ಅರ್ಚನಾ ಜೋಯಿಸ್ ಕನ್ನಡ ಕಿರುತೆರೆಯಲ್ಲಿ ಪ್ರಸಿದ್ಧ ಹೆಸರು ಮಾಡಿದ್ದವರು. ಝೀ ಕನ್ನಡದ `ಮಹಾದೇವಿ’ ಧಾರಾವಾಹಿಯಲ್ಲಿ ತ್ರಿಪುರಸುಂದರಿ ಪಾತ್ರದಲ್ಲಿ ನಟಿಸುವ ಮೂಲಕ ಕಿರುತೆರೆ ಪ್ರವೇಶಿಸಿದರು. ನಂತರ ಸುವರ್ಣ ವಾಹಿನಿಯ `ದುರ್ಗಾ’ ಧಾರಾವಾಹಿಯಲ್ಲಿ `ದುರ್ಗಾ’ ಪಾತ್ರದ ಮೂಲಕ ಮನೆ ಮಾತಾದರು. ಬಳಿಕ ಕೆ.ಜಿ.ಎಫ್ ಚಿತ್ರದಲ್ಲಿ ಯಶ್ ತಾಯಿ ಪಾತ್ರದಲ್ಲಿ ಮನೋಘ್ನವಾಗಿ ಅಭಿನಯಿಸಿದ್ದಾರೆ.
ತಮ್ಮ ಹನ್ನೋಂದನೇ ವಯಸ್ಸಿನಿಂದ ನೃತ್ಯದಲ್ಲಿ ಆಸಕ್ತಿ ಪಡೆದಿದ್ದ ಇವರು `ಮಾಯಾರಾವ್ ನಾಟ್ಯ ಇನ್ಸ್ಟಿಟ್ಯೂಟ್ ಆಫ್ ಕಥಕ್ ಆಂಡ್ ಕೋರಿಯೋಗ್ರಾಫಿ’ಯಿಂದ ನೃತ್ಯದಲ್ಲಿ ಪದವಿ ಪಡೆದರು.ಇವರ ನೃತ್ಯಗುರು ಅನುರಾಧಾ ವಿಕ್ರಾಂತ್.ಕಥಕ್ ಮಾತ್ರವಲ್ಲದೇ ಭರತನಾಟ್ಯ, ಇಂಡಿಯನ್ ಮಾರ್ಷಲ್ ಆರ್ಟ್ಸ್ ಮತ್ತು ಇಂಡಿಯನ್ ಕಾಂಟೆಪರರಿಯನ್ನು ಕಲಿತಿದ್ದಾರೆ.
ಅರ್ಚನಾ ದೃಷ್ಟಿ ಸೆಂಟರ್ ಮತ್ತು ನಾಟ್ಯ ಗ್ರೂಪ್ನ ಮೂಲಕ ಭಾರತ ಮತ್ತು ವಿದೇಶಾದ್ಯಂತ ಇನ್ನೂರಕ್ಕೂ ಹೆಚ್ಚು ನೃತ್ಯ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ತಂದೆ ಮತ್ತು ಪತಿಯ ಬೆಂಬಲದಿಂದ ಯೋಗ ಮತ್ತು ಜಿಮ್ನಾಸ್ಟಿಕ್ ನಲ್ಲೂ ತೊಡಗಿಕೊಂಡಿದ್ದಾರೆ. ಕೆಜಿಎಫ್ ಚಿತ್ರದ ನಟನೆಗಾಗಿ ಸೈಮಾ ಅತ್ತ್ಯುತ್ತಮ ಪೋಷಕ ಪ್ರಶಸ್ತಿ ಪಡೆದಿದ್ದಾರೆ, ಕೆಜಿಎಫ್ ಸಿನಿಮಾ ಬಳಿಕ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದ ನಟಿ ಅರ್ಚನಾ ಜೋಯಿಸ್.
ಬಳಿಕ ಮಾಡಿದ ಒಂದೊಂದು ಸಿನಿಮಾಗಳು ಒಳ್ಳೆ ಹೆಸರನ್ನು ತಂದುಕೊಟ್ಟಿವೆ. ಕ್ಷೇತ್ರಪತಿ, ಹೊಂದಿಸಿ ಬರೆಯಿರಿ, ಘೋಸ್ಟ್ ಸಿನಿಮಾಗಳಲ್ಲಿ ಅರ್ಚನಾ ಅಭಿನಯಕ್ಕೆ ಜನ ಫಿದಾ ಆಗಿದ್ದಾರೆ. ಸದ್ಯಕ್ಕೆ ಯುದ್ದಕಾಂಡ2 ಸಿನಿಮಾ ರಿಲೀಸ್ಗೆ ಬಾಕಿ ಇದೆ. ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಕೆಲಸ ಶುರುವಾಗಿದ್ದು, ಶೀಘ್ರದಲ್ಲೇ ರಿಲೀಸ್ ಆಗಲಿದೆ. ಉಳಿದಂತೆ ಒಂದಷ್ಟು ಸಿನಿಮಾದ ಕಥೆಗಳನ್ನು ಕೇಳುತ್ತಾ ಇದ್ದಾರೆ. ಆದರೆ ಯಾವುದನ್ನು ಒಪ್ಪಿಕೊಂಡಿಲ್ಲ. ರಿಯಾಲಿಟಿಗೆ ಹತ್ತಿರವಾದಂತ ಕಥೆಗಳು ಅರ್ಚನಾ ಅವರನ್ನು ಇಂಪ್ರೆಸ್ ಮಾಡುತ್ತವಂತೆ.