Left Ad
Yash 19: 'ಯಶ್' ಕಡೆಯಿಂದ ಮುಂದಿನ ಸಿನಿಮಾ 'ಟೈಟಲ್' ಬಗ್ಗೆ ಬಂತು ಅಧಿಕೃತ ಮಾಹಿತಿ - Chittara news
# Tags

Yash 19: ‘ಯಶ್’ ಕಡೆಯಿಂದ ಮುಂದಿನ ಸಿನಿಮಾ ‘ಟೈಟಲ್’ ಬಗ್ಗೆ ಬಂತು ಅಧಿಕೃತ ಮಾಹಿತಿ

ಬೆಂಗಳೂರು, ಡಿಸೆಂಬರ್ 04: ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಕನ್ನಡದ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ನಟ ಯಶ್ (Actor Yash) ಅವರ ಮುಂದಿನ ಸಿನಿಮಾ (Yash19) ಕುರಿತು ಕೋಟ್ಯಂತರ ಅಭಿಮಾನಿಗಳು ವರ್ಷಗಳಿಂದಲೂ ಕಾದು ಕುಳಿತಿದ್ದರು. ಇದೀಗ ಅವರಿಗೆ ಖುಷಿ ಸುದ್ದಿಯೊಂದನ್ನು ಸ್ವತಃ ಯಶ್ ಅವರೇ ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ  ನವೆಂಬರ್ ಕೊನೆಯಲ್ಲಿ ರಾಗಿಣಿ “ರಾಜ್ಯೋತ್ಸವ”‌ . ಹಾಡು ಬಿಡುಗಡೆ ಮಾಡಿ ಶುಭ ಹಾರೈಸಿದ ಶ್ರೀಮುರಳಿ

ಕೆಜಿಎಫ್ (KGF film)ಮತ್ತು ಕೆಜಿಎಫ್ 2 (KGF 2) ಸಿನಿಮಾ ಮೂಲಕ ದೇಶ ಒಳಗೂ ಮತ್ತು ಹೊರಗು ಭಾರಿ ಸದ್ದು ಮಾಡಿದ್ದ ಯಶ್ ಅವರು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಕೇವಲ ಕನ್ನಡ ಮಾತ್ರವಲ್ಲದೇ, ಹಿಂದಿ, ತೆಲುಗು, ತಮಿಳು ಸೇರಿದಂತೆ ವಿವಿಧ ಭಾಷೆಗಳ ಅಭಿಮಾನಿಗಳಿದ್ದು, ಅವರದ್ದೆಲ್ಲ ಒಂದೇ ಪ್ರಶ್ನೆ ಎಂದರೆ, ಯಶ್ ಅವರ ಮುಂದಿನ ಚಿತ್ರ ಯಾವುದು, ಹೇಗಿರಲಿದೆ, ಸಿನಿಮಾದ ಹೆಸರೇನು? ಎಂಬುದಾಗಿದೆ.

ಯಶ್ ಮುಂದಿನ 19ನೇ ಸಿನಿಮಾ ಯಾವುದು? ಎಂಬುದರ ಬಗ್ಗೆ ಈವರೆಗೆ ಒಂದು ಒಂದು ಅಧಿಕೃತ ಮಾಹಿತಿ ಸಹ ಸಿಕ್ಕಿರಲಿಲ್ಲ. ಆದರೆ ತೆರೆಮರೆಯಲ್ಲಿ ಯಶ್ ಭರ್ಜರಿ ತಯಾರಿ ನಡೆಸಿದ್ದಾರೆಂಬುದರ ಬಗ್ಗೆ ಅವರೆ ಹಿಂಟ್ ಬಿಟ್ಟುಕೊಟ್ಟಿದ್ದರು. ಇದೀಗ ಯಶ್ ಅವರೇ ಅಧಿಕೃತ ಮಾಹಿತಿಯನ್ನು ಹೊರ ಹಾಕಿದ್ದಾರೆ. ಇದು ತುದಿಗಾಲಲ್ಲಿ ನಿಂತು ಅಪ್ಡೇಟ್‌ಗಾಗಿ ಕಾಯುತ್ತಿದ್ದ ಅವರ ಅಭಿಮಾನಿಗಳ ಸಂತಸ ಮತ್ತು ನಿರೀಕ್ಷೆಯನ್ನು ನೂರ್ಮಡಿ ಹೆಚ್ಚಿಸಿದೆ.

