ರಾಮಾಯಣ ಸಿನಿಮಾ ಮೇಲೆ ಬೆಟ್ಟದಷ್ಟು ನಿರೀಕ್ಷೆ ಹುಟ್ಟಿಕೊಂಡಿದೆ. ಅದಕ್ಕೆ ಕಾರಣ ಯಶ್ ನಟನೆ ಹಾಗೂ ನಿರ್ಮಾಣ ಮಾಡುತ್ತಿರುವುದು. ನಿತೇಶ್ ತಿವಾರಿ ಈ ಸಿನಿಮಾ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಸಿನಿಮಾ ಬಜೆಟ್, ಸ್ಟಾರ್ಕಾಸ್ಟ್, ಶೂಟಿಂಗ್ ಬಗ್ಗೆ ನಾನಾ ಬಗೆಯ ಸುದ್ದಿ ವೈರಲ್ ಆಗುತ್ತಿದೆ. ಆದರೆ ಚಿತ್ರತಂಡ ಮಾತ್ರ ಈ ಬಗ್ಗೆ ಮೌನವಾಗಿಯೇ ಇದೆ. ಶೀಘ್ರದಲ್ಲೇ ಸಿನಿಮಾ ಬಗ್ಗೆ ಅಧಿಕೃತ ಘೋಷಣೆ ಹೊರ ಬೀಳುವ ನಿರೀಕ್ಷೆಯಿದೆ.
ನಮಿತ್ ಮಲ್ಹೋತ್ರ ಜೊತೆ ಸೇರಿ ನಟ ಯಶ್ ‘ರಾಮಾಯಣ’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ಕೂಡ ರಾಕಿಂಗ್ ಸ್ಟಾರ್ ನಟಿಸುತ್ತಾರೆ ಎನ್ನಲಾಗ್ತಿದೆ. ಶ್ರೀರಾಮನಾಗಿ ರಣ್ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ.
ಈಗಾಗಲೇ ಸದ್ದಿಲ್ಲದೇ ಸಿನಿಮಾ ಚಿತ್ರೀಕರಣ ಸಹ ನಡೆಯುತ್ತಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಹನುಮಂತನಾಗಿ ಸನ್ನಿ ಡಿಯೋಲ್, ಕೈಕೇಯಿ ಆಗಿ ಲಾರಾ ದತ್ತಾ, ದಶರಥನಾಗಿ ಅರುಣ್ ಗೋವಿಲ್ ನಟಿಸುವ ಬಗ್ಗೆ ಗುಲ್ಲಾಗಿದೆ.
‘ರಾಮಾಯಣ’ ಚಿತ್ರದಲ್ಲಿ ಲಂಕಾಸುರನ ಪಾತ್ರದಲ್ಲಿ ನಟಿಸುವ ಬಗ್ಗೆ ಇನ್ನು ಖಚಿತ ಮಾಹಿತಿ ಲಭ್ಯವಾಗಿಲ್ಲ. ಆದರೆ ಯಶ್ ಕಾಸ್ಟ್ಯೂಮ್ ಬಗ್ಗೆ ಕ್ರೇಜಿ ನ್ಯೂಸ್ ವೈರಲ್ ಆಗುತ್ತಿದೆ. ರಾವಣನ ಗೆಟಪ್ಗಾಗಿ ಯಶ್ ನಿಜವಾದ ಚಿನ್ನ ಬಳಸಿ ಸಿದ್ಧಪಡಿಸಿದ ವೇಷಭೂಷಣದಲ್ಲಿ ಕಂಗೊಳಿಸುತ್ತಾರೆ ಎನ್ನಲಾಗ್ತಿದೆ.
ಇದನ್ನೂ ಓದಿ :ದರ್ಶನ್ ಮತ್ತು ಸುದೀಪ್ ಅವರು ಮಿರೈ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.
ರಾವಣ ಲಂಕೆಯ ರಾಜನಾಗಿದ್ದ. ಹಿಂದೂ ಪುರಾಣಗಳಲ್ಲಿ, ಲಂಕಾದ ಸುವರ್ಣ ನಗರವನ್ನು ಭಗವಾನ್ ವಿಶ್ವಕರ್ಮ ನಿರ್ಮಿಸಿದನೆಂದು ನಂಬಲಾಗಿದೆ.
ಹಾಗಾಗಿ ಆ ಪಾತ್ರವನ್ನು ಮತ್ತೆ ತೆರೆಮೇಲೆ ತರಲು ನೈಜ ಬಂಗಾರವನ್ನು ಬಳಸಲಾಗುತ್ತಿದೆ ಎಂದು ಬಾಲಿವುಡ್ ಮಾಧ್ಯಮಗಳಲ್ಲಿ ವರದಿಯಾಗಿದೆ. ಗಗನ್ ಅಗರ್ವಾಲ್ ಹಾಗೂ ದಿನೇಶ್ ಶರ್ಮಾ ‘ರಾಮಾಯಣ’ ಚಿತ್ರಕ್ಕೆ ಕಾಸ್ಟ್ಯೂಮ್ ಡಿಸೈನ್ ಮಾಡುತ್ತಿದ್ದಾರೆ. ಎ. ಆರ್ ರಹಮಾನ್ ಸಂಗೀತ ಸಂಯೋಜನೆ ಮಾಡುತ್ತಾರೆ ಎನ್ನುವ ನಿರೀಕ್ಷೆಯಿದೆ.
ಇನ್ನುಳಿದಂತೆ ಲಕ್ಷ್ಮಣನಾಗಿ ರವಿ ದುಬೆ, ಮಂಥರಾ ಆಗಿ ಶಿಬಾ ಚಡ್ಡಾ, ವಿಭೀಷಣ ಆಗಿ ವಿಜಯ್ ಸೇತುಪತಿ, ಕೌಸಲ್ಯ ಆಗಿ ಇಂದಿರಾ ಕೃಷ್ಣನ್ ನಟಿಸುತ್ತಿದ್ದಾರೆ ಎನ್ನಲಾಗ್ತಿದೆ.