ರಾಕಿಂಗ್ ಸ್ಟಾರ್ ಯಶ್ ಇತ್ತೀಚೆಗಷ್ಟೇ ತಮ್ಮ ಮುಂದಿನ ಸಿನಿಮಾ ‘ಟಾಕ್ಸಿಕ್’ ಎಂದು ಘೋಷಣೆ ಮಾಡಿದ್ದಾರೆ.ಆದರೆ ಅದಕ್ಕಿಂತ ಮೊದಲು ಯಶ್ ಬಾಲಿವುಡ್ ಸಿನಿಮಾವೊಂದರಲ್ಲಿ ರಾವಣನ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು.
ಇದನ್ನೂ ಓದಿ ಪ್ರಮೋಷನ್ ಪಡಸಾಲೆಯಲ್ಲಿ ‘ಡೆವಿಲ್’…ಡಿ.29ಕ್ಕೆ ತೆರೆಗೆ ಕಲ್ಯಾಣ್ ರಾಮ್ ಸಿನಿಮಾ…
ರಣಬೀರ್ ಕಪೂರ್ ರಾಮನಾಗಿ ಅಭಿನಯಿಸಲಿರುವ ರಾಮಾಯಣ ಸಿನಿಮಾದಲ್ಲಿ ಯಶ್ ರಾವಣನ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿಯಿತ್ತು.ಈ ಸಿನಿಮಾ ಮುಂದಿನ ವರ್ಷ ಬೇಸಿಗೆಯಲ್ಲಿ ಸೆಟ್ಟೇರಲಿದೆ. ಹೀಗಾಗಿ ಯಶ್ ಏಕಕಾಲಕ್ಕೆ ಈ ಸಿನಿಮಾ ಮತ್ತು ತಮ್ಮ ಟಾಕ್ಸಿಕ್ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಯಿದೆ.
ಇದನ್ನೂ ಓದಿ ‘ಸಲಾರ್ ಪಾರ್ಟ್ 1: ಸೀಸ್‍ಫೈರ್’ ಚಿತ್ರದ ‘ಆಕಾಶ ಗಾಡಿಯ’ ಹಾಡು ಬಿಡುಗಡೆ
ಆದರೆ ಯಶ್ ರಾವಣನ ಪಾತ್ರ ಮಾಡುವ ಬಗ್ಗೆ ಅವರೇ ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಆದರೆ ಈ ಸಿನಿಮಾದಲ್ಲಿ ಸಾಯಿ ಪಲ್ಲವಿ ಸೀತೆಯ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿಯಿದೆ. ಈ ಸಿನಿಮಾದಲ್ಲಿ ಸನ್ನಿ ಲಿಯೋನ್ ಹನುಮಂತನ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿಯಿದೆ. ಆದರೆ ಯಾವುದೂ ಇನ್ನೂ ಅಧಿಕೃತವಾಗಿಲ್ಲ.a