Sandalwood Leading OnlineMedia

ಯಮುನಾ ಶ್ರೀನಿಧಿಗೆ ಅಜ್ಜಿ ಎಂದ ಯುವತಿ : ಹೆಣ್ಣಾಗಿ ಹೀಗೆಲ್ಲಾ ಮಾತಾಡೋದು ಸರಿನಾ ಅಂತಿದ್ದಾರೆ ನೆಟ್ಟಿಗರು..!

ಬಿಗ್‌ ಬಾಸ್‌ ಸೀಸನ್‌ 11 ಸಾಕಷ್ಟು ವಿಚಾರಗಳಿಗೆ ಆರಂಭದಿಂದಾನೂ ಸದ್ದು ಮಾಡುತ್ತಿದೆ. ಕಿಚ್ಚ ಸುದೀಪ್‌ ನಿರೂಪಣೆಯನ್ನು ಮಾಡುವುದೇ ಇಲ್ಲ ಎಂಬಂತೆ ಸುದ್ದಿಯಾಗಿತ್ತು. ಆದರೆ ಅದೆಲ್ಲಾ ಸಮಸ್ಯೆಗಳು ನಿವಾರಣೆಯಾಗಿ ಬಿಗ್‌ ಬಾಸ್‌ ವೇದಿಕೆ ಮೇಲೆ ಸುದೀಪ್‌ ಅವರೇ ಬಂದ್ರು. ಎಲ್ಲವೂ ಸರಿಯಾಗಿತ್ತು ಎನ್ನುವಾಗಲೇ ಸುದೀಪ್‌ ಬಿಗ್‌ ಬಾಸ್‌ಗೆ ವಿದಾಯ ಘೋಷಿಸಿದ್ದಾರೆ. ಇದೊಂದು ಆಘಾತಕಾರಿ ಸುದ್ದಿಯಾದರೆ ಬಿಗ್‌ ಬಾಸ್‌ ಮನೆಯಿಂದ ಬಂದಂತ ಯಮುನಾ ಅವರನ್ನು ಮತ್ತೊಂದು ಹೆಣ್ಣು ತೀರಾ ಕೆಳಮಟ್ಟಕ್ಕೆ ಮಾತನಾಡಿರುವುದು ಮತ್ತೊಂದು ಆಘಾತಕಾರಿ ವಿಚಾರವಾಗಿದೆ.

ಯಮುನಾ ಶ್ರೀನಿಧಯವರನ್ನು ನೋಡಿದಾಗ ಅವರ ವಯಸ್ಸಿನ ವಿಚಾರ ಗಮನಕ್ಕೆ ಬರುವುದಿಲ್ಲ. ಅದು ಸಹಜ ಕೂಡ. ಯಾಕಂದ್ರೆ ಅವರ ಏಜ್‌ ಅವರ ಬ್ಯೂಟಿ, ಫಿಟ್ನೆಸ್‌ ಮೆಂಟೈನ್‌ ಮಾಡಿರುವುದರಲ್ಲಿ ಕಾಣಿಸುವುದಿಲ್ಲ. ಅವರನ್ನ ಸೋಷಿಯಲ್‌ ಮೀಡಿಯಾದಲ್ಲಿ ಅಜ್ಜಿ ಎಂದೇ ಕೆಲವರು ಮಾತನಾಡುತ್ತಿದ್ದಾರೆ. ಆದರೆ ಈ ವಯಸ್ಸಿನಲ್ಲೂ ತಮ್ಮ ಬ್ಯೂಟಿಯನ್ನು ಹಾಗೇ ಕಾಪಾಡಿಕೊಂಡು ಬಂದಿರುವುದು ನಿಜಕ್ಕೂ ಮಹಿಳೆಯರಿಗೆ ಸ್ಪೂರ್ತಿ ಹಾಗೂ ಸಂತಸದ ವಿಚಾರವೇ ಸರಿ.

