ನಟಿ ತಬು ಲೈಫ್ ಆಫ್ ಪೈ ಚಿತ್ರದಂತಹವುಗಳ ಮೂಲಕ ಅಂತಾರಾಷ್ಟ್ರೀಯ ಖ್ಯಾತಿ ಪಡೆದ ಆ ಚೆಲುವೆ ಹೆಚ್ಚು ಹೆಚ್ಚು ವಿಶೇಷ ಪಾತ್ರಗಳಲ್ಲಿ ತನ್ನನ್ನು ತೊಡಗಿಸಿಕೊಳುವುದಕ್ಕೆ ಗಮನ ನೀಡುತ್ತಿದ್ದಾರೆ.
ಇದನ್ನೂ ಓದಿ “ಮೇಘ” ಸಂದೇಶ ಹೊತ್ತು ಬರಲಿದ್ದಾರೆ ಕಿರಣ್ ರಾಜ್ . ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಚರಣ್ ನಿರ್ದೇಶನ .
ಹೈದರಾಬಾದ್ ಮೂಲದ ನಟಿ ತಬು ಈಗಾಗಾಗಲೇ ಅನೇಕಾನೇಕ ಉತ್ತಮ ಚಿತ್ರಗಳಲ್ಲಿ, ಅಪಾರ ಪ್ರಮಾಣದಲ್ಲಿ ರೂಪ ಮತ್ತು ತನ್ನ ಪ್ರತಿಭೆ ತೋರಿದ್ದರೂ ಸಹಿತ ಆ ಚೆಲುವೆಗೆ ಇನ್ನು ತನಗೆ ಒಳ್ಳೆಯ ಪಾತ್ರ ಸಿಕ್ಕಿಲ್ಲ ಎನ್ನುವ ಬೇಸರವಿದೆ.
ಈ ಬಗ್ಗೆ ಮಾತನಾಡುತ್ತಾ ಆಕೆ ತನ್ನ ತಾರ ಬದುಕಲ್ಲಿ ಸಿನಿಮಾದವರು ತನ್ನನ್ನ ಸರಿಯಾಗಿ ಗುರುತಿಸಿಲ್ಲ ಎಂದು ನೊಂದಿದ್ದಾರೆ. ಭಾರತ ಚಿತ್ರರಂಗದಲ್ಲಿ, ಅದರಲ್ಲೂ ಹಿಂದಿಯಲ್ಲಿ ತನ್ನ ರಾಶಿ ರಾಶಿ ರೂಪ ತೋರಿ ಎಲ್ಲರ ಗಮನ ಸೆಳೆಯುತ್ತಾ ಪ್ರತಿಭೆಗೆ ಅವಕಾಶ ಇರುವ ಸಿನಿಮಾಗಳಲ್ಲೂ ಸಹಿತ ಮಾಡಿ ಗೆದ್ದ ನಟಿ ಈಗ ಯಾವುದೇ ಪಾತ್ರವನ್ನು ಮಾಡ ಬೇಕಾದರೂ ಸ್ವಲ್ಪ ಚೂಸಿ ಆಗಿರುತ್ತಾರೆ.

ಆಕೆಯು ಈಗ ಪರ್ಫಾರ್ಮೆನ್ಸ್ ಓರಿಯೆಂಟೆಡ್ ಚಿತ್ರಗಳಲ್ಲಿ ಅವಕಾಶ ಸಿಗಲು ಆರಂಭವಾಯಿತಾದರೂ ಈಗ ಅಂತಹ ಪಾತ್ರಗಳು ಬೇಸರ ತಂದಿದೆಯಂತೆ ಆಕೆಗೆ. ಈಗ ತಬು ಅವರು ಯಾವ ಭಾಷೆಯಾದರೂ ಸರಿಯೇ ಒಳ್ಳೆಯ ವಿಭಿನ್ನ ಪಾತ್ರ ಸಿಕ್ಕರೆ ನಟಿಸುವುದಾಗಿ ಹೇಳಿದ್ದಾರೆ. ಆ ಬಗ್ಗೆ ನಿರ್ಮಾಪಕರು ನಿರ್ದೇಶಕರು ಯೋಚಿಸ ಬೇಕಿದೆ. ಹಾಗೆ ಆಗಲೆನ್ನುವ ಆಶಯ ಆಕೆಯ ಅಭಿಮಾನಿಗಳು ಹೊಂದಿದ್ದಾರೆ.
