ಬಿಗ್ ಬಾಸ್ ಮನೆಯಲ್ಲಿದ್ದಾಗ ಭೇಟಿ ಕೊಟ್ಟಿದ್ದಂತ ಡ್ರೋನ್ ಪ್ರತಾಪ್ ಗೆ ಸ್ವಾಮೀಜಿಯೊಬ್ಬರು ನೀನು ವಿದೇಶಕ್ಕೆ ಹೋಗುತ್ತೀಯಾ, ಇಲ್ಲಿ ಇರುವುದಕ್ಕೆ ಸಾಧ್ಯವಿಲ್ಲ.
ಅಲ್ಲಿಯೇ ನಿಂಗೆ ಭವಿಷ್ಯ ಇರುವುದು ಎಂಬರ್ಥದಲ್ಲಿ ಭವಿಷ್ಯ ನುಡಿದಿದ್ದರು. ಇದೀಗ ಡ್ರೋನ್ ಪ್ರತಾಪ್ ದುಬೈಗೆ ಪ್ರಯಾಣ ಬೆಳೆಸಿದ್ದು, ಅದು ನಿಜವಾಯ್ತಾ ಎನ್ನುತ್ತಿದ್ದಾರೆ ಫ್ಯಾನ್ಸ್. ಆದರೆ ಸತ್ಯ ಬೇರೆಯೆ ಇದೆ.
‘ಬಿಗ್ ಬಾಸ್ ಕನ್ನಡ’ ಸೀಸನ್ 10ರ ರಿಯಾಲಿಟಿ ಶೋನಿಂದ ಆಚೆ ಬಂದಮೇಲೆ ‘ಡ್ರೋನ್’ ಪ್ರತಾಪ್ ಅವರ ಜನಪ್ರಿಯತೆ ಹೆಚ್ಚಾಗುತ್ತಲೇ ಇದೆ.
ಕೆಲ ಸಮಯದಿಂದ ಪ್ರತಾಪ್ ಟ್ರೋಲ್ ಆಗಿದ್ದೇ ಹೆಚ್ಚು. ಆದರೆ ಈಗ ಅವರಿಗೆ ಫ್ಯಾನ್ಸ್ ಸಂಖ್ಯೆ ಹೆಚ್ಚಾಗಿದೆ. ಸೋಶಿಯಲ್ ಮೀಡಿಯಾದಲ್ಲೂ ತಮ್ಮ ಹವಾ ತೋರಿಸುತ್ತಿದ್ದಾರೆ ಅವರು.
ಅಲ್ಲಿಯೂ ಕೂಡ ಅವರಿಗೆ ದೊಡ್ಡ ಸಂಖ್ಯೆಯ ಫಾಲೋವರ್ಸ್ ಹುಟ್ಟಿಕೊಳ್ಳುತ್ತಿದ್ದಾರೆ ಮತ್ತು ಪ್ರೀತಿ ತೋರುವವರ ಸಂಖ್ಯೆಯೂ ಅಧಿಕವಾಗುತ್ತಿದೆ. ಈ ಮಧ್ಯೆ ದುಬೈಗೆ ‘ಡ್ರೋನ್’ ಪ್ರತಾಪ್ ಹೋಗಿದ್ದು, ಅದು ಕೂಡ ಸುದ್ದಿಯಾಗಿದೆ.
ದುಬೈಗೆ ‘ಡ್ರೋನ್’ ಪ್ರತಾಪ್ ಹೋಗಿದ್ದೇಕೆ?
ಸೋಶಿಯಲ್ ಮೀಡಿಯಾ ಖಾತೆಯಲ್ಲಿ ‘ಡ್ರೋನ್’ ಪ್ರತಾಪ್ ಅವರು ತಮ್ಮ ದುಬೈ ಭೇಟಿಯ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ದುಬೈ ವಿಮಾನ ನಿಲ್ದಾಣದಲ್ಲಿ ಡ್ರೋನ್ ಪ್ರತಾಪ್‌ಗೆ ಅಲ್ಲಿನ ಕನ್ನಡಿಗರು ಅದ್ಧೂರಿ ಸ್ವಾಗತ ನೀಡಿದ್ದಾರೆ.
ಪ್ರತಾಪ್‌ಗೆ ಕನ್ನಡ ಶಾಲನ್ನು ಹೊದಿಸಿ, ದುಬೈಗೆ ಬರಮಾಡಿಕೊಂಡಿದ್ದಾರೆ.
ದುಬೈ ಅಭಿಮಾನಿಗಳ ಕರೆಗೆ ಓಗೊಟ್ಟು ಪ್ರತಾಪ್ ಹೋಗಿದ್ದಾರೆ ಎನ್ನಲಾಗಿದ್ದು, ಅಲ್ಲಿರುವ ಕನ್ನಡಿಗರನ್ನು ಭೇಟಿ ಮಾಡಿ, ಕೆಲ ದಿವಸ ಅವರು ಅಲ್ಲಿಯೇ ಅವರು ಇರಲಿದ್ದಾರೆ ಎಂಬ ಮಾಹಿತಿ ಇದೆ.
