Sandalwood Leading OnlineMedia

‘ಕಾಂತಾರ’ ಸಿನಿಮಾ ಕೂಡ ನನ್ನದೇ ಎಂದ ರಾಕಿಂಗ್ ಸ್ಟಾರ್ ಯಶ್

ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಅಬ್ಬರಿಸಿ ಬಾಕ್ಸಾಫೀಸ್‌ ಲೂಟಿ ಮಾಡುತ್ತಿದೆ. ಇನ್ನೊಂದು ಕಡೆ ಸಿನಿಮಂದಿ ರಾಕಿಂಗ್‌ ಸ್ಟಾರ್‌ ಯಶ್ ಮುಂದಿನ ಸಿನಿಮಾ ಯಾವುದು ಅಂತ ಬಕ ಪಕ್ಷಿಗಳ ಹಾಗೆ ಎದುರು ನೋಡುತ್ತಿದ್ದಾರೆ. ಈ ನಡುವೆ ಯಶ್‌ ಕಾಂತಾರ ಸಿನಿಮಾ ತಮ್ಮದೇ ಎಂದು ಹೇಳಿಕೊಂಡಿದ್ದಾರೆ.

ಈ ಮಧ್ಯೆ ಯಶ್ ಖಾಸಗಿ ಮಾಧ್ಯಮವೊಂದರ ಸಂವಾದದಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಕನ್ನಡ ಚಿತ್ರರಂಗ, ಕಾಂತಾರ ಹಾಗೂ ಕನ್ನಡದ ಸಿನಿಮಾಗಳ ಬಗ್ಗೆಆಡಿದ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

     ಈ ಮಧ್ಯೆ ಯಶ್ ಖಾಸಗಿ ಮಾಧ್ಯಮವೊಂದರ ಸಂವಾದದಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಕನ್ನಡ ಚಿತ್ರರಂಗ, ಕಾಂತಾರ ಹಾಗೂ ಕನ್ನಡದ ಸಿನಿಮಾಗಳ ಬಗ್ಗೆಆಡಿದ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಯಶ್‌ಗೆ ಪ್ರಶ್ನೆ ಮಾಡುವಾಗ ನಿರೂಪಕ  ಕಾಂತಾರ ನಿಮ್ಮ ಸಿನಿಮಾ ಅಲ್ಲ. ಕನ್ನಡ ಸಿನಿಮಾ ಅದೂ ಕೂಡ ಚೆನ್ನಾಗಿ ಪರ್ಫಾರ್ಮ್ ಮಾಡುತ್ತಿದೆಯಲ್ಲ ಎಂಬ ಅರ್ಥದಲ್ಲಿ ಪ್ರಶ್ನೆ ಮಾಡಿದ್ದರು. ಆ ಪ್ರಶ್ನೆಗೆ ಯಶ್ ತಿರುಗೇಟು ನೀಡಿದ್ದರು. “ಸರ್ ಕಾಂತಾರ ಕೂಡ ನನ್ನ ಸಿನಿಮಾನೇ.. ನೀವು ನನ್ನ ಸಿನಿಮಾ ಅಲ್ಲ ಅಂತ ಹೇಳಿದ್ರಿ. ಆದರೆ ಅದು ಕೂಡ ನನ್ನ ಸಿನಿಮಾನೇ. ಕಾಂತಾರ ಸಿನಿಮಾ ಕರ್ನಾಟಕದ ಸಿನಿಮಾ. ಇದು ತುಂಬಾನೇ ಚೆನ್ನಾಗಿ ಗಳಿಕೆ ಮಾಡುತ್ತಿದೆ. ಕರ್ನಾಟಕದಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಎಲ್ಲಾ ಕಡೆಯಲ್ಲೂ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ.” ಎಂದು ಕಾಂತಾರ ಬಗ್ಗೆ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ. ಇದೇ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಅಷ್ಟೇ ಅಲ್ಲ, ಗರುಡ ಗಮನ ವೃಷಭ ವಾಹನ, ಚಾರ್ಲಿ 777, ಕೂಡಾ ನಮ್ಮ ಕನ್ನಡದ ಸಿನಿಮಾಗಳೇ ಎಂದು ಕನ್ನಡಿಗರು ಒಂದೇ ಎನ್ನುವ ಮಂತ್ರ ಜಪಿಸಿದರು. ಸದ್ಯ ಕೆಜಿಎಫ್‌ ಯಶಸ್ಸಿನ ನಂತರ ಯಶ್‌ ಅವರ ಮುಂದಿನ ಸಿನಿಮಾ ಯಾವುದು ಎಂದು ಅನೌನ್ಸ್‌ ಮಾಡಿಲ್ಲ. ರಾಕಿಭಾಯ್‌ ಈ ನಡೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸುತ್ತಿದೆ.

 

 

ಸದ್ಯ ಭಾರತೀಯ ಚಿತ್ರರಂಗದಲ್ಲಿ ‘ಕಾಂತಾರ’ ಹಾಗೂ ಯಶ್ ಬಗ್ಗೆನೇ ಹೆಚ್ಚು ಚರ್ಚೆಯಾಗುತ್ತಿದೆ. ‘ಕೆಜಿಎಫ್ 2’ ಅಂತಹ ಬ್ಲಾಕ್‌ ಬಸ್ಟರ್ ಸಿನಿಮಾ ನೀಡಿದ ಬಳಿಕವೂ ಯಶ್ ಸೈಲೆಂಟ್‌ ಆಗಿದ್ದಾರೆ. ಮುಂದಿನ ಸಿನಿಮಾ ಯಾವುದು ಅನ್ನೋದನ್ನು ಇನ್ನೂ ಅನೌನ್ಸ್ ಮಾಡಿಲ್ಲ.ರಾಕಿ ಯಾವುದಾದ್ರೂ ಬಿಗ್‌ ಪ್ರಾಜೆಕ್ಟ್‌ಗೆ ಕೈ ಹಾಕಿದ್ರಾ..? ಅದಕ್ಕೆ ಇಷ್ಟು ತಡವಾಗುತ್ತಿದೆಯಾ ಅಂತ ಯಶ್‌ ಫ್ಯಾನ್ಸ್‌ ತಲೆಕೆಡಿಸಿಕೊಳ್ಳುತ್ತಿದ್ದಾರೆ.

 

 

Share this post:

Related Posts

To Subscribe to our News Letter.

Translate »