ಈ ಬಾರಿಯ ಸೀಸನ್‌ನಲ್ಲಿ ಯಮುನಾ ಶ್ರೀನಿಧಿ ಅವರು ಮನೆಯೊಳಗೆ ಎಂಟ್ರಿಯಾಗಿದ್ದರು. ಟಾಸ್ಕ್‌ ವಿಚಾರ ಬಂದಾಗ, ಮನೆಯೊಳಗೆ ಆಕ್ಟೀವ್‌ ಆಗಿರುವ ವಿಚಾರಕ್ಕೆ ಬಂದಾಗಲೂ ತಮಗೆ ಬೆಸ್ಟ್‌ ಎನಿಸುವುದನ್ನೇ ಯಮುನಾ ನೀಡಿದ್ದಾರೆ. ಆದರೆ ವೋಟ್‌ ಹೆಚ್ಚಾಗಿ ಬಾರದೆ ಇದ್ದ ಕಾರಣ ಮನೆಯಿಂದ ಮೊದಲ ವಾರದಲ್ಲಿಯೇ ಬಂದಿದ್ದಾರೆ. ಆದರೆ ಅವರ ಫೋಟೋ, ವಿಡಿಯೋಗಳಿಗೆ ಮಹಿಳೆಯರೇ ಕೆಟ್ಟದಾಗಿ ಕಮೆಂಟ್‌ ಹಾಕುತ್ತಿರುವುದು ನಿಜಕ್ಕೂ ಆಶ್ಚರ್ಯ. ಈಗಿನ ಕಾಲದಲ್ಲೂ ಈ ರೀತಿಯ ಮನಸ್ಥಿತಿಗಳು ಇರುವುದಕ್ಕೆ ಸಾಧ್ಯವ ಎನಿಸುತ್ತಿದೆ. ʻಅಜ್ಜಿ ನಿನಗ್ಯಾಕೆ ಬೇಕು ಬಿಗ್‌ ಬಾಸ್‌, ಯಾವ್ಯಾವ ವಯಸ್ಸಲ್ಲಿ ಏನೇನು ಮಾಡಬೇಕೋ ಅದನ್ನೇ ಮಾಡಬೇಕುʼ ಹೀಗೆ ಅವರ ವಯಸ್ಸಿನ ಬಗ್ಗೆಯೇ ಕೆಟ್ಟದಾಗಿ ಮಾತನಾಡುತ್ತಿದ್ದಾರೆ.

ಟ್ರೋಲರ್ಸ್‌ ಆಗಲಿ, ಕಮೆಂಟ್‌ ಮಾಡುವ ನೆಟ್ಟಿಗರಿಗೆ ಆಗಲಿ ಸುಲಭವಾಗಿ ಸಿಗುವುದು ಸೆಲೆಬ್ರಿಟಿಗಳೇ. ಆದರೆ ಆ ಸೆಲೆಬ್ರಿಟಿಗಳಿಗೂ ಒಂದು ಮನಸ್ಸಿರುತ್ತೆ. ಆ ಮನಸ್ಸಿಗೂ ಈ ರೀತಿಯ ಮಾತುಗಳು ನೋವು ಕೊಡದೆ ಇರುವುದಕ್ಕೆ ಸಾಧ್ಯವೇ ಇಲ್ಲ. ನೋವಾದರೂ ಕೂಡ ಯಮುನಾ ಶ್ರೀನಿಧ ಅವರು ಹ್ಯಾಪಿಯಾಗಿದ್ದಾರೆ. ಜೀವನವನ್ನು ಎಷ್ಟು ಕಾಲ ಜೀವಿಸುತ್ತೀರಿ ಎನ್ನುವುದಕ್ಕಿಂತ ಹೇಗೆ ಜೀವಿಸುತ್ತೀರಿ ಎಂಬುದು ಬಹಳ ಮುಖ್ಯ. ಎಲ್ಲವನ್ನು ಓಪನ್‌ ಹಾರ್ಟ್‌ನಿಂದ ಸ್ವೀಕರಿಸಿ ಎಂದೇ ಹೇಳುತ್ತಾರೆ. ಲೈಪ್‌ನ ಚಿಲ್‌ ಮಾಡುತ್ತಿದ್ದಾರೆ.

Share this post:

Translate »