ಹೊಸ ವರ್ಷ ಸ್ಯಾಂಡಲ್‌ವುಡ್‌ಗೆ ವರವಾಗುವ ಸಾಧ್ಯತೆನೇ ಹೆಚ್ಚಿದೆ. ಸಿನಿಮಾ ಮಂದಿ ಮನಸ್ಸು ಮಾಡಿದ್ದರೆ, ವರ್ಷಕ್ಕೆ ಒಂದೊಂದು ಸಿನಿಮಾವನ್ನು ರಿಲೀಸ್ ಮಾಡಬಹುದು. ಯಾಕಂದ್ರೆ, ಎರಡು ಮೂರು ವರ್ಷಗಳಿಂದ ಸೈಲೆಂಟ್ ಆಗಿದ್ದ ಸೂಪರ್‌ಸ್ಟಾರ್ ಸಿನಿಮಾಗಳು ರಿಲೀಸ್ ಆಗಲಿವೆ. ಮತ್ತೆ ಕೆಲವರು ವರ್ಷಕ್ಕೊಂದು ಸಿನಿಮಾ ರಿಲೀಸ್ ಮಾಡುವುದಕ್ಕೆ ಪಣತೊಟ್ಟು ನಿಂತಿದ್ದಾರೆ.
ಹೀಗಾಗಿ 2025 ಕನ್ನಡ ಚಿತ್ರರಂಗದ ಪಾಸಿಟಿವ್ ಆಗಬಹುದು. ಮತ್ತೆ ಬೇರೆ ಚಿತ್ರರಂಗಗಳು ಕನ್ನಡದತ್ತ ತಿರುಗಿ ನೋಡುವಂತೆ ಆಗಬಹುದು. ಯಾಕಂದ್ರೆ ಬಹುತೇಕ ಕನ್ನಡದ ಎಲ್ಲಾ ಸ್ಟಾರ್ ಸಿನಿಮಾಗಳು ರಿಲೀಸ್ ಆಗುತ್ತಿವೆ. ಹಾಗೂ ಸ್ಟಾರ್ ಡೈರೆಕ್ಟರ್‌ಗಳ ಚಿತ್ರಗಳು ಕ್ಯೂನಲ್ಲಿವೆ. 2025 ನಲ್ಲಿ ಶರಣ್ ನಟಿಸಿದ ‘ಛೂಮಂತ್’ ಸಿನಿಮಾದಿಂದ ಸ್ಟಾರ್‌ಗಳ ಥಿಯೇಟರ್ ಪರೇಡ್ ಆರಂಭ ಆಗುತ್ತಿದೆ.
‘ಕಾಂತಾರ’ದಂತಹ ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾ ಕೊಟ್ಟಿದ್ದ ರಿಷಬ್ ಶೆಟ್ಟಿ ಪ್ರೀಕ್ವೆಲ್‌ನಲ್ಲಿ ನಟಿಸಿ, ನಿರ್ದೇಶಿಸುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಮತ್ತೊಂದು ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸೌಂಡು ಮಾಡುತ್ತಾರಾ? ‘ಕಾಂತಾರ ಚಾಪ್ಟರ್ 1’ ರಿಂದ ಮತ್ತೆ ಸ್ಯಾಂಡಲ್‌ವುಡ್ ಕಡೆಗೆ ಬೇರೆ ಚಿತ್ರರಂಗ ತಿರುಗಿ ನೋಡುವಂತೆ ಆಗುತ್ತಾ? ಪ್ರಶ್ನೆ ಅಂತೂ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರೇಮಿಗಳ ದಿನಕ್ಕೆ `ಭುವನಂ ಗಗನಂ’ ದರ್ಶನ
2025ರಲ್ಲಿ ರಿಲೀಸ್ ಆಗಲಿರುವ ಸಿನಿಮಾಗಳ ಪೈಕಿ ’45’ ಕೂಡ ಒಂದು. ಅರ್ಜುನ್ ಜನ್ಯ ಇದೇ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿರುವ ಸಿನಿಮಾದಲ್ಲಿ ಶಿವಣ್ಣ, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
