡಿ ಮನೆಗಳು ಅವೆಷ್ಟಿದೆಯೋ ಲೆಕ್ಕವಿಲ್ಲಾ, ಪ್ರತೀ ಗರಡಿ ಮನೆಗಳಲ್ಲೂ ಒಂದೊಂದು ರೋಚಕ ಕಥೆಗಳಿವೆ. ಅಂತಹ ರೋಚಕ ಕಥೆಗಳಿಗೆ ಒಂದಿಷ್ಟು ಭಟ್ಟರ ಮೆದುಳಿನ ತುಪ್ಪ ಸವರಿದರೆ ಕಥೆ ಇನ್ನೆಷ್ಟು ಸೊಗಸಾಗಿ ಘಮಿಸಬಹುದು. ಯಾವ ಯಾವ ಗರಡಿಯಿಂದ ಯಾವ ಯಾವ ಸೊಗಡು ಎತ್ತಿದ್ದಾರೋ? ಮಣ್ಣು, ಬೆವರು, ಸೋಲು, ಗೆಲುವು, ನಿರಾಸೆ ಎಲ್ಲವನ್ನು ಸೇರಿಸಿ ಹದಮಾಡಿದ ಬದುಕಿನ ಕಥೆ ಗರಡಿ “ಹೋರಾಟ” ಕಥೆಯ ಜೀವಾಳ.
ನಮ್ಮದೇ ನಾಡಿನ ದೇಸಿ ಸೊಗಡಿನ ಕಥೆಯನ್ನು ‘ಗರಡಿ’ಮನೆಯಲ್ಲಿ ಹೇಳ ಹೊರಟಿದ್ದಾರೆ ಭಟ್ಟರು, ಅಲ್ಲಿ ಏಕಲವ್ಯ ಕಾಣಿಸುತ್ತಾನಂತೆ, ದ್ರೋಣಚಾರ್ಯರು ಬರುತ್ತಾರಂತೆ, ಇನ್ನು ಬೆರಳಿನ ಕಥೆ ಏನೋ, ಕುಸ್ತಿಯ ಕಥೆ ಏನೋ ಗೊತ್ತಿಲ್ಲಾ, ಭಟ್ಟರು ಸುಮ್ಮನೆ ನಮ್ಮನ್ನು ಕೆಣಕಿ ಕುತೂಹಲ ಹುಟ್ಟಿಸಿ ಕಾಯುವ ಶಿಕ್ಷೆ ಕೊಟ್ಟು ಬಿಟ್ಟಿದ್ದಾರೆ. ಇನ್ನೇನು ಒಂದೊಂದಾಗಿ ಪಟ್ಟು ಬಿಡಿಸಿ ಕೊಡುತ್ತಾರೆ, ಕೇಳುತ್ತಾ ಸಿನಿಮಾ ಬಿಡುಗಡೆವರೆಗೂ ಕಾಯುತ್ತಾ ಹೋಗೋಣ.