ಕೆಜಿಎಫ್ ಚಿತ್ರ ಸರಣಿಯ ಮೂಲಕ ಇಡೀ ದೇಶದಾದ್ಯಂತ ಖ್ಯಾತಿಯನ್ನು ಗಳಿಸಿರುವ ರಾಕಿಂಗ್ ಸ್ಟಾರ್ ಯಶ್ ತಮ್ಮ ಮುಂದಿನ ಚಿತ್ರವನ್ನು ಯಾರ ಜತೆ ಮಾಡಲಿದ್ದಾರೆ ಎಂಬ ಕುತೂಹಲ ಹಾಗೂ ಪ್ರಶ್ನೆ ಯಶ್ ಅಭಿಮಾನಿಗಳಲ್ಲಿ ಮೂಡಿದೆ. ಹೀಗೆ ಯಶ್ ಮುಂದಿನ ಚಿತ್ರದ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗಲೇ ಯಶ್ ಕಡೆಯಿಂದ ಅವರ ಅಭಿಮಾನಿಗಳಿಗೆ ಖುಷಿ ಸುದ್ದಿಯೊಂದು ಹರಿದುಬಂದಿದೆ. ಹೌದು, ಯಶ್ ದುಬಾರಿ ಕಾರೊಂದನ್ನು ಖರೀದಿಸಿದ್ದು, ಅದರ ಫೋಟೊ ಹಾಗೂ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಇದನ್ನೂ ಓದಿ: ಡೇರ್ ಡೆವಿಲ್ ಮುಸ್ತಾಫಾ ಚಿತ್ರದ ಪರವಾಗಿ ಸಿ.ಎಂ ಸಿದ್ದರಾಮಯ್ಯ ಡೇರ್ ನಿರ್ಧಾರ!
ಕಪ್ಪು ಬಣ್ಣದ ರೇಂಜ್ ರೋವರ್ಸ್ ಸ್ಪೆಷಲ್ ಎಡಿಷನ್ ಅನ್ನು ಯಶ್ ಖರೀಸಿದ್ದು, ತಾವೇ ಚಲಾಯಿಸಿಕೊಂಡು ಬಂದು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಪಕ್ಕದಲ್ಲಿಯೇ ರಾಧಿಕಾ ಪಂಡಿತ್ ಕುಳಿತಿದ್ದು, ಮನೆಗೆ ಹೊಸ ಅತಿಥಿ ಆಗಮನವಾಗಿದ್ದರ ಸಂತಸದಲ್ಲಿದ್ದಾರೆ. ಇನ್ನು ಈ ಕಾರಿನ ಬೆಲೆ ಬರೋಬ್ಬರಿ 4 ಕೋಟಿ ರೂಪಾಯಿಗಳಾಗಿದ್ದು, ಇದರ ಬೆಲೆ ಕೇಳಿ ಅಭಿಮಾನಿಗಳು ಹಾಗೂ ಸಿನಿ ರಸಿಕರು ಖುಷ್ ಆಗಿದ್ದಾರೆ ಮತ್ತು ಯಶ್ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಆಶಿಸಿದ್ದಾರೆ.
ಇದನ್ನೂ ಓದಿ: ಸದ್ದುಮಾಡುತ್ತಿದೆ ಆಕ್ಷನ್ ಕ್ವೀನ್ ಮಾಲಾಶ್ರೀ ಪ್ರಮುಖಪಾತ್ರದಲ್ಲಿ ನಟಿಸಿರುವ “ಮಾರಕಾಸ್ತ್ರ” ಚಿತ್ರದ ಟೀಸರ್
ಒಂದೆಡೆ ಯಶ್ ಹೊಸ ಕಾರು ಖರೀದಿಸಿದ ಸಂತಸದಲ್ಲಿದ್ದರೆ ಮತ್ತೊಂದೆಡೆ ಯಶ್ ಅಭಿಮಾನಿಗಳು ಯಶ್ ತಮ್ಮ ಮುಂದಿನ ಚಿತ್ರವನ್ನು ಯಾವಾಗ, ಯಾವ ನಿರ್ದೇಶಕರ ಜತೆ ಘೋಷಿಸಲಿದ್ದಾರೆ ಎಂದು ಚಿಂತಿಸುತ್ತಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಸಾಮಾಜಿಕ