Sandalwood Leading OnlineMedia

‘ಯಶೋದಾ’ಗೆ ರಕ್ಷಿತ್ ಸಾಥ್ ; ಇಂದು ಟ್ರೇಲರ್ ಬಿಡುಗಡೆ

 
ಸಮಂತಾ ಅಭಿನಯದ ‘ಯಶೋದಾ’ ಚಿತ್ರವು ನವೆಂಬರ್ 11ರಂದು ಜಗತ್ತಿನಾದ್ಯಂತೆ ತೆಲುಗು, ತಮಿಳು, ಕನ್ನಡ, ಹಿಂದಿ ಮತ್ತು ಮಲಯಾಳಂನಲ್ಲಿ ಏಕಕಾಲಕ್ಕೆ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು, ಈ ಚಿತ್ರದ ಬಹುನಿರೀಕ್ಷಿತ ಟ್ರೇಲರ್ ಬಿಡುಗಡೆಯಾಗಲಿದೆ. ಐದು ಭಾಷೆಗಳ ಟ್ರೇಲರ್ಗಳ ಪೈಕಿ ಕನ್ನಡದ ಟ್ರೇಲರ್ನ್ನು ‘ಸಿಂಪಲ್ ಸ್ಟಾರ್’ ರಕ್ಷಿತ್ ಶೆಟ್ಟಿ ಇಂದು ಸಂಜೆ 5:36ಕ್ಕೆ ಬಿಡುಗಡೆ ಮಾಡಲಿದ್ದಾರೆ.
 
 
ಬೇರೆ ಭಾಷೆಗಳ ಟ್ರೇಲರ್ಗಳನ್ನು ಆಯಾ ಭಾಷೆಗಳ ಜನಪ್ರಿಯ ನಟರು ಬಿಡುಗಡೆ ಮಾಡಲಿದ್ದಾರೆ.‘ಯಶೋದಾ’ ಒಂದು ಹೊಸ ಶೈಲಿಯ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಈ ಚಿತ್ರವನ್ನು ಶಿವಲೆಂಕ ಕೃಷ್ಣ ಪ್ರಸಾದ್ ತಮ್ಮ ಶ್ರೀದೇವಿ ಮೂವಿ ಪ್ರೊಡಕ್ಷನ್ಸ್ ಬ್ಯಾನರ್ನಡಿ ನಿರ್ಮಿಸಿದ್ದಾರೆ. ಹರಿ-ಹರೀಶ್ ಈ ಚಿತ್ರವನ್ನು ಜಂಟಿಯಾಗಿ ನಿರ್ದೇಶಿಸಿದ್ದಾರೆ. ಸಮಂತಾ ಜತೆಗೆ ಈ ಚಿತ್ರದಲ್ಲಿ ವರಲಕ್ಷ್ಮೀ ಶರತ್ಕುಮಾರ್, ಉನ್ನಿ ಮುಕುಂದನ್, ರಾವ್ ರಮೇಶ್, ಮುರಳಿ ಶರ್ಮ, ಸಂಪತ್ ರಾಜ್, ಶತ್ರು, ಮಧಿರಿಮಾ, ಕಲ್ಪಿಕಾ ಗಣೇಶ್, ದಿವ್ಯ ಶ್ರೀಪಾದ, ಪ್ರಿಯಾಂಕಾ ಶರ್ಮ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಎಂ. ಸುಕುಮಾರ್ ಅವರ ಛಾಯಾಗ್ರಹಣವಿದೆ.

Share this post:

Translate »