ಇವತ್ತು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಯಶ್ ಅವರ ಮನೆ ಮುಂದೆ ಜಮಾಯಿಸಿದ್ದರು. ಅಪಾರ್ಟ್‌ಮೆಂಟ್ ಎದುರು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ನೆಚ್ಚಿನ ನಟನನ್ನು ನೋಡಲು ಕಾಯುತ್ತಿದ್ದರು. ಅವರಿಗೆ ರಾಕಿಂಗ್ ಸ್ಟಾರ್ ನಿರಾಸೆ ಮಾಡಲಿಲ್ಲ. ಈ ಬಾರಿ ನಟ ಯಶ್ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಹುಟ್ಟುಹಬ್ಬದ ದಿನ ನೆಚ್ಚಿನ ನಟನನ್ನು ನೋಡಿ ಕೈ ಕುಲುಕಿ ಸಿಹಿ ತಿನ್ನಿಸಿ, ಉಡುಗೊರೆ ನೀಡಿ ಶುಭ ಹಾರೈಸಬೇಕು ಎನ್ನುವ ಅಭಿಮಾನಿಗಳ ಆಸೆ ಈಡೇರಲೇ ಇಲ್ಲ. ಅಪ್ಪು ಅಗಲಿಕೆಯ ಹಿನ್ನೆಲೆಯಲ್ಲಿ ಕಳೆದ ವರ್ಷ ಯಶ್ ಅಭಿಮಾನಿಗಳೊಟ್ಟಿಗೆ ಹುಟ್ಟುಹಬ್ಬ ಆಚರಿಸಿರಲಿಲ್ಲ. ಅದಕ್ಕಿಂತ 1 ವರ್ಷ ಹಿಂದೆ ಕೊರೋನಾ ಆ ಸಂಭ್ರಮವನ್ನು ಕಿತ್ತುಕೊಂಡಿತ್ತು. ಮುಂದಿನ ಸಿನಿಮಾ ಅಪ್‌ಡೇಟ್ ಇಲ್ಲದೇ ನಿಮ್ಮ ಮುಂದೆ ನಿಲ್ಲಲು ಮನಸ್ಸಾಗುತ್ತಿಲ್ಲ ಎನ್ನುವ ಅರ್ಥದಲ್ಲಿ ಯಶ್ ಈ ವರ್ಷ ಬಹಿರಂಗ ಪತ್ರ ಬರೆದಿದ್ದರು.
ಡೆತ್ ನೋಟ್ ಬರೆದಿಟ್ಟು ಜಗತ್ತಿಗೆ ವಿದಾಯ ಹೇಳಲು ನಿರ್ಧರಿಸಿದ್ದ ಕಿರಿಕ್ ಕೀರ್ತಿ !
ಯಶ್19 ಅಪ್‌ಡೇಟ್ ಯಾವಾಗ ಎಂದು ಕೇಳಿ ಕೇಳಿ ಅಭಿಮಾನಿಗಳು ಸುಸ್ತಾಗಿದ್ದಾರೆ. ‘KGF’- 2 ಸಿನಿಮಾ ರಿಲೀಸ್ ಆಗಿ 9 ತಿಂಗಳು ಕಳೆದಿದೆ. ಆದರೆ ಯಶ್ ಮುಂದಿನ ಸಿನಿಮಾ ಯಾವ್ದು ಎನ್ನುವ ಸುಳಿವು ಮಾತ್ರ ಸಿಕ್ಕಿಲ್ಲ. ಹುಟ್ಟುಹಬ್ಬದ ದಿನವೂ ಕೈಗೆ ಸಿಗದ ಯಶ್, ಇವತ್ತು ಮನೆ ಬಳಿ ಸಿಗುತ್ತಾರೆ ಎನ್ನುವ ಸುದ್ದಿ ತಿಳಿದು ಅಭಿಮಾನಿಗಳು ಜಮಾಯಿಸಿದ್ದರು. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳ ಬೆಳಗ್ಗೆಯಿಂದಲೇ ಪ್ರೆಸ್ಟೀಜ್ ಅಪಾರ್ಟ್‌ಮೆಂಟ್ ಬಳಿ ಕಾದು ನಿಂತಿದ್ದರು. ಸಾಕಷ್ಟು ಜನ ಮಹಿಳಾ ಅಭಿಮಾನಿಗಳು ಕೂಡ ಬಂದಿದ್ದರು. ಅಭಿಮಾನಿಗಳಿಗೆ ನಿರಾಸೆ ಮಾಡದೇ ಯಶ್ ಎಲ್ಲರನ್ನು ಭೇಟಿ ಮಾಡಿ ಮಾತನಾಡಿಸಿದ್ದರು. ಸರತಿ ಸಾಲಿನಲ್ಲಿ ಬಂದು ಅಭಿಮಾನಿಗಳು ಕೈ ಕುಲುಕಿ ನೆಚ್ಚಿನ ನಟನ ಜೊತೆ ಫೋಟೊ ಕ್ಲಿಕ್ಕಿಸಿಕೊಂಡರು.
ಶೀಘ್ರದಲ್ಲೇ ಕನ್ನಡಕ್ಕೆ ದುಲ್ಕರ್ ಸಲ್ಮಾನ್ ?
ಭಾರೀ ಸಂಖ್ಯೆಯಲ್ಲಿ ಆಗಮಿಸಿದ್ದ ಅಭಿಮಾನಿಗಳು ಬಗೆಬಗೆಯ ಉಡುಗೊರೆ ತಂದಿದ್ದರು. ಸರಳ ಸಂತ ಸಿದ್ದೇಶ್ವರ ಸ್ವಾಮಿಜಿ ಫೋಟೊ ಸೇರಿದಂತೆ ನಟ ಯಶ್ ಅವರ ದೊಡ್ಡ ದೊಡ್ಡ ಫೋಟೊಗಳನ್ನು ಹೊತ್ತು ಅಭಿಮಾನಿಗಳು ಬಂದಿದ್ದರು. ಹಾರ, ಶಾಲು ಹಾಕಿ ನೆಚ್ಚಿನ ನಟನನ್ನು ಸನ್ಮಾನಿಸಿದರು. ಅದಕ್ಕೆ ಸಂಬಂಧಿಸಿದ ಫೋಟೊಗಳು, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇತ್ತೀಚೆಗೆ ನಟ ಯಶ್ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಬಹಳ ದಿನಗಳ ನಂತರ ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ. ಕಾಲೇಜು ಯುವಕ, ಯುವತಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಯಶ್ ಭೇಟಿಗೆ ಬಂದಿದ್ದರು.