ನಾಗಚೈತನ್ಯ ಮತ್ತು ಸಮಂತಾ ದೂರವಾಗಿ ಹತ್ ಹತ್ರ ನಾಲ್ಕು ವರ್ಷಗಳಾಗಿವೆ. ಆದರೆ ಇಬ್ಬರು ದೂರವಾಗಲು ಅಸಲಿ ಕಾರಣವೇನು ಅನ್ನುವುದಕ್ಕೆ ಉತ್ತರ ಮಾತ್ರ ಇನ್ನೂ ಸಿಕ್ಕಿಲ್ಲ. ಹೀಗಾಗಿಯೇ ಇವತ್ತು ಕೂಡ ಆ ಕಾರಣವನ್ನ ಹುಡುಕುತ್ತಿರುವ ಅನೇಕರು ಈಗ ನಾಗಚೈತನ್ಯಗೆ ಪರಸ್ತ್ರೀ ಮೇಲಿದ್ದ ಮೋಹವೇ ಇವರಿಬ್ಬರ ಸಂಬಂಧಕ್ಕೆ ಮುಳ್ಳಾಯಿತು ಅನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಹೌದು, ಅಸಲಿಗೆ ಸಮಂತಾ ಜೊತೆ ಮದುವೆಯಾದ ಮರುವರ್ಷವೇ ಅಂದರೆ 2018ರಲ್ಲಿ, ನಾಗ ಚೈತನ್ಯ ಅವರ ಶೈಲಜಾ ರೆಡ್ಡಿ ಅಲ್ಲುಡು ಚಿತ್ರ ತೆರಗೆ ಬಂದಿತ್ತು. ಇದೇ ಸಮಯದಲ್ಲಿ ನಾಗಚೈತನ್ಯ ಸಂದರ್ಶನ ನೀಡಿದ್ದರು. ಚಿತ್ರದ ಕುರಿತು ಹಲವಾರು ವಿಚಾರ ಮಾತನಾಡಿದ್ದರು.
ಆದರೆ ಅದೊಂದು ಸಂದರ್ಶನದಲ್ಲಿ ಸಂಬಂಧದಲ್ಲಿ ಯಾವಾಗಲಾದ್ರೂ ಮೋಸ ಮಾಡಿದ್ದೀರಾ ಎಂಬ ಪ್ರಶ್ನೆ ಎದುರಾಯಿತು. ಈ ಪ್ರಶ್ನೆಗೆ ಚಿತ್ರದ ನಾಯಕಿ ಅನು ಇಮ್ಯಾನ್ಯುಯಲ್ಇಲ್ಲ ಎಂದು ಉತ್ತರವನ್ನ ಕೊಟ್ಟಿದ್ದರು. ಆದರೆ.. ನಾಗ ಚೈತನ್ಯ ಹೌದು ಎಂದು ಒಪ್ಪಿಕೊಂಡಿದ್ದರು.
ಸಂಬಂಧದ ಸುತ್ತ ಮುತ್ತ ಮಾತನಾಡಿದ್ದ ನಾಗಚೈತನ್ಯ ಜೀವನದಲ್ಲಿ ಎಲ್ಲರೂ ಎಲ್ಲದರ ಅನುಭವ ಪಡೆಯಬೇಕು. ಆಗಲೇ ನೀವು ಬೆಳೆಯುವುದು. ಅರ್ಥ ಮಾಡಿಕೊಳ್ಳುವುದು. ನಾನು ಎಲ್ಲ ಅನುಭವ ಪಡೆದಿದ್ದೇನೆ. ಆದರೆ ಈಗ ಸೆಟಲ್ಆಗುವ ಸಮಯ ಎಂದು ಹೇಳಿದ್ದರು.
ಅವತ್ತು ನಾಗಚೈತನ್ಯ ಆಡಿದ್ದ ಈ ಮಾತು ಇವತ್ತು ವೈರಲ್ ಆಗ್ತಿವೆ. ಸಾಮಾಜಿಕ ಜಾಲತಾಣದಲ್ಲಿ ಸಂದರ್ಶನದ ವಿಡಿಯೋ ಹರಿದಾಡ್ತಿದೆ.
ಈ ವಿಡಿಯೋವನ್ನೇ ಮುಂದಿಟ್ಟುಕೊಂಡು ಚರ್ಚೆಯನ್ನ ಮಾಡುತ್ತಿರುವ ಅನೇಕರು, ನಾಗಚೈತನ್ಯ ಅವರ ಈ ನಡೆ ಮತ್ತು ನುಡಿಗಳಿಂದ ಬೇಸತ್ತೇ ಸಮಂತಾ ವಿಚ್ಛೇದನ ನೀಡಿದ್ದರು ನೀಡಿರಬಹುದು ಎಂದು ಮಾತನಾಡುತ್ತಿದ್ದಾರೆ. ಇನ್ನೂ ಕೆಲವರು ಕೊನೆಗೂ ತಪ್ಪು ಒಪ್ಪಿಕೊಂಡ್ರಲ್ಲಸಾಕು ಬಿಡಿ ಎನ್ನುತ್ತಿದ್ದಾರೆ. ಇದರ ನಡುವೆ ಶೋಭಿತಾ ಹೆಸರನ್ನೂ ಕೂಡ ಚರ್ಚೆಯಲ್ಲಿ ಎಳೆದು ತರುತ್ತಿದ್ದಾರೆ.
ಯಾಕೆಂದರೆ.. ಸಮಂತಾ ಅವರಿಂದ ದೂರವಾದ ನಂತರ ನಾಗಚೈತನ್ಯ, ಶೋಭಿತಾ ಜೊತೆ ಸುತ್ತಾಡುತ್ತಿದ್ದಾರೆ ಅನ್ನುವ ಅನುಮಾನ ಅನೇಕರಲ್ಲಿದೆ. ಇದಕ್ಕೆ ಪೂರಕವಾಗಿ ಮೊನ್ನೆಯಷ್ಟೇ ನಾಗಚೈತನ್ಯ ಮತ್ತು ಶೋಭಿತಾ ಕಾಡು-ಮೇಡು ಸುತ್ತಾಡಿರುವ ಫೋಟೋ ವೈರಲ್ ಆದ ಬೆನ್ನಲ್ಲಿಯೇ ಇಬ್ಬರಿಗೂ ಪ್ರೇಮದ ಅಮಲು ಏರಿರುವುದು ನೂರಕ್ಕೆ ನೂರು ನಿಜಾ ಎಂಬ ಅಭಿಪ್ರಾಯ ಸಾರ್ವತ್ರಿಕ ವಲಯದಲ್ಲಿಯೂ ವ್ಯಕ್ತವಾಗಿದೆ ಈ ಕಾರಣದಿಂದ ಶೋಭಿತಾ-ನಾಗಚೈತನ್ಯ ಮತ್ತು ಸಮಂತಾ ಮತ್ತೊಮ್ಮೆ ಆಂಧ್ರದಲ್ಲಿ ಸುದ್ದಿಯಲ್ಲಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿಯೂ ಟ್ರೆಂಡಿಂಗ್ ನಲ್ಲಿದ್ದಾರೆ. ಒಟ್ನಲ್ಲಿ ಸದ್ಯಕ್ಕೆ ನಾಗಚೈತನ್ಯ ಅವರ ಹಳೆಯ ಸಂದರ್ಶನದ ವಿಡಿಯೋ ಒಂದು ವೈರಲ್ ಆಗಿದೆ. ಹೊಸದೊಂದು ಚರ್ಚೆಯನ್ನ ಈ ವಿಡಿಯೋ ಹುಟ್ಟುಹಾಕಿದೆ.