ಡಾಲಿ ಸಿನ್ಮಾ ಸೆಟ್‌ಗೆ ಭೇಟಿ ಕೊಟ್ಟ ಖ್ಯಾತ ಕ್ರಿಕೆಟ್ ಆಟಗಾರ್ತಿ!
ನಟ ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾದ ಬಗ್ಗೆ ಹಲವು ದಿನಗಳಿಂದ ಸುದ್ದಿ ಹರಿದಾಡುತ್ತಲೇ ಇದೆ. ಯಶ್ ಮುಂದಿನ ಸಿನಿಮಾ ಯಾವುದು ಅಂತ ತಿಳಿಯಲು ಫ್ಯಾನ್ಸ್ ಕಾತರರಾಗಿದ್ದಾರೆ. ಆದರೆ ಈ ಬಗ್ಗೆ ಇನ್ನು ಅಧಿಕೃತ ಸುದ್ದಿ ಹೊರ ಬಿದ್ದಿಲ್ಲ. ಆದರೂ ಚಿತ್ರದ ಬಗ್ಗೆ ದಿನೇ ದಿನೆ ಕ್ರೇಜ್ ಹೆಚ್ಚುತ್ತಲೇ ಇದೆ. ಕೆಜಿಎಫ್ ಸರಣಿ ಸಿನಿಮಾಗಳು ನಟ ಯಶ್ಗೆ ದೊಡ್ಡ ಮಟ್ಟದ ಯಶಸ್ಸು ತಂದು ಕೊಟ್ಟಿದೆ. ಅದರಲ್ಲೂ ಕೆಜಿಎಫ್ 2 ಸಿನಿಮಾದಿಂದ ಕನ್ನಡ ನಟನೊಬ್ಬನ ಸಿನಿಮಾ 1500 ಕೋಟಿ ರೂ. ಗಳಿಗೆ ಕಂಡಿದೆ ಎಂದರೆ ಅದು ಸಣ್ಣ ವಿಚಾರ ಅಲ್ಲ. ಇಂಥಹ ದೊಡ್ಡ ಯಶಸ್ಸು ಕಂಡ ಯಶ್ ಮುಂದಿನ ಹೆಜ್ಜೆ ಹುಷಾರಾಗಿ ಇಡುವ ಅಗತ್ಯತೆ ಇದೆ.
ಚಾಲಾಕಿ ಚಾಲಕಿಯ ಕಥೆ ಬಿಚ್ಚಿಡ್ತಾ `DRIVER JAMUNA’ ಟ್ರೇಲರ್?
ಹಾಗಾಗಿ ಅಷ್ಟು ಸುಲಭಕ್ಕೆ ಯಶ್ ನಿರ್ಮಾಪಕರು ಸಿಗುತ್ತಾರೆ ಎಂದು ಯಾವುದೋ ಸಿನಿಮಾ ಒಪ್ಪಿಕೊಳ್ಳುತ್ತಿಲ್ಲ. ತಮ್ಮ ಮುಂದಿನ ಸಿನಿಮಾ ಆಯ್ಕೆಯನ್ನು ಹುಷಾರಾಗಿ ಮಾಡುತ್ತಿದ್ದಾರೆ. ಹಾಗಾಗಿ ಕೊಂಚ ತಡವಾಗುತ್ತಿದೆ. ಆದರೆ ಯಶ್ ತೆರೆಮರೆಯಲ್ಲಿ ತಮ್ಮ 19ನೇ ಚಿತ್ರಕ್ಕೆ ಭರ್ಜರಿ ತಯಾರಿ ನಡೆಸಿಸದ್ದಾರೆ ಎನ್ನಲಾಗಿದೆ.
ನಟ ರಾಕಿಂಗ್ ಸ್ಟಾರ್ ಯಶ್ ಮುಂದಿನ ಚಿತ್ರಕ್ಕಾಗಿ ಭರ್ಜರಿ ತಯಾರಿ ನಡೆಸಿದ್ದಾರಂತೆ. ಅಲ್ಲದೇ ದೇಹದ ತೂಕವನ್ನು ಇಳಿಸಿಕೊಳ್ಳಲು ಮುಂದಾಗಿದ್ದಾರೆ. ವರ್ಕೌಟ್ ಜೊತೆಗೆ ಯಶ್ ಡಯೆಟ್ ಕೂಡ ಶುರು ಮಾಡಿದ್ದಾರಂತೆ. ಮುಂದಿನ ಚಿತ್ರದಲ್ಲಿ ವಿಭಿನ್ನ ಲುಕ್ನಲ್ಲಿ ಕಾಣಿಸಿಕೊಳ್ಳಲು ತಯಾರಿ ನಡೆಸಿದ್ದಾರೆ ಎಂದು ಈ ಹಿಂದೆ ಯಶ್ ಟ್ರೈನರ್ ಪಾನಿಪುರಿ ಕಿಟ್ಟಿ ರಿವೀಲ್ ಮಾಡಿದ್ದರು.
