ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಪೌರಾಣಿಕ ಚಿತ್ರ ‘ರಾಮಾಯಣ’ ಇತ್ತೀಚೆಗಷ್ಟೇ ಸೆಟ್ಟೇರಿದೆ. ಸಿನಿಮಾ ಬಗ್ಗೆ ದಿನಕ್ಕೊಂದು ಮಾಹಿತಿ ಹೊರಬೀಳುತ್ತಿದೆ. ಅಂತೆಕಂತೆಗಳು ಜೋರಾಗಿವೆ. ಆದರೆ ಚಿತ್ರತಂಡ ಮಾತ್ರ ಮೌನ ಮುಂದುವರಿಸಿದೆ. ಇದೇ ತಿಂಗಳ ರಾಮನವಮಿ ಸಂದರ್ಭದಲ್ಲಿ ಸಿನಿಮಾ ಘೋಷಣೆಯಾಗುವ ಸಾಧ್ಯತೆಗಳಿದ್ದು, ಏಪ್ರಿಲ್ 17ರಂದೇ ಎಲ್ಲದಕ್ಕೂ ಅಧಿಕೃತ ಮಾಹಿತಿ ಸಿಗಲಿದೆ.
ರಾಕಿಂಗ್ ಸ್ಟಾರ್ ಯಶ್ ಈಗ ಟಾಕ್ಸಿಕ್ ಸಿನಿಮಾ ಶೂಟಿಂಗ್ ಹೋಗೋ ತಯಾರಿಯಲ್ಲಿದ್ದಾರೆ. ಏಪ್ರಿಲ್ 15ರ ನಂತರ ಬೆಂಗಳೂರಿನಲ್ಲೇ ಟಾಕ್ಸಿಕ್ ಚಿತ್ರೀಕರಣ ಆರಂಭ ಆಗುತ್ತೆ. ರಾಕಿಂಗ್ ಸ್ಟಾರ್ ಯಶ್ ಬಾಲಿವುಡ್ನಲ್ಲಿ ಸಿದ್ಧವಾಗುತ್ತಿರೋ ರಾಮಾಯಣ ಸಿನಿಮಾದಲ್ಲಿ ನಟಿಸುತ್ತಾರೋ ಇಲ್ಲವೋ ಇನ್ನು ಪಕ್ಕಾ ಸುದ್ದಿ ಬಂದಿಲ್ಲ. ಆದ್ರೆ ಯಶ್ ಹೆಸ್ರು ಮಾತ್ರ ರಾಮಾಯಣದಲ್ಲಿ ಬರ್ತಾನೆ ಇದೆ. ಯಶ್ ರಾವಣ ಆಗುತ್ತಾರೆ ಅಂತ ಕಾಯುತ್ತಿರೋ ಯಶ್ ಫ್ಯಾನ್ಸ್ಗೆ ಮತ್ತೊಂದು ಬಿಗ್ ನ್ಯೂಸ್ ಸಿಕ್ಕಿದೆ. ರಾಮಾಯಣದಲ್ಲಿ ಯಶ್ ರಾವಣ ಆಗೋಕೆ 80 ಕೋಟಿ ಹಣವನ್ನ ಆಫರ್ ಮಾಡಿದ್ದಾರಂತೆ. ಆದ್ರೆ ಯಶ್ ಮಾತ್ರ ರಾಮಾಯಣದ ಸಂಭಾವನೆ ಬದಲು ಬೇರೆಯದ್ದನ್ನೇ ಕೇಳಿದ್ದಾರಂತೆ. ಯಶ್ ಈಗ ಪ್ಯಾನ್ ಇಂಡಿಯಾ ಸ್ಟಾರ್ ಮಾತ್ರವಲ್ಲ. ಪ್ಯಾನ್ ಇಂಡಿಯಾ ಪ್ರೊಡ್ಯೂಸರ್ ಕೂಡ ಹೌದು. ಟಾಕ್ಸಿಕ್ ಸಿನಿಮಾದಲ್ಲಿ ಯಶ್ ನಟನೆ ಜೊತೆ Monster Mind Creation ಮೂಲಕ ಬಂಡವಾಳವನ್ನೂ ಹೂಡುತ್ತಿದ್ದಾರೆ.
