ಜೂನ್ 03ಕ್ಕೆ ಅನೌನ್ಸ್ ಆಗುವುದೇ ಯಶ್ ಹೊಸ ಸಿನಿಮಾ??
ರಾಕಿ ಭಾಯ್ ಹೊಸ ಸಿನಿಮಾ ಬಗ್ಗೆ ಸ್ಯಾಂಡಲ್‌ವುಡ್‌ನಲ್ಲಷ್ಟೇ ಅಲ್ಲ. ಇಡೀ ದೇಶದಲ್ಲೇ ಕುತೂಹಲವಿದೆ. ಯಾಕಂದ್ರೆ, ಯಶ್ ಇನ್ನೂ ಹೊಸ ಸಿನಿಮಾ ಬಗ್ಗೆ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಆದರೂ, ಅವರ ಹೊಸ ಚಿತ್ರದ ಬಗ್ಗೆ ಹಲವು ಊಹಾ-ಪೋಹಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇವೆ. ಇಂತಹ ಸುದ್ದಿಗಳಲ್ಲೊಂದು ಯಶ್ ಹೊಸ ಸಿನಿಮಾದ ಲಾಂಚಿಂಗ್ ಡೇಟ್. ಮುಂಬರುವ ಜೂನ್ 03ರಂದು ಯಶ್ ಹೊಸ ಸಿನಿಮಾದ ಡೇಟ್ ಆನೌನ್ಸ್ ಆಗುತ್ತೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿ ಹರಿದಾಡುತ್ತಿದೆ.
“ಕೆಜಿಎಫ್ 2” ವಿಶ್ವದ ಬಾಕ್ಸಾಫೀಸ್‌ನಲ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನು ಮಾಡುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಯಶ್ ಮುಂದಿನ ಸಿನಿಮಾ ಘೋಷಣೆ ಮಾಡುವ ಹೊಸ ಡೇಟ್ ಬಗ್ಗೆನೂ ಚರ್ಚೆಯಾಗುತ್ತಿದೆ. ಹಾಗಿದ್ದರೆ, ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿರುವ ಹೊಸ ಡೇಟ್ ಯಾವುದು? ಯಾವ ಪ್ರೊಡಕ್ಷನ್ ಹೌಸ್ ಯಶ್ ಸಿನಿಮಾವನ್ನು ನಿರ್ಮಾಣ ಮಾಡಬಹುದು ಅನ್ನುವುದರ ಡಿಟೈಲ್ಸ್ ಇಲ್ಲಿದೆ ನೋಡಿ.
ಜೂನ್ 03ಕ್ಕೆ ಅನೌನ್ಸ್ ಆಗುವುದೇಕೆ? ಯಶ್ ಹೊಸ ಸಿನಿಮಾ ಜೂನ್ 03ರಂದು ಅನೌನ್ಸ್ ಆಗುತ್ತೆ ಎಂದು ಗುಲ್ಲೆದ್ದಿದೆ. ಆದರೆ, ಈ ಬಗ್ಗೆ ಕೂಡ ಯಶ್ ಆಗಲಿ ಅಥವಾ ಪ್ರೊಡಕ್ಷನ್ ಹೌಸ್ ಆಗಲಿ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಕಳೆದ ಕೆಲವು ದಿನಗಳಿಂದ ‘ಕೆಜಿಎಫ್ 2’ 50 ಪೂರೈಸಿದ ಬಳಿಕ ಯಶ್ ಹೊಸ ಸಿನಿಮಾ ಅನೌನ್ಸ್ ಆಗುತ್ತೆ ಎನ್ನುವ ಮಾಹಿತಿ ಹೊರಬಿದ್ದಿತ್ತು. ಈ ಲೆಕ್ಕಾಚಾರದ ಪ್ರಕಾರ, ಏಪ್ರಿಲ್ 14ರಂದು ರಿಲೀಸ್ ಆಗಿದ್ದ ಸಿನಿಮಾ ಜೂನ್ 02ರಂದು 50 ದಿನಗಳನ್ನು ಪೂರೈಸಲಿದೆ.
ಈ ಕಾರಣಕ್ಕೆ 50 ದಿನದ ಸಂಭ್ರಮದ ಬಳಿಕ ಹೊಸ ಸಿನಿಮಾ ಅನೌನ್ಸ್ ಆಗಲಿದೆ ಎಂದು ಹೇಳಲಾಗುತ್ತಿದೆ. ಮುಂದಿನ ಸಿನಿಮಾವನ್ನು ನಿರ್ಮಾಣ ಮಾಡುವವರು ಯಾರು? ಎಂಬ ಪ್ರಶ್ನೆ ಕೂಡ ಅಷ್ಟೇ ಚರ್ಚೆಯಲ್ಲಿದೆ. ಈಗಾಗಲೇ ಎರಡು ಪ್ರೊಡಕ್ಷನ್ ಹೌಸ್‌ಗಳ ಹೆಸರು ರೇಸ್‌ನಲ್ಲಿದೆ. ಅದರಲ್ಲೊಂದು ಕೆವಿಎನ್ ಪ್ರೊಡಕ್ಷನ್ಸ್. ಇನ್ನೊಂದು ಹೊಂಬಾಳೆ ಫಿಲ್ಮ್ಸ್. ಅಸಲಿಗೆ ಈ ಎರಡೂ ಸಂಸ್ಥೆಗಳು ಕೂಡ ಇನ್ನೂ ಸೈಲೆಂಟಾಗಿಯೇ ಇದೆ. ಏನೇ ಇದ್ದರೂ, ಯಶ್ ಮುಂದಿನ ನಡೆಯೇನು? ಅನ್ನೋದು ಕನ್ನಡ ಚಿತ್ರರಂಗಕ್ಕಷ್ಟೇ ಅಲ್ಲ. ಇಡೀ ಭಾರತೀಯ ಚಿತ್ರಕ್ಕೆ ದೊಡ್ಡ ಪ್ರಶ್ನೆಯಾಗಿ ಕಾಡುತ್ತಲೇ ಇದೆ.