ಪ್ರತಾಪ್ ವಿಡಿಯೋ ವೈರಲ್
ಡ್ರೋನ್ ಪ್ರತಾಪ್ ಅವರು ಏರ್‌ಪೋರ್ಟ್‌ನಲ್ಲಿ ಇರುವ ವಿಡಿಯೋ ವೈರಲ್ ಆಗಿದೆ. ಅಲ್ಲಿನ ಕನ್ನಡಿಗರು ಡ್ರೋನ್ ಪ್ರತಾಪ್ ಅವರ ಜೊತೆಗೆ ಫೋಟೋ ತೆಗೆಸಿಕೊಂಡು, ಅವರನ್ನು ಮಾತನಾಡಿಸಿ ಖುಷಿಪಟ್ಟಿದ್ದಾರೆ.
ಸಹಾಯ ಮಾಡುತ್ತಿರುವ ‘ಡ್ರೋನ್’ ಪ್ರತಾಪ್
ಈ ನಡುವೆ ‘ಡ್ರೋನ್’ ಪ್ರತಾಪ್ ಅವರು ಸಾಕಷ್ಟು ಜನರಿಗೆ ಆರ್ಥಿಕ ಸಹಾಯ ಮಾಡುವ ಮೂಲಕವೂ ಸುದ್ದಿಯಲ್ಲಿದ್ದಾರೆ.
‘ಬಿಗ್ ಬಾಸ್’ನಲ್ಲಿ ರನ್ನರ್ ಅಪ್ ಆಗಿದ್ದ ಅವರಿಗೆ ಒಂದಷ್ಟು ನಗದು ಬಹುಮಾನ ಮತ್ತು ಎಲೆಕ್ಟ್ರಿಕ್ ಸ್ಕೂಟರ್ ಗಿಫ್ಟ್ ಆಗಿ ಸಿಕ್ಕಿತ್ತು.
“ಈ ಬಹುಮಾನಗಳನ್ನು ನಾನು ಬಳಸುವುದಿಲ್ಲ. ಅಗತ್ಯವಿರುವವರಿಗೆ ನೀಡುತ್ತೇನೆ” ಎಂದು ಬಿಗ್ ಬಾಸ್ ವೇದಿಕೆ ಮೇಲೆಯೇ ಪ್ರತಾಪ್ ಘೋಷಣೆ ಮಾಡಿದ್ದರು. ಈಗ ಅವರು ನುಡಿದಂತೆ ನಡೆದುಕೊಳ್ಳುತ್ತಿದ್ದಾರೆ.
ಫುಡ್ ಡೆಲಿವರಿ ಬಾಯ್‌ಗೆ ಸ್ಕೂಟರ್ ನೀಡಿದ ಪ್ರತಾಪ್
ತಮಗೆ ‘ಬಿಗ್ ಬಾಸ್’ ಕಡೆಯಿಂದ ಉಡುಗೊರೆಯಾಗಿ ಸಿಕ್ಕಿದ್ದ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಫುಡ್ ಡೆಲಿವರಿ ಬಾಯ್ ಒಬ್ಬರಿಗೆ ಪ್ರತಾಪ್ ನೀಡಿದ್ದರು. ಆಗ ಪ್ರತಾಪ್ ಅವರಿಗೆ ಭಾರಿ ಮೆಚ್ಚುಗೆ ಸಿಕ್ಕಿತ್ತು.
ಇನ್ನು, ಈಚೆಗೆ ಅತೀ ಹೆಚ್ಚು ಮಾರ್ಕ್ಸ್ ಪಡೆದುಕೊಂಡರೂ, ಫೀಸ್ ಕಟ್ಟಲು ಸಾಧ್ಯವಾಗದೇ ಕಷ್ಟಪಡುತ್ತಿದ್ದ ವಿದ್ಯಾರ್ಥಿನಿಗೆ ಪ್ರತಾಪ್ ಧನ ಸಹಾಯ ಮಾಡಿದ್ದರು. ಹಾಗೆಯೇ ಬಡತನದಿಂದಾಗಿ ಕಷ್ಟಪಡುತ್ತಿದ್ದ ಮುಸ್ಲಿಂ ಕುಟುಂಬವೊಂದಕ್ಕೂ ಸಹಾಯ ಮಾಡಿದ್ದರು ಪ್ರತಾಪ್.
ಈ ವಿಡಿಯೋಗಳೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಪ್ರತಾಪ್ ನಡೆಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಈ ಮಧ್ಯೆ ಡ್ರೋನ್ ಪ್ರತಾಪ್ ಅವರು ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಕಾಮಿಡಿ ಕಾರ್ಯಕ್ರಮ ‘ಗಿಚ್ಚಿ ಗಿಲಿ ಗಿಲಿ’ ಸೀಸನ್ 3ರಲ್ಲಿಯೂ ಕಾಣಿಸಿಕೊಂಡಿದ್ದರು. ಅಲ್ಲಿ ಎಲ್ಲರನ್ನು ನಗಿಸುವ ಪ್ರಯತ್ನ ಮಾಡಿದ್ದರು.