ದಿನ ಕಳೆಯುತ್ತಿದ್ದ ಹಾಗೆ ಯಶ್ ಮುಂದಿನ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಿದೆ. ಯಶ್ ಅಭಿಮಾನಿಗಳು ತಾವೇ ಸಿನಿಮಾ ಪೋಸ್ಟರ್ ಮತ್ತು ಟೈಟಲ್ ಲಾಂಚ್ ಬಗ್ಗೆ ಪೋಸ್ಟ್ಗಳನ್ನು ಹಾಕುತ್ತಿದ್ದಾರೆ. ಈ ಹಿಂದೆ ಜೂನ್ ನಲ್ಲಿಯೇ ಯಶ್ 19ನೇ ಚಿತ್ರ ಸೆಟ್ಟೇರಲಿದೆ ಎನ್ನಲಾಗಿತ್ತು. ಅದರೆ ಅದು ಸಾಧ್ಯವಾಗಿಲ್ಲ. ಹಾಗಾಗಿ ಚಿತ್ರದ ಟೈಟಲ್ ಬಗ್ಗೆ, ಲಂಚಿಂಗ್ ದಿನಾಂಕದ ಬಗ್ಗೆ ಅಭಿಮಾನಿ ಬಳಗದಲ್ಲಿ ಚರ್ಚೆ ಶುರುವಾಗಿದೆ. ಇದೇ ಬೆನ್ನಲ್ಲೇ ಟ್ವಿಟ್ಟರ್ನಲ್ಲಿ ನಟ ಯಶ್ ಹೆಸರು ಟ್ರೆಂಡಿಂಗ್ ಲಿಸ್ಟ್ ಸೇರಿದೆ.
ಇಷ್ಟೇಲ್ಲಾ ಸುದ್ದಿಗಳು ಹರಿದಾಡುತ್ತಾ ಇದ್ದರೂ, ಚಿತ್ರತಂಡ ಮಾತ್ರ ಸಿನಿಮಾದ ಈ ಬಗ್ಗೆ ಏನೂ ಮಾತಾಡದೇ ಸುಮ್ಮನಿದೆ. ತೆರೆಮರೆಯಲ್ಲಿ ತಯಾರಿ ನಡೆಯುತ್ತಿದ್ದು. ಈ ಬಗ್ಗೆ ಸದ್ಯದಲ್ಲೇ ಅಧಿಕೃತ ಮಾಹಿತಿ ಹೊರ ಬೀಳಲಿದೆ. ಇನ್ನು ಯಶ್ ಈ ಚಿತ್ರಕ್ಕೆ ಕೆವಿಎನ್ ಸಂಸ್ಥೆ ಬಂಡವಾಳ ಹೂಡಲಿದೆ ಎಂದು ಕೂಡ ಹೇಳಲಾಗಿದೆ.
ಯಶ್ ಮುಂದಿನ ಸಿನಿಮಾ ಕೆಜಿಎಫ್ 3 ಅಲ್ಲ, ನಿರ್ದೇಶಕ ನರ್ತನ್ ಸಿನಿಮಾ ಮಾಡಲು ಯಶ್ ಸಿದ್ದವಾಗಿದ್ದಾರೆ. ಇನ್ನು ನರ್ತನ್ ಕೂಡ ನಟ ಯಶ್ಗೆ ಸರಿಹೊಂದುವ ಹಾಗೆ ಕತೆಯನ್ನು ರೆಡಿಮಾಡಿಕೊಂಡಿದ್ದಾರೆ. ಆದರೆ ಈ ವಿಚಾರವನ್ನು ಕೂಡ ಅಧಿಕೃತಗೊಳಿಸಿಲ್ಲ. ಹಾಗಾಗಿ ನರ್ತನ್ ಯಶ್ಗೆ ಮುಂದಿನ ಸಿನಿಮಾ ಮಾಡುತ್ತಾರಾ ಇಲ್ಲವಾ ಎನ್ನುವ ಚರ್ಚೆ ಕೂಡ ಶುರುವಾಗಿದೆ.