ಅವತ್ತು ಐಪಿಎಲ್ ಮ್ಯಾಚ್ ನಡೀತಾ ಇತ್ತು. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮ್ಯಾಚ್ ಎಂಜಾಯ್ ಮಾಡ್ತಾ ಇದ್ದೆ. ಸಡನ್ ಆಗಿಯೇ ಒಂದು ಕಾಲ್ ಬಂತು. ಆ ಕಾಲ್ ರಿಸೀವ್ (Call Receive) ಮಾಡಿದೆ. ಆ ಕಡೆಯಿಂದ ಎರಡು ನಿಮಿಷ ನಮ್ಮ ಆಫೀಸ್ಗೆ ಬಂದು ಹೋಗಿ ಅನ್ನೋ ಸಂದೇಶ ಬಂತು. ಓಕೆ…. ಅಂತ ಗಾಂಧಿನಗರದರೋ ಆ ಕಚೇರಿಗೆ ಹೋದೆ. ಅಲ್ಲಿ ನನ್ನ ಲುಕ್ ಟೆಸ್ಟ್ (Look Test) ನಡೆಯಿತು. ನನ್ನ ಜೊತೆಗೆ ಆ ಹೀರೋ ಕೂಡ ಇದ್ರು. ಇಬ್ಬರ ಫೋಟೋಗಳು (Photos) ತೆಗೆದುಕೊಂಡ್ರು. ಅಷ್ಟೇ ನಮ್ಮ ಲುಕ್ ಟೆಸ್ಟ್ ಆಗಿರೋದು. ಅದಾದ್ಮೇಲೆ ಒಂದು ದಿನ ಮತ್ತೆ ಕಾಲ್ ಬಂತು. ನಿಮ್ಮ ಒಂದು ಫೋಟೋ ಕಳಿಸಿ ಅನ್ನೋದೇ ಆ ಕಾಲ್ನ ರಿಕ್ವೆಸ್ಟ್ ಆಗಿತ್ತು.
ಯಾಕೆ ಅಂತ ಕೇಳಿದಾಗ ಅನೌನ್ಸ್ ಮಾಡೋದು ಬೇಡ್ವೇ? ನೀವು ಸೆಲೆಕ್ಟ್ ಆಗಿದ್ದೀರಿ ಅನ್ನೋ ಉತ್ತರ ಬಂತು…
ಯುವ ಚಿತ್ರಕ್ಕೆ ಸಪ್ತಮಿ ಗೌಡ ಹೀಗೆ ಆಯ್ಕೆ ಆಗಿದ್ರು !
ಹೌದು, ಸಪ್ತಮಿ ಗೌಡ ಅದಾಗಲೇ ಜನರಿಗೆ ಪರಿಚಯ ಆಗಿದ್ದರು. ಕಾಂತಾರ ಸಿನಿಮಾ ಈ ನಟಿಯ ಲಕ್ ಚೇಂಜ್ ಮಾಡಿತ್ತು. ಅದೇ ನೇಮ್ ಆ್ಯಂಡ್ ಫೇಮ್ ಈ ಹುಡುಗಿಯನ್ನ ಹುಡುಕಿಕೊಂಡು ಹೋಗುವಂತೇನೂ ಮಾಡಿತ್ತು. ಹಾಗಾಗಿಯೇ ಅಂತು ಕೆಆರ್‌ಜಿ ಸಂಸ್ಥೆಯಿಂದ ಯೋಗಿ ಜಿ.ರಾಜ್ ಈ ಚೆಲುವೆ ಕಾಲ್ ಮಡಿದ್ದರು.
ಇದನ್ನೂ ಓದಿ :ಪುನೀತ್ ರಾಜ್‌ಕುಮಾರ್ ಜಾಕಿ ಚಿತ್ರ ಮರು-ಬಿಡುಗಡೆ ಬಾಕ್ಸ್ ಆಫೀಸ್ ಕಲೆಕ್ಷನ್ 2024
ಐಪಿಎಲ್ ಪಂದ್ಯ ನೋಡ್ತಿದ್ದ ಸಪ್ತಮಿ ಗೌಡ ಕಾಲ್ ರಿಸೀವ್ ಮಾಡಿ ಮಾತನಾಡಿದ್ದರು. ಯೋಗಿ ಜಿ.ರಾಜ್ ಕೇಳಿದ್ದ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದರು. ತಮ್ಮ ಹೈಟ್ ಎಷ್ಟು ಅಂತ ಕೇಳಿದಕ್ಕೂ ೫ ಅಡಿ ಮೇಲೆ ಇದೆ ಅಂತಲೂ ಹೇಳಿದ್ದರು….
ಕೆ.ಆರ್.ಜಿ ಸ್ಟುಡಿಯೋಸ್ ಕಚೇರಿಯಲ್ಲಿಯೇ ಫೋಟೋ ಶೂಟ್
ಕೆ.ಆರ್.ಜಿ. ಸ್ಟುಡಿಯೋಸ್‌ನಲ್ಲಿಯೇ ಸಪ್ತಮಿ ಗೌಡ ಹಾಗೂ ಯುವರಾಜಕುಮಾರ್ ಅವರನ್ನ ಒಟ್ಟಿಗೆ ನಿಲ್ಲಿಸಿ ನೋಡಿದ್ರು. ಹೈಟ್ ಓಕೆ ಅಂದ್ಮೇಲೇನೆ ಫೋಟೋ ಶೂಟ್ ಕೂಡ ಮಾಡಲಾಗಿತ್ತು. ಆ ಫೋಟೋಗಳು ಈಗಲೂ ಸೋಷಿಯಲ್ ಮೀಡಿಯಾದಲ್ಲಿ ಸಿಗುತ್ತವೆ.