ಇದನ್ನೂ ಓದಿ : “My Weakness is – My thoughts”- -Jayaram Karthik (JK) : Chittara Exclusive
ಇದೀಗ ಹಿಂದಿಯ ರಾಮಾಯಣದಲ್ಲಿ ನಟಿಸೋ ಯಶ್ ಆ ಸಿನಿಮಾದ ನಟನೆಗೆ 80 ಕೋಟಿ ಸಂಭಾವನೆ ಬೇಡ. ನಿರ್ಮಾಣದ ಪಾಲುದಾರಿಕೆ ಕೊಡಿ ಅಂತ ಕೇಳಿದ್ದಾರಂತೆ. ಈ ಬಗ್ಗೆ ಈ ಬಾಲಿವುಡ್ನಲ್ಲಿ ಸುದ್ದಿ ಹರಿದಾಡುತ್ತಿದೆ. ನಿತೀಶ್ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾದಲ್ಲಿ ರಾಮನಾಗಿ ರಣಬೀರ್ ಕಪೂರ್ ನಟಿಸುತ್ತಿದ್ದಾರೆ. ವಿಶೇಷ ಅಂದ್ರೆ ಈ ಸಿನಿಮಾದಲ್ಲಿ ರಣಬೀರ್ ಕಪೂರ್ಗೆ 70 ಕೋಟಿ ಸಂಭಾವನೆ ಕೊಡುತ್ತಿದ್ದಾರೆ. ಆದ್ರೆ ರಾವಣನ ರೋಲ್ ಮಾಡೋಕೆ ಯಶ್ಗೆ ಆಫರ್ ಮಾಡಿದ್ದು 80 ಕೋಟಿ. ಅಲ್ಲಿಗೆ ರಾಮನಿಗಿಂತ ರಾವಣನ ರೋಲ್ಗೆ ಡಿಮ್ಯಾಂಡ್ ಹೆಚ್ಚಿದೆ ಅದ್ಕೊಳ್ಳಬೇಡಿ. ಇಲ್ಲಿ ರಾಣಬೀರ್ ಕಪೂರ್ಗಿಂತ ಯಶ್ಗೆ ಡಿಮ್ಯಾಂಡ್ ಅನ್ನೋದು ಸತ್ಯ. ಇದಲ್ಲವೇ ನಮ್ಮ ಕನ್ನಡ ಸ್ಟಾರ್ ತಾಕತ್ತು.
ಇದನ್ನೂ ಓದಿ :ಕನ್ನಡ ಮತ್ತು ಇಂಗ್ಲೀಷ್‌ನಲ್ಲಿ ಕೆಂಪೇಗೌಡರ ಕಥೆ; ಆಕ್ಷನ್ ಕಟ್ ಹೇಳ್ತಿದ್ದಾರೆ ದಿನೇಶ್ ಬಾಬು
ಈವರೆಗೆ, ರಾವಣನ ಪಾತ್ರವನ್ನು ಯಶ್ ನಿರ್ವಹಿಸಲಿದ್ದಾರೆ, ಇದಕ್ಕಾಗಿ ದೊಡ್ಡ ಮಟ್ಟದ ಸಂಭಾವನೆ ಪಡೆಯಲಿದ್ದಾರೆ ಎಂದೆಲ್ಲಾ ಹೇಳಲಾಗಿತ್ತು. ಇದೀಗ ಯಶ್ ಸಹ ನಿರ್ಮಾಪಕರಾಗಿಯೂ ಕೆಲಸ ಮಾಡಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ರಾವಣನ ಪಾತ್ರ ನಿರ್ವಹಿಸುವ ಜತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ನಿರ್ವಹಿಸಲಿದ್ದಾರೋ ಅಥವಾ ಕೇವಲ ಸಹ ನಿರ್ಮಾಪಕರಾಗಿ ಚಿತ್ರತಂಡದ ಭಾಗವಾಗಲಿದ್ದಾರೋ ಎಂಬುದನ್ನು ಚಿತ್ರತಂಡ ಇನ್ನಷ್ಟೇ ಬಹಿರಂಗಪಡಿಸಲಬೇಕಿದೆ.