ಇದನ್ನೂ ಓದಿ  ಸದ್ದಿಲ್ಲದೆ ಮುಕ್ತಾಯವಾಗಿದೆ “ಕಾಂಗರೂ” ಚಿತ್ರದ ಚಿತ್ರೀಕರಣ ಇದು ಆದಿತ್ಯ ಅಭಿನಯದ ಚಿತ್ರ.

ಡಿ.8ಕ್ಕೆ ಯಶ್‌19 ಸಿನಿಮಾ ಟೈಟಲ್ ಘೋಷಣೆ ಕೆಜಿಎಫ್‌ 2 ಕಳೆದ ವರ್ಷ 2022 ಏಪ್ರೀಲ್ 14ರಂದು ರೀಲಿಸ್ ಆಗಿತ್ತು. ಅದಾದ ಬಳಿಕ ಅವರ ಮುಂದಿನ ಸಿನಿಮಾದ ಯಾವ ಅಪ್ಡೇಟ್ ಸಿಕ್ಕಿರಲಿಲ್ಲ. ಇಂದು ಸೋಮವಾರ X ನಲ್ಲಿ ಟ್ವೀಟ್ ಮಾಡಿರುವ ಯಶ್ ಅವರು ತಮ್ಮ ಮುಂದಿನ 19ನೇ ಸಿನಿಮಾದ ಟೈಟಲ್ (Yash 19 title announcement) ಅನ್ನು ಇದೇ ಡಿಸೆಂಬರ್ 8ರಂದು 9.55 am ಗೆ ಘೋಷಣೆ ಮಾಡುವುದಾಗಿ ಮಾಹಿತಿ ನೀಡಿದ್ದಾರೆ.

 

ಇದನ್ನೂ ಓದಿ  ಮಸ್ತ್ ಆಗಿದೆ “ಮಾಫಿಯಾ” ಚಿತ್ರದ ಟೀಸರ್ .

ಈ ಮೂಲಕ ಕೋಟ್ಯಂತರ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ಅಧಿಕೃತಪಡಿಸಿರುವ ಯಶ್, ಭಾನುವಾರಷ್ಟೇ ತಮ್ಮ ಇನ್ಸ್‌ಟಾಗ್ರಾಮ್ ಖಾತೆಯ ಡಿಪಿ ಬದಲಾಯಿಸಿದ್ದರು. ಇಂಗ್ಲಿಷ್‌ನ ‘ಲೋಡಿಂಗ್’ ಅಕ್ಷರದ ಫೋಟೋ ಹಾಕಿಕೊಳ್ಳುವ ಮೂಲಕ ತಮ್ಮ ಮುಂದಿನ ಅಪ್ಡೇಟ್ ಕುರಿತು ಹಿಂಟ್ ತಿಳಿಸಿದ್ದರು.

ಇದನ್ನೂ ಓದಿ  “ರೋಜಿ” ಚಿತ್ರದಲ್ಲಿ ಶ್ರೀನಗರ ಕಿಟ್ಟಿ* . “ಹುಡುಗರು” ಚಿತ್ರದ ನಂತರ ಮತ್ತೆ ಈ ಚಿತ್ರದಲ್ಲಿ ಯೋಗಿ – ಶ್ರೀನಗರ ಕಿಟ್ಟಿ .

