Sandalwood Leading OnlineMedia

ಎಸ್‌.ಎಂ ಕೃಷ್ಣ ಅವರ ನಿವಾಸಕ್ಕೆ ಭೇಟಿ ನೀಡಿದ ಯಶ್- ರಾಧಿಕಾ ಏನಂದ್ರು ಗೊತ್ತಾ?

 

ಕರ್ನಾಟಕದ ಮಾಜಿ ಮುಖ್ಯ ಮಂತ್ರಿ ದಿವಂಗತ ಎಸ್. ಎಂ. ಕೃಷ್ಣ ಇತ್ತೀಚೆಗೆ ವಯೋಸಹಜ ಆರೋಗ್ಯ ಸಮಸ್ಯೆಯಿಂದ ಇಹಲೋಕ ತ್ಯಜಿಸಿದ್ದರು. ಚಿತ್ರರಂಗದ ಗಣ್ಯರು, ರಾಜಕೀಯ ಮುಖಂಡರು ಎಸ್‌.ಎಂ ಕೃಷ್ಣ ಅವರ ಅಂತಿಮ ದರ್ಶನವನ್ನು ಪಡೆದಿದ್ದರು. ಆದರೆ, ಯಶ್ ಆ ಸಮಯದಲ್ಲಿ ಆಗಮಿಸಿರಲಿಲ್ಲ. ಹೀಗಾಗಿ ಇಂದು (ಡಿಸೆಂಬರ್ 23) ಎಸ್‌.ಎಂ. ಕೃಷ್ಣ ನಿವಾಸಕ್ಕೆ ತೆರಳಿ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ಯಶ್ ಪತ್ನಿ ರಾಧಿಕಾ ಪಂಡಿತ್ ಜೊತೆ ಬೆಂಗಳೂರಿನಲ್ಲಿರುವ ಎಸ್‌.ಎಂ.ಕೃಷ್ಣ ಮನೆಯ ಭೇಟಿ ನೀಡಿದ್ದರು. ದಿವಂಗತ ಎಸ್‌.ಎಂ ಕೃಷ್ಣ ಅವರ ಪತ್ನಿ ಪ್ರೇಮಾ ಅವರನ್ನು ಮನೆಯಲ್ಲಿ ಮಾಡಿ ಸಾಂತ್ವಾನ ಹೇಳಿದ್ದಾರೆ. ಈ ವೇಳೆ ಯಶ್ ಹಾಗೂ ರಾಧಿಕಾ ಪಂಡಿತ್ ಮಾಧ್ಯಮದೊಂದಿಗೆ ತಮ್ಮ ಒಡನಾಟ ಹೇಗಿತ್ತು ಅನ್ನೋದನ್ನು ಹಂಚಿಕೊಂಡಿದ್ದಾರೆ.

                                   ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ ಕಾಟೇರನ ದಾಖಲೆ ಮುರಿದು ಬಿಟ್ನಾ ಕಲ್ಕಿ?!

ಸಿನಿಮಾ ತಾರೆಯರು ಹಾಗೂ ರಾಜಕೀಯರು ವ್ಯಕ್ತಿಗಳಿಗೂ ನಂಟು ಇದ್ದೇ ಇರುತ್ತೆ. ಯಶ್ ಕೂಡ ಎಲ್ಲಾ ರಾಜಕೀಯ ಮುಖಂಡರೊಂದಿಗೆ ಒತ್ತಮ ಒಡನಾಟವನ್ನು ಹೊಂದಿದ್ದರು. ಹಾಗೇ ರಾಜಕೀಯ ಮುಖಂಡ ಎಸ್‌. ಎಂ. ಕೃಷ್ಣ ಅವರೊಂದಿಗೆ ಉತ್ತಮ ಒಡನಾಟವನ್ನು ಹೊಂದಿದ್ದರು. ಅವರ ಅಗಲಿದ ದಿನದಂದು ಯಶ್ ಊರಿನಲ್ಲಿ ಇರಲಿಲ್ಲ. ಈ ಕಾರಣಕ್ಕೆ ಇಂದು (ಡಿಸೆಂಬರ್ 23) ಅವರ ಮನೆಗೆ ಬಂದು ಸಾಂತ್ವಾನ ಹೇಳಿದ್ದಾರೆ. “ಎಲ್ಲರಿಗೂ ಗೊತ್ತು ಅವರದ್ದು ಧೀಮಂತ ವ್ಯಕ್ತಿತ್ವ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ನಾನು ಊರಿನಲ್ಲಿ ಇರಲಿಲ್ಲ. ಅವರು ನಮಗೆ ಬಹಳ ಆತ್ಮೀಯರು. ಅವರ ಆಶೀರ್ವಾದ ಯಾವಾಗಲೂ ನನ್ನ ಮೇಲೆ ಇತ್ತು. ನನ್ನ ಎಲ್ಲಾ ಆಗು ಹೋಗುಗಳಲ್ಲಿ ಅವರ ಹಾರೈಕೆ ಇತ್ತು.” ಎಂದು ಎಸ್‌.ಎಂ ಕೃಷ್ಣ ಅವರ ನಿವಾಸಕ್ಕೆ ಭೇಟಿ ನೀಡಿದ ಬಳಿಕ ರಾಕಿಂಗ್ ಸ್ಟಾರ್ ಯಶ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

 

ಇದೇ ವೇಳೆ ಎಸ್‌.ಎಂ ಕೃಷ್ಣ ಅವರದ್ದು ಎಲ್ಲರೊ ಬೆಳೆಯಬೇಕು ಅನ್ನುವ ವ್ಯಕ್ತಿತ್ವ. ಎಲ್ಲರೂ ಒಳ್ಳೆಯದ್ದನ್ನೂ ಬಯಸುತ್ತಾರೆಂದು ಹೇಳಿದ್ದಾರೆ. “ಅವರು ಯಾವಾಗಲೂ ಎಲ್ಲರಿಗೂ ಒಳ್ಳೆಯದ್ದನ್ನು ಬಯಸೋರು. ಅವರು ನಮ್ಮ ಬೆಳವಣಿಗೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಅವರ ಆಲೋಚನೆ ಇದ್ದಿದ್ದೇ ಬೆಳವಣಿಗೆ ಬಗ್ಗೆನೇ. ಯಾವಾಗಲೂ ನಮ್ಮ ಬೆಳವಣಿಗೆ ನೋಡಿ ಹರಸುತ್ತಿದ್ದರು. ಈ ಸಮಯದಲ್ಲಿ ಅವರನ್ನು ಮಿಸ್ ಮಾಡಿಕೊಳ್ಳುತ್ತೇವೆ. ಆಗಾಗ ಭೇಟಿ ಮಾಡುತ್ತಿದ್ದೆ. ಅವರೊಂದಿಗೆ ಎಷ್ಟು ಭೇಟಿ ಮಾಡುತ್ತಿದ್ದೇನೋ ಅದೆಲ್ಲವೂ ನೆನಪಿನಲ್ಲಿ ಉಳಿಯುವಂತಹದ್ದು.” ಎಂದುನಟ ಯಶ್ ಹೇಳಿದ್ದಾರೆ.

 

 

Share this post:

Translate »