Left Ad
“ರಾಜೇಂದ್ರ ಸಿಂಗ್ ಬಾಬು ಇರಲಿಲ್ಲದಿದ್ದರೆ ನಾನು ಜೀರೋ” – ಸುಹಾಸಿನಿ ಮನದಾಳದ ಭಾವನೆ - Chittara news
# Tags

“ರಾಜೇಂದ್ರ ಸಿಂಗ್ ಬಾಬು ಇರಲಿಲ್ಲದಿದ್ದರೆ ನಾನು ಜೀರೋ” – ಸುಹಾಸಿನಿ ಮನದಾಳದ ಭಾವನೆ

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ಇಂಡಸ್ಟ್ರಿಯಲ್ಲಿ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ಆಶ್ರಯದಲ್ಲಿ ಆಯೋಜಿಸಲಾದ ‘SVR @ 50’ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಅಕ್ಟೋಬರ್ 23ರಿಂದ 27ರವರೆಗೆ ಚಾಮರಾಜಪೇಟೆಯ ಕಲಾವಿದರ ಭವನದಲ್ಲಿ ಅವರ ಸಿನಿಮಾಗಳ ಪ್ರದರ್ಶನ ಹಾಗೂ ಸಂವಾದಗಳು ನಡೆದವು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟಿ ಸುಹಾಸಿನಿ, ರಾಜೇಂದ್ರ ಸಿಂಗ್ ಬಾಬು ಅವರೊಂದಿಗೆ ಕಳೆದ ದಿನಗಳನ್ನು ನೆನೆದು ಮನದಾಳದ ಭಾವನೆ ಹಂಚಿಕೊಂಡರು.
ರಾಜೇಂದ್ರ ಸಿಂಗ್ ಬಾಬು ನನ್ನಿಗೆ ಅವಕಾಶ ಕೊಡದೇ ಇದ್ದಿದ್ದರೆ, ನಾನು ಇಂದಿನ ಸುಹಾಸಿನಿ ಆಗಿರಲಿಲ್ಲ. ಅವರು ಇಲ್ಲದಿದ್ದರೆ ನಾನು ಜೀರೋ,” ಎಂದು ಹೇಳಿದ್ದಾರೆ.

ಅವರು ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಬಂಧನ, ಮುತ್ತಿನ ಹಾರ ಚಿತ್ರಗಳನ್ನು ನೆನೆದು, “ಆ ಸಿನಿಮಾಗಳು ನನಗೆ ಗುರುತು ತಂದವು, ಇಂದಿಗೂ ಜನರ ಮನದಲ್ಲಿ ಜೀವಂತವಾಗಿವೆ,” ಎಂದರು.
“ಬಾಬು ಅವರಿಗೆ ಸಲ್ಲಬೇಕಾದ ಗೌರವ ಈಗ ಸಿಕ್ಕಿದೆ, ಇದು ಸಂತೋಷದ ಕ್ಷಣ,” ಎಂದು ಅಭಿನಂದಿಸಿದರು.

Spread the love
Translate »
Right Ad