ಇದೀಗ ಮುಂದಿನ ಸಿನಿಮಾದ ಟೈಟಲ್ ಘೋಷಿಸಿಸುವುದಾಗಿ ಪೋಸ್ಟ್ ಹಾಕಿದ್ದಾರೆ. ಪೋಸ್ಟ್ ಹಾಕಿದ ಕೇವಲ 24 ನಿಮಿಷಗಳಲ್ಲಿ ಸುಮಾರು 2,600 ಜನ ರೀಪೋಸ್ಟ್ ಮಾಡಿದ್ದಾರೆ. ಸದ್ಯ ಯಶ್ ಅವರು ಮುಂದಿನ ಸಿನಿಮಾ ಅನ್ನು ಕೆವಿಎನ್ ಪ್ರೊಡಕ್ಷನ್ ಅವರೊಂದಿಗೆ ಮಾಡುತ್ತಿದ್ದಾರೆ. ಅದಕ್ಕಾಗಿ ಶ್ರೀಲಂಕಾ ಸೇರಿದಂತೆ ಅನೇಕ ಕಡೆ ಲೊಕೇಷನ್ ಹುಡುಕಾಟ ನಡೆಸಿದ್ದರು ಎಂಬ ಮಾತುಗಳು ಕೇಳಿ ಬಂದಿವೆ. ಸದ್ಯ ಡಿಸೆಂಬರ್ 8ರಂದು ಯಶ್ ಅವರು ಮುಂದಿನ ಸಿನಿಮಾದ ಟೈಟಲ್ ಘೋಷಣೆ ಆಗಲಿದೆ. ಆಗ ಯಶ್ ಅವರೇ ಸಿನಿಮಾದ ನಿರ್ದೇಶಕರು, ಬಂಡವಾಳ, ಚಿತ್ರೀಕರಣ, ಸ್ಟಾರ್ ಕಾಸ್ಟ್ ಕುರಿತು ಅಧಿಕೃತ ಮಾಹಿತಿ ನೀಡುವ ಸಾಧ್ಯತೆ ಇದೆ. ಹೊಸತನ್ನು ಆಲೋಚಿಸುವ ‘ಯಶ್’ ಪ್ರತಿ ಬಾರಿಯೂ ಕಥೆ, ಸಂಭಾಷಣೆ, ತಾಂತ್ರಿಕವಾಗಿಯು ಹೊಸ ರೀತಿಯಲ್ಲಿ ಆಲೋಚಿಸುವ ಯಶ್ ಅವರು ಕೆಜಿಎಫ್ ಎರಡು ಸಿನಿಮಾಗಳ ಬಳಿಕ ದೊಡ್ಡ ಸ್ಟಾರ್ ನಟರಾಗಿ ಬೆಳೆದಿದ್ದಾರೆ. ಅವರೇ ಹೇಳಿರುವಂತೆ ತಮ್ಮ ಮೇಲೆ ಜವಾಬ್ದಾರಿ ಹೆಚ್ಚಿದ್ದು, ಅತ್ಯುತ್ತಮ ಸಿನಿಮಾ ಕೊಡುವ ಭರವಸೆ ನೀಡಿದ್ದರು. ‘ಮನೆ ಕಟ್ಟಲು ಕಡಿಮೆ ಸಮಯ ಬೇಕು-ಅರಮನೆ ಕಟ್ಟು ಹೆಚ್ಚು ಕಾಲ ಹಿಡಿಯುತ್ತದೆ ಎಂದಿದ್ದರು. ನಾನೇ ಹೇಳುವವರೆಗೂ ಊಹಾಪೋಹಗಳನ್ನು ನಂಬಬೇಡಿ ಅಂತಲೂ ತಿಳಿಸಿದ್ದರು. ಇದೀಗ ಅವರೇ ಟೈಟಲ್ ಘೋಷಣೆಯ ಅಧಿಕೃತ ಮಾಹಿತಿ ಬಹಿರಂಗಪಡಿಸಿದ್ದಾರೆ.

Spread the love
Translate »
Right Ad