ಪ್ರಭಾಸ್ ಅವರ ಬಹು ನಿರೀಕ್ಷಿತ ಆಕ್ಷನ್–ಥ್ರಿಲ್ಲರ್ ‘ಸಲಾರ್‘ ನಲ್ಲಿ ನಟ ಯಶ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಡವಾಗಿ ತಿಳಿದು ಬಂದಿದೆ. ಸಲಾರ್ ಸಿನಿಮಾ ನಿರ್ದೇಶಕ ಪ್ರಶಾಂತ್ ನೀಲ್ ಪ್ರಭಾಸ್ ಮತ್ತು ಯಶ್ ಇಬ್ಬರನ್ನು ಒಂದೇ ಫ್ರೇಮ್ ನಲ್ಲಿ ತರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಈ ವದಂತಿಗಳು ಖಚಿತವಾದರೇ ಪ್ಯಾನ್ ಇಂಡಿಯಾ ನಾಯಕರುಗಳು ಪ್ರಭಾಸ್ ಮತ್ತು ಯಶ್ ಇಬ್ಬರು ತೆರೆ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ.
`ಇನ್ನಿಲ್ಲ ಸೂರಿ’; ನಿರ್ಮಾಪಕನೇ ಹೆಸರೇ ಟೈಟಲ್!
‘ಸಲಾರ್‘ ನಲ್ಲಿ ಯಶ್ ಅವರು ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಅಭಿಮಾನಿಗಳು ಮತ್ತು ಪ್ರೇಕ್ಷಕರಿಗೆ ತೆರೆ ಮೇಲೆ ಎರಡು ದಂತಕಥೆಗಳನ್ನು ಒಟ್ಟಿಗೆ ನೋಡುವುದು ಅದ್ಭುತ ಎಂದು ಭಾವಿಸುತ್ತಾರೆ.
ಸಂಹಿತಾಗೆ “ಯಾಕೋ ಬೇಜಾರು”! ವಿಭಿನ್ನ ಪಾತ್ರದಲ್ಲಿ ಮಾಡೆಲ್ ಬೆಡಗಿ
ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ‘ಸಲಾರ್‘ ತಯಾರಾಗುತ್ತಿದ್ದು, ವಿಜಯ್ ಕಿರಗಂದೂರು ಚಿತ್ರವನ್ನು ದೊಡ್ಡ ಮಟ್ಟದಲ್ಲಿ ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ಮಲಯಾಳಂ ಸ್ಟಾರ್ ಪೃಥ್ವಿರಾಜ್, ಶ್ರುತಿ ಹಾಸನ್ ಮತ್ತು ಜಗಪತಿ ಬಾಬು ಮಹತ್ವದ ಪಾತ್ರವನ್ನು ನಿರ್ವಹಿಸಲಿದ್ದಾರೆ.