ಕೆಲ ದಿನಗಳ ಹಿಂದಷ್ಟೆ ನಟಿ ಅದಿತಿ ಪ್ರಭುದೇವ ಅವರಿಗೆ ಹೆಣ್ಣು ಮಗುವಿನ ಜನನವಾಗಿದೆ. ಗರ್ಭಿಣಿಯಾಗಿದ್ದಾಗ ಆರೋಗ್ಯವಾಗಿರಲು ಏನೆಲ್ಲಾ ಮಾಡುತ್ತಿದ್ದರು ಎಂಬುದನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.
ನಟಿ ಗರ್ಭಿಣಿಯಾದ ಮೇಲೂ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿಯೇ ಇದ್ದರು. ಗರ್ಭಿಣಿಯರಿಗೆ ಸಹಜವಾಗಿ ಕಾಡುವ ಸಮಸ್ಯೆಗಳ ಬಗ್ಗೆ ಕೆಲವು ವಿಡಿಯೋ ಮಾಡಿದದರು. ಅದಕ್ಕೆ ಕೆಲವೊಂದು ಪರಿಹಾರ ನೀಡಿದ್ದರು. ಕಾಲು ಊದಿಕೊಳ್ಳುವುದು ಹಲವು ಗರ್ಭಿಣಿಯರಿಗೆ ಸಾಮಾನ್ಯ.
ಇಡೀ ದೇಹದಲ್ಲಿನ ಪ್ರಕ್ರಿಯೆ ಒಂದೇ ಸಮನೆ ಬದಲಾಗುವ ಕಾರಣ, ದೇಹ ಮತ್ತು ಮನಸ್ಸು ಎರಡರ ಮೇಲೂ ಸಾಕಷ್ಟು ಪ್ರಭಾವ ಬೀರುತ್ತದೆ. ಕೆಲವೊಂದು ದೈಹಿಕ ಸಮಸ್ಯೆಗಳು ಕಾಣಿಸುತ್ತವೆ. ಅಂಥದ್ದರಲ್ಲಿ ಒಂದು ಕಾಲು ಊದಿಕೊಳ್ಳುವುದು. ಅದಕ್ಕೆ ಏನೇನು ಪರಿಹಾರ ಮಾಡಿಕೊಳ್ಳಬಹುದು ಎಂಬ ಮಾಹಿತಿಯನ್ನು ಅದಿತಿ ನೀಡಿದ್ದರು.
ತಾವು ಗರ್ಭಿಣಿಯಾಗಿದ್ದಾಗ ಹೇಗೆಲ್ಲಾ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದೆ ಎನ್ನುವ ಬಗ್ಗೆ ನಟಿ ಹೇಳಿದ್ದಾರೆ. ಬೆಳಿಗ್ಗೆ ಬಿಸಿಯಾದ ನೀರು ಕುಡಿದು, ಏನಾದರೂ ಹಣ್ಣು ತಿಂದು ವ್ಯಾಯಾಮ ಮಾಡಲು ಹೋಗುತ್ತೇನೆ ಎಂದಿದ್ದಾರೆ ನಟಿ. ಇವರ ಈ ವಿಡಿಯೋ ಮಾಡಿದಾಗ ಎಂಟು ತಿಂಗಳು ತುಂಬಿದ್ದರಿಂದ ಈ ಸಮಯದಲ್ಲಿ ವೈದ್ಯರ ಸಲಹೆ ಪಡೆದು ವ್ಯಾಯಾಮ ಮಾಡುವಂತೆ ಹೇಳಿದ್ದಾರೆ.
ತಾವು ರೆಗ್ಯುಲರ್ ಆಗಿ ಯೋಗ, ವ್ಯಾಯಾಮ ಮಾಡುತ್ತಿದ್ದುದರಿಂದ ತಮಗೆ ಯಾವುದೇ ಸಮಸ್ಯೆಯಾಗಿಲ್ಲ ಎಂದಿರುವ ಅವರು, ಹೊಸದಾಗಿ ಮಾಡುವುದಿದ್ದರೆ ವೈದ್ಯರ ಇಲ್ಲವೇ ಪರಿಣತದ ಸಲಹೆ ಪಡೆದು ಅದನ್ನು ಶುರು ಮಾಡುವಂತೆ ಹೇಳಿದ್ದಾರೆ. ಗರ್ಭಿಣಿಯಾಗಿದ್ದಾಗ ಮನಸ್ಸು ಉಲ್ಲಾಸವಾಗಿರಲಿ, ಹಿತವಾಗಿರಲಿ ಎನ್ನುವ ಕಾರಣಕ್ಕೆ ಹೀಗೆ ಮಾಡಿದರೆ ಒಳ್ಳೆಯದು ಎಂದಿದ್ದಾರೆ.
ಗರ್ಭಿಣಿ ಟೈಂನಲ್ಲಿ ಬಾಡಿಯಲ್ಲಿ ಏನೇನೋ ಬದಲಾವಣೆಗಳು ಆಗುತ್ತವೆ. ದೇಹ ಊದಿಕೊಳ್ಳುವುದರ ಜೊತೆಗೆ ಏನೇನೋ ಸಮಸ್ಯೆ ಆಗುತ್ತವೆ. ಆದ್ದರಿಂದ ಮೊದಲಿನಿಂದಲೂ ಯೋಗ, ಧ್ಯಾನ, ವ್ಯಾಯಾಮ ಮಾಡುತ್ತಾ ಬಂದರೆ ಒಳ್ಳೆಯದು. ಗರ್ಭಿಣಿಯಾದ ಸಮಯದಲ್ಲಿ ಇವೆಲ್ಲಾ ಉಪಯೋಗಕ್ಕೆ ಬರುತ್ತದೆ ಎನ್ನುವುದು ನಟಿ ಅದಿತಿಯ ಮಾತು. ಒಂದೇ ಸಲಕ್ಕೆ ಗರ್ಭಿಣಿಯಾದಾಗ ಈ ರೀತಿಯ ಪ್ರಯೋಗ ಮಾಡಬೇಡಿ ಎಂದೂ ನಟಿ ಟಿಪ್ಸ್ ಕೊಟ್ಟಿದ್ದಾರೆ.
ಸಾಮಾನ್ಯವಾಗಿ ಮನೆಯಲ್ಲಿ ಹೆಚ್ಚು ಕೆಲಸ ಮಾಡುವವರು ಇಲ್ಲವೇ ಕಚೇರಿಗೆ ಹೋಗುವ ಗರ್ಭಿಣಿಯರು ಅಲ್ಲಿಯ ಓಡಾಟದಿಂದಲೇ ಸಾಕಷ್ಟು ವ್ಯಾಯಾಮ ಸಿಗುತ್ತದೆ ಎನ್ನುತ್ತಾರೆ. ಆದರೆ ಇದು ಸರಿಯಲ್ಲ ಎಂದಿರುವ ಅದಿತಿ, ತಮ್ಮ ಮನೆಯ ಕೆಲಸವನ್ನು ಸಂಪೂರ್ಣವಾಗಿ ನಾನೇ ಮಾಡಿದರೂ, ಗರ್ಭಿಣಿಯಾದಾಗ ವ್ಯಾಯಾಮ ಮಾಡಿರುವುದಾಗಿ ಹೇಳಿದ್ದಾರೆ. ಜೊತೆಗೆ ತಿನ್ನುವ ಆಹಾರ ಹೇಗಿರಬೇಕು ಎಂಬುದನ್ನೂ ತಿಳಿಸಿದ್ದಾರೆ.