Sandalwood Leading OnlineMedia

ಮಂಜು-ಮೋಕ್ಷಿತಾ ನಡುವೆ ಬಿಗ್‌ ಫೈಟ್‌ .. ಗೆಳೆಯನನ್ನು ಕಾಪಾಡ್ತಾರ ಗೌತಮಿ..?

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11 ಇದೀಗ 102ನೇ ದಿನಕ್ಕೆ ಕಾಲಿಟ್ಟಿದೆ. ಫಿನಾಲೆ ತಲುಪುವುದಕ್ಕೆ, ಗೆಲ್ಲುವುದಕ್ಕೆ ಜನರ ಸಹಕಾರ ಬಹಳ ಮುಖ್ಯ. ಅವರೇ ಗೆಲ್ಲಿಸಬೇಕು. ಇದರ ನಡುವೆ ಬಿಗ್‌ ಬಾಸ್‌ ಕೂಡ ಒಂದು ಅವಕಾಶ ಕೊಟ್ಟಿದೆ. ಡೈರೆಕ್ಟ್‌ ಆಗಿ ಫಿನಾಲೆಗೆ ಒಬ್ಬರಿಗೆ ಟಿಕೆಟ್‌ ನೀಡುತ್ತಿದೆ. ಹೀಗಾಗಿ ಬಿಗ್​ಬಾಸ್​ ಮನೆಯಲ್ಲಿ ಉಳಿದುಕೊಂಡಿರೋ 9 ಸ್ಪರ್ಧಿಗಳಲ್ಲಿ ಜೋರಾದ ಪೈಪೋಟಿ ನಡೆದಿದೆ.

ಈ ವಾರವಂತೂ ಸ್ಪರ್ಧಿಗಳಿಗೆ ತುಂಬಾನೇ ಮುಖ್ಯವಾಗಿದೆ. ಬಿಗ್​ಬಾಸ್​ ದಿನೇ ದಿನೇ ಸ್ಪರ್ಧಿಗಳಿಗೆ ಟಾಸ್ಕ್​ಗಳನ್ನು ಕೊಡುತ್ತಿದ್ದಾರೆ. ಫಿನಾಲೆ ಟಿಕೆಟ್​​ ಅನ್ನು ಗಿಟ್ಟಿಸಿಕೊಳ್ಳಲೇಬೇಕು ಅಂತ ಸ್ಪರ್ಧಿಗಳು ನಾ ಮುಂದು ತಾ ಮುಂದು ಅಂತ ಕಿತ್ತಾಟ ನಡೆಸುತ್ತಿದ್ದಾರೆ. ಆ ಫೈಟ್‌ ಇಂದು ಮೋಕ್ಷಿತಾ ಹಾಗೂ ಮಂಜಣ್ಣನ ನಡುವೆ ಶುರುವಾಗಿದೆ. ಭವ್ಯಾ ಹಾಗೂ ಗೌತಮಿ ಕಾಪಾಡಬೇಕಿದೆ.

ರಿಲೀಸ್ ಆದ ಹೊಸ ಪ್ರೋಮೋದಲ್ಲಿ, ಒಬ್ಬೊಬ್ಬ ಸದಸ್ಯರು ಪೆಟ್ಟಿಗೆಯ ಒಳಗಡೆ ಮಲಗಬೇಕು. ಪೆಟ್ಟಿಗೆ ತುಂಬಾ ನೀರು ತುಂಬಲು ಶುರುವಾಗುತ್ತದೆ. ಇನ್ನೊಬ್ಬ ಸದಸ್ಯ ಪೆಟ್ಟಿಗೆ ಒಳಗಡೆ ತುಂಬಿದ ನೀರನ್ನು ಕಡಿಮೆಗೊಳಿಸುತ್ತಾ ಹೋಗಬೇಕು ಅಂತ ಟಾಸ್ಕ್​ವೊಂದನ್ನು ಕೊಟ್ಟಿದ್ದರು. ಆಗ ಗೌತಮಿ ಹಾಗೂ ಮಂಜಣ್ಣ ಒಂದು ತಂಡದಲ್ಲಿ ಇರುತ್ತಾರೆ. ಭವ್ಯಾ ಗೌಡ ಹಾಗೂ ಮೋಕ್ಷಿತಾ ಮತ್ತೊಂದು ತಂಡದಲ್ಲಿ ಇರುತ್ತಾರೆ. ಈ ಟಾಸ್ಕ್​ ಮೊದಲು ಮಂಜಣ್ಣ ಹಾಗೂ ಗೌತಮಿ ಚರ್ಚೆ ಮಾಡಿದ್ದಾರೆ. ಆಗ ಮಂಜಣ್ಣ ನೀನು ನೀರು ತೆಗಿ ನಾನು ಒಳಗಡೆ ಇರ್ತಿನಿ. ಸಾಯೋದಿಲ್ಲ ಬದುಕುತ್ತೇನೆ ಅಂತ ಹೇಳಿದ್ದಾರೆ. ಆಗ ನೀರನ್ನು ತೆಗೆಯುತ್ತಾ ಹೋಗುವಾಗ ಗೌತಮಿಗೆ ಸುಸ್ತಾಗುತ್ತೆ. ಆದ್ರೆ ನೀರಲ್ಲಿ ಮೀನಾದ್ರೆ ಫಿನಾಲೆಗೆ ಗುಡ್ ಬೈ ಹೇಳಬೇಕಾಗುತ್ತದೆ. ಪ್ರೋಮೋದಲ್ಲಿ ಮಂಜಣ್ಣನಿಗೆ ನೀರು ತುಂಬಿದೆ. ಗೆಲುವು ಯಾರ ಕಡೆಗೆ ಎಂಬ ಕುತೂಹಲ ಮೂಡಿದೆ.

Share this post:

Translate »