ಕಂಗನಾ ರಣಾವತ್ ಈಗ ಕೇವಲ ನಾಯಕಿಯಷ್ಟೇ ಅಲ್ಲ. ಬಿಜೆಪಿ ಸಂಸದೆಯೂ ಹೌದು. ಮಂಡಿ ಕ್ಷೇತ್ರದಿಂದ ಗೆದ್ದು ಸಂಸದೆಯಾಗುವತ್ತ ಹೊರಟಿದ್ದಾರೆ. ಆದರೆ ಚುನಾವಣೆಗೂ ನಿಲ್ಲುವುದಕ್ಕೂ ಮೊದಲು ಕಂಗನಾ ಹಲವು ಸಿನಿಮಾಗಳನ್ನು ಘೋಷಣೆ ಮಾಡಿದ್ದರು.
ಅದರಲ್ಲೂ ಕಂಗನಾ ರಣಾವತ್ ಅವರ ಕನಸಿನ ಕೂಸು ಎಮರ್ಜೆನ್ಸಿಯ ಕಥೆ ಏನಾಗಲಿದೆ ಅನ್ನುವ ಚಿಂತೆ ಇದೀಗ ಕಾಡುತ್ತಿದೆ.
ಚುನಾವಣೆ ಫಲಿತಾಂಶಕ್ಕಿಂತ ಮೊದಲು ಗೆದ್ದರೆ ಚಿತ್ರರಂಗದಿಂದ ದೂರ ಸರಿಯುವುದಾಗಿ ಹೇಳಿದ್ದರು. ಈ ಮಾತನ್ನ ಗಂಭೀರವಾಗಿ ಹೇಳಿದ್ದಾ..? ಅಥವಾ ಚುನಾವಣೆಯಲ್ಲಿ ಸೋಲು ಖಚಿತ ಎಂದುಕೊಂಡು ಸುಮ್ಮನೆ ಹೇಳಿದ್ದಾ..?
ಉತ್ತರ ಖುದ್ದು ಕಂಗನಾ ರಣಾವತ್ ಅವರಿಗೆ ಗೊತ್ತಾದರೂ ಸದ್ಯಕ್ಕೆ ಮಂಡಿ ಕ್ವೀನ್ನ ಮುಂದಿನ ನಡೆಯ ಮೇಲೆ ಎಲ್ಲರ ಕಣ್ಣಂತೂ ಇದೆ. ಮಾತು ಹೇಳಿದ್ದರು.
ಅಂದ್ಹಾಗೇ ಕಂಗನಾ ರಣಾವತ್ ಈ ಚಿತ್ರದ ನಾಯಕಿಯೂ ಹೌದು ನಿರ್ದೇಶಕಿಯೂ ಹೌದು. ಎಲ್ಲವೂ ಅಂದುಕೊಂಡತೆ ಆಗಿದ್ದರೆ ಈ ಚಿತ್ರ ಕಳೆದ ವರ್ಷದ ಅಂತ್ಯದಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಅದು ಆಗಲಿಲ್ಲ. ಇನ್ನೂ ಈ ವರ್ಷದ ಆರಂಭದಲ್ಲಿ ಜೂನ್ 14ಕ್ಕೆ ಚಿತ್ರ ಬಿಡುಗಡೆಯಾಗಲಿದೆ ಎಂದು ಕಂಗನಾ ಘೋಷಿಸಿದ್ದರು.
ಆದರೆ ಆ ನಂತರ ಲೋಕಸಭಾ ಚುನಾವಣೆಯತ್ತ ಗಮನ ವಹಿಸಲು ಮತ್ತೆ ಕಂಗನಾ ಬಿಡುಗಡೆಯ ದಿನವನ್ನ ಮುಂದೂಡಿದರು. ಈಗ ಕಂಗನಾ ಗೆದ್ದಿದ್ದಾರೆ. ಸಂಭ್ರಮದ ಅಲೆಯಲ್ಲಿದ್ದಾರೆ. ಈ ಸಂದರ್ಭದಲ್ಲಿ ಚಿತ್ರದ ಕಡೆ ಗಮನ ಕೊಡಲು ಹೇಗೆ ಸಾಧ್ಯ..? ಎಂಬ ಪ್ರಶ್ನೆ ಇದೆ.