ಹೀಗೆ ಯುವ ಚಿತ್ರಕ್ಕೆ ಆಯ್ಕೆ ಆದ ಸಪ್ತಮಿ ಗೌಡ ಸಿನಿಮಾದಲ್ಲಿ ತಮಗೆ ಕೊಟ್ಟ ಪಾತ್ರವನ್ನ ಚೆನ್ನಾಗಿ ಮಾಡಲು ಪ್ರಯತ್ನಿಸಿದ್ದಾರೆ. ಹಾಡುಗಳಲ್ಲಿ ಚೆನ್ನಾಗಿಯೂ ಕಾಣಿಸಿದ್ದಾರೆ. ಇದರೊಟ್ಟಿಗೆ ಮಂಗಳೂರಿನ ಹುಲಿ ಡ್ಯಾನ್ಸ್ ಅನ್ನೂ ಸೂಪರ್ ಆಗಿಯೇ ಈ ಸಿನಿಮಾದಲ್ಲಿ ಮಾಡಿದ್ದಾರೆ.
ಯುವ ಸಿನಿಮಾ ಫ್ಯಾಮಿಲಿಗಳ ಹೃದಯ ಗೆಲ್ಲುತ್ತಿದೆ
ಯುವ ಸಿನಿಮಾವನ್ನ ಡೈರೆಕ್ಟರ್ ಸಂತೋಷ್ ಆನಂದ್ ರಾಮ್ ಚೆನ್ನಾಗಿ ಮಾಡಿದ್ದಾರೆ. ಅಪ್ಪ-ಮಗನ ಬಾಂಧವ್ಯದ ಕಥೆಯನ್ನ ತುಂಬಾನೆ ಚೆನ್ನಾಗಿ ಮಾಡಿದ್ದಾರೆ. ಈ ಎಲ್ಲ ವಿಚಾರದ ಜೊತೆಗೆ ಬೇರೆ ಬೇರೆ ವಿಷಯಗಳನ್ನು ಸಿನಿಮಾದಲ್ಲಿ ತೆಗೆದುಕೊಂಡು ಬಂದಿದ್ದಾರೆ.
ಜಾಹೀರಾತು
ಇದನ್ನೂ ಓದಿ : ಪ್ರಶಾಂತ್ ನೀಲ್ – ಜೂ.ಎನ್ಟಿಆರ್ ಸಿನಿಮಾದ ಬುಗ್ ಅಪ್ಡೇಟ್ : ಏರು ಭಾಗದಲ್ಲಿ ತರಲು ಸಿದ್ಧತೆ
ಕುಸ್ತಿ ಕೂಡ ಈ ಸಿನಿಮಾದ ಒಂದು ಪ್ರಮುಖ ವಿಷಯವೇ ಆಗಿದೆ. ಈ ಮೂಲಕ ಯುವ ಒಳ್ಳೆ ಅಭಿನಯ ಕೂಡ ತೋರಿದ್ದಾರೆ. ಅರ್ಜುನ್ ರಾಜ್ ಸಾಹಸ ನಿರ್ದೇಶನದ ಆ್ಯಕ್ಷನ್‌ಗಳು ಸೂಪರ್ ಆಗಿಯೇ ಬಂದಿವೆ. ಒಂದಕ್ಕಿಂತ ಒಂದು ಅನ್ನುವ ಹಾಗೆ ಇಡೀ ಸಿನಿಮಾದಲ್ಲಿರೋ ಆ್ಯಕ್ಷನ್‌ಗಳು ಥ್ರಿಲ್ ಮೂಡಿಸುತ್ತವೆ.
ಯುವ ಸಿನಿಮಾದಲ್ಲಿರೋ ಆ ಎರಡು ಪಾತ್ರಗಳು ಪ್ರಮುಖ
ಯುವರಾಜಕುಮಾರ್ ಅಭಿನಯದ ಈ ಯುವ ಚಿತ್ರದಲ್ಲಿ ಎರಡು ಕ್ಯಾರೆಕ್ಟರ್‌ಗಳು ಹೆಚ್ಚು ಗಮನ ಸೆಳೆಯುತ್ತವೆ. ಯುವನ ಜೀವನದಲ್ಲಿ ಬರೋ ಈ ಎರಡು ಪಾತ್ರಗಳು ಮಹತ್ವದ ಪಾತ್ರವನ್ನೆ ನಿರ್ವಹಿಸುತ್ತವೆ. ಹಾಗೆ ಗೋಪಾಲಕೃಷ್ಣ ದೇಶಪಾಂಡೆ ಇಲ್ಲಿ ಪ್ರಿನ್ಸಿಪಾಲ್ ಆಗಿಯೇ ಯುವನಿಗೆ ಹೆಲ್ಪ್ ಮಾಡುತ್ತಾರೆ.
ನಟ ಕಿಶೋರ್ ಇಲ್ಲಿ ಕುಸ್ತಿ ಕೋಚ್ ಆಗಿ ಯುವನ ಬದುಕಿನ ಹಾದಿಗೆ ಒಂದು ಅರ್ಥ ಕೊಡುತ್ತಾರೆ. ಹೀಗೆ ಈ ಎರಡು ಪಾತ್ರಗಳು ಸಿನಿಮಾದಲ್ಲಿ ಹೆಚ್ಚು ಮಹ್ವ ಪಡೆದುಕೊಂಡಿವೆ ಅಂತಲೂ ಹೇಳಬಹುದು.