‘ಮ್ಯಾಕ್’ ಸಕ್ಸಸ್ ಖುಷಿಯಲ್ಲಿ ಇರುವ ಕಿಚ್ಚ ಸುದೀಪ್ ಹೊಸ ಸಿನಿಮಾ ಅನೌನ್ಸ್ ಮಾಡುತ್ತಿದ್ದಾರೆ. ಕೆಆರ್‌ಜಿ ಸ್ಟುಡಿಯೋ ಜೊತೆ ಸಿನಿಮಾ ಸೆಟ್ಟೇರಲಿದ್ದು, ಈ ವರ್ಷ ರಿಲೀಸ್ ಆಗುವ ನಿರೀಕ್ಷೆಯಿದೆ. ಇದಕ್ಕೂ ಮುನ್ನ ಸೆಟ್ಟೇರಬೇಕಿದ್ದ ‘ಬಿಲ್ಲ ರಂಗ ಭಾಷಾ’ಗೆ ಕೆಲಸ ಹೆಚ್ಚಿರುವುದರಿಂದ ರಿಲೀಸ್ ತಡವಾಗಬಹುದೆಂದು ನಿರೀಕ್ಷೆ ಮಾಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ Max Movie Review: ತಲೆಗೆ ಹೊಕ್ಕಿದ ಬೋಧನೆಯ `ಹುಳ’ಕ್ಕೆ ರಂಜನೆಯ ಲಸಿಕೆ!
ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ರಮೇಶ್ ಅರವಿಂದ್ ಕಾಂಬಿನೇಷನ್ ಸಿನಿಮಾ ‘ಯುವರ್ಸ್ ಸಿನ್ಸಿಯರ್ಲಿ ರಾಮ್’ ಶೂಟಿಂಗ್ ನಡೆಯುತ್ತಿದೆ. ಈ ಸಿನಿಮಾ ಈಗಾಗಲೇ ಟೈಟಲ್ ಹಾಗೂ ಪೋಸ್ಟರ್‌ನಿಂದ ಸದ್ದು ಮಾಡುತ್ತಿದೆ. 2025ಕ್ಕೆ ಇದು ಕೂಡ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ.
ರೋರಿಂಗ್ ಸ್ಟಾರ್ ಶ್ರೀಮುರಳಿ ನಟಿಸಿದ ‘ಬಘೀರ’ ಸಿನಿಪ್ರಿಯರ ಮನಸ್ಸು ಗೆದ್ದಿದೆ. ಮೂರು ವರ್ಷ ತೆಗೆದುಕೊಂಡು ಸಿನಿಮಾ ಮಾಡಿದ್ದರಿಂದ ಮುಂದಿನ ದಿನಗಳಲ್ಲಿ ವರ್ಷಕ್ಕೊಂದು ಸಿನಿಮಾ ಕೊಡುವುದಕ್ಕೆ ನಿರ್ಧರಿಸಿದ್ದಾರೆ. ಹೀಗಾಗಿ 2025 ಡಿಸೆಂಬರ್‌ಗೆ ‘ಪರಾಕ್’ ಸಿನಿಮಾ ರಿಲೀಸ್ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ UI Review: ಪ್ರೇಕ್ಷಕನನ್ನೇ ವಿಮರ್ಶೆಗೆ ಒಡ್ಡುವ ಉಪ್ಪಿ ಪ್ರಪಂಚ!
ಎಲ್ಲಾ ಸರಿ ಇದ್ದಿದ್ದರೆ ದರ್ಶನ್ ಸಿನಿಮಾ ‘ಡೆವಿಲ್’ 2024 ಡಿಸೆಂಬರ್‌ಗೆ ರಿಲೀಸ್ ಆಗಬೇಕಿತ್ತು. ಆದರೆ, ರೇಣುಕಾಸ್ವಾಮಿ ಕೇಸ್‌ನಿಂದಾಗಿ ‘ಡೆವಿಲ್’ ಸಿನಿಮಾ ಸ್ಥಗಿತಗೊಂಡಿತ್ತು. ಒಂದು ವೇಳೆ ಮತ್ತೆ ಶುರುವಾದರೆ, ಡೆವಿಲ್ ಈ ವರ್ಷ ರಿಲೀಸ್ ಆಗುವುದು ಗ್ಯಾರಂಟಿ.