Sandalwood Leading OnlineMedia

ಶ್ರೀ ಮಹಿಷಾಸುರ ಮರ್ಧಿನಿ ಯಕ್ಷಗಾನ ಮಂಡಳಿ’ಯ ಬೆಳ್ಳಿ ಮಹೋತ್ಸವ ಮತ್ತು `ಸಪ್ತಾಹ ಕಾರ್ಯಕ್ರಮ’ದ ದಶಮಾನೋತ್ಸವಕ್ಕೇ ಚಾಲನೆ

ನಮ್ಮ ಧರ್ಮ.. ನಮ್ಮ ಸಂಸ್ಕೃತಿ ಎಂಬುದು ಬಹಳ ಮುಖ್ಯ. ಅನಾಧಿಕಾಲದಿಂದಾನೂ ನಮ್ಮ ಹಿರಿಯರು ಧರ್ಮ, ಸಂಸ್ಕೃತಿಯನ್ನು ಚಾಚು ತಪ್ಪದೇ ನಡೆಸಿಕೊಂಡು ಬರುತ್ತಿದ್ರು. ಆದರೆ ಇತ್ತಿಚಿನ ದಿನಗಳಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯೊಂದಿಗೆ ಬೆರೆತು, ಧರ್ಮ, ಸಂಸ್ಕೃತಿ ಪಾಲನೆ ಮಾಡುವುದು ಕಡಿಮೆಯಾಗುತ್ತಿದೆ. ಹೀಗಾಗಿ ಅದನ್ನು ಉಳಿಸಿ ಬೆಳೆಸುವ ಕಾರ್ಯಕಲ್ಪಕ್ಕೆ ʻಯಕ್ಷಜೀವಧಾರೆʼ ಎಂಬ ಕಾರ್ಯಕ್ರಮದ ಮೂಲಕ ಅಡಿಗಲ್ಲು ಹಾಕಲಾಗುತ್ತಿದೆ. ಇದರ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಮಾತಿದೆ.

ಇದನ್ನೂ ಓದಿ ‘ಮಲೆನಾಡ ಗೊಂಬೆಗೆ’ ಮನಸೋತ ಮನೆಹಾಳನಿಗೆ ರಿಯಲ್ ಸ್ಟಾರ್ ಸಾಥ್

ಅದರಂತೆ ವಿದ್ಯಾರ್ಥಿಗಳ ಜೀವನದಿಂದಾನೇ ಈ ಸಂಸ್ಕೃತಿಯ ಹಾದಿ ಸಾಗುತ್ತಾ ಹೋದರೆ ಮುಂದೆ ನಮ್ಮದೇ ಧರ್ಮ ಮತ್ತು ಸಂಸ್ಕೃತಿ ಬೆಳೆದು ದೊಡ್ಡ ಮರವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ ಈ ಅಭಿಯಾನವನ್ನು ಆರಂಭಿಸಲಾಗುತ್ತಿದೆ. 02-02-2024ರಿಂದ 11-02-2024ರ ತನಕ ಅಂದರೆ 10 ದಿನಗಳ ಕಾಲ ಈ ಅಭಿಯಾನದ ಕಾರ್ಯಕ್ರಮ ಜರುಗಲಿದೆ. ಮುರುಡೇಶ್ವರದಲ್ಲಿರುವ ಶ್ರೀ ರಾಘವೇಶ್ವರಭಾರತೀ ಹವ್ಯಕ ಸಭಾಭವನದಲ್ಲಿ ನಡೆಯಲಿದೆ.

ಇದನ್ನೂ ಓದಿ ಸಿಸಿಎಲ್ ಗೆ ಕಿಕ್ ಸ್ಟಾರ್ಟ್..ದುಬೈನಲ್ಲಿ ಪ್ರೋಮೋ ರಿಲೀಸ್..ಯಾವೆಲ್ಲಾ ಸೂಪರ್ ಸ್ಟಾರ್ಸ್ ಭಾಗಿ..?

ಹತ್ತು ದಿನಗಳ ಕಾಲ ಹಲವಾರು ಕಾರ್ಯಕ್ರಮಗಳು ನಡೆಯಲಿವೆ. ಧೂಳಿಪಾದುಕಾ ಪೂಜೆ, ಶ್ರೀಪಾದುಕಾ ಪೂಜೆ, ಭಿಕ್ಷಾಸೇವೆ ಸೇರಿದಂತೆ ಹೀಗೆ ಹಲವು ವಿಚಾರಧಾರೆಗಳನ್ನು ಅಭಿಯಾನದ ಮೂಲಕ ತಿಳಿಸಲಾಗುತ್ತಿದೆ. ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಿದರು.

ಇದನ್ನೂ ಓದಿ  ಮಂಡ್ಯಹೈದನ ಮಾಸ್ ಟ್ರೈಲರ್ ಬಿಗ್‌ಬಾಸ್ ಕಾರ್ತೀಕ್‌ ಮಹೇಶ್- ಮಂಡ್ಯ ಶಾಸಕ ರವಿಕುಮಾರ್‌ಗೌಡ, ಪುಟ್ಟರಾಜು ಬಿಡುಗಡೆ

ವಯಸ್ಸಿನಲ್ಲಿ ಕಿರಿಯರಾದರೂ ಪ್ರೌಢಿಮೆಯಲ್ಲಿ ಹಿರಿಯರು. ಭಾರತದ ಸಂಸ್ಕೃತದ ಬಗ್ಗೆ ಅಪಾರ ನಂಬಿಕೆಯುಳ್ಳ ವ್ಯಕ್ತಿಯಾಗಿ ಕರ್ನಾಟಕದಾದ್ಯಂತ ನಮ್ಮ ಪರಂಪರೆ ಅನೇಕ ಕಾರ್ಯಕ್ರಮಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.

ಇದನ್ನೂ ಓದಿ ಸಮ್ಮರ್ ಹಾಲಿಡೇಸ್ ಗೆ ಮನೋರಂಜನೆಯ ರಸದೌತಣ ನೀಡಲು ಬರುತ್ತಿದೆ “ಗನ್ಸ್ ಅಂಡ್ ರೋಸಸ್” .

ಯಕ್ಷ ಜೀವಧಾರೆ ಎಂಬ ವಿನೂತನ ಕಾರ್ಯಕ್ರಮವನ್ನು ನಾಡಿನಾದ್ಯಂತ ವಿದ್ಯಾರ್ಥಿಗಳಲ್ಲಿ ಪಸರಿಸುವ ಮೂಲಕ ಧರ್ಮ ಮತ್ತು ಸಂಸ್ಕೃತಿ ಬಿತ್ತು ಮಹತ್ಕಾರ್ಯದಲ್ಲಿ ತೊಡಗಿಸಿಕೊಂಡಿರುವ ನಿರಂಜನ್ ಸಿ. ಜೈನ್ ಕಾರ್ಯಕ್ರಮಕ್ಕೆ ಬರುವವರಿಗೆ ಶುಭಕೋರಿದ್ದಾರೆ.

Share this post:

Related Posts

To Subscribe to our News Letter.

Translate »