Sandalwood Leading OnlineMedia

ಕಿರಣ್‌ ರಾಜ್‌ ಕಾರು ಅಪಘಾತಕಕ್ಕೆ ಕಾರಣವೇನು..?

ಕನ್ನಡತಿ ಸೀರಿಯಲ್ ಮೂಲಕ ಎಲ್ಲರ ಮನಗೆದ್ದ ಮೋಸ್ಟ್ ಹ್ಯಾಂಡ್ಸಮ್ ಹೀರೋ ಕಿರಣ್ ರಾಜ್ ಗೆ ಅಪಘಾತವಾಗಿದೆ. ನಾಳೆ ರಾಜ್ಯಾದ್ಯಂತ ರಾನಿ ಸಿನಿಮಾ ರಿಲೀಸ್ ಆಗಬೇಕಿತ್ತು. ಸಿನಿಮಾ ಸಲುವಾಗಿ ಸಿಕ್ಕಾಪಟ್ಟೆ ಓಡಾಟ ನಡೆಸಿದ್ದರು. ಇದೇ ಬ್ಯುಸಿಯಲ್ಲಿರುವಾಗಲೇ ಕಾರು ಅಪಘಾತಕ್ಕೆ ಕಾರಣವಾಗಿದೆ. ಕಿರಣ್ ರಾಜ್ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದಿದ್ದು, ಜೋರು ಪೆಟ್ಟಾಗಿದೆ.

ಕಿರಣ್ ರಾಜ್ ಎದೆಯ ಭಾಗಕ್ಕೆ ಜೋರು ಪೆಟ್ಟಾಗಿದೆ. ನಟ ಕಿರಣ್ ರಾಜ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಕ್ಸ್ ರೇ ಮಾಡಿಸಿ, ಚಿಕಿತ್ಸೆ ಕೂಡ ನೀಡಲಾಗುತ್ತಿದೆ. ಕಿರಣ್ ರಾಜು ಕಾರು ಫುಲ್ ಜಖಂ ಆಗಿದೆ. ಅವರ ಜೊತೆಗಿದ್ದ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಸೀಟ್ ಬೆಲ್ಟ್ ಹಾಕಿದ್ದ ಪರಿಣಾಮ ಬಚಾವ್ ಆಗಿದ್ದಾರೆ. ಕಿರಣ್ ರಾಜ್ ಗೆ ಚಿಕಿತ್ಸೆ ನಡೆಯುತ್ತಿದ್ದು, ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ.

ಇನ್ನು ಈ ಅಪಘಾತಕ್ಕೆ ಕಾರಣವೇನು ಎಂಬುದನ್ನು ನಿರ್ದೇಶಕ ಗುರುತೇಜ್ ಶೆಟ್ಟಿ ತಿಳಿಸಿದ್ದಾರೆ. ನಾಳೆ ಸಿನಿಮಾ ರಿಲೀಸ್ ಸಲುವಾಗಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ವಿ. ಸಿದ್ದೇಶ್ವೆ ಸೇವಾಶ್ರಮಕ್ಕೂ ಭೇಟಿ ನೀಡಿ, ಅಲ್ಲಿದ್ದವರಿಗೆಲ್ಲಾ ಊಟ ಬಡಿಸಿ, ಚೇರ್ ವ್ಯವಸ್ಥೆ ಮಾಡಿಸುತ್ತೇವೆ ಎಂದು ಭರವಸೆ ನೀಡಿ ಅಲ್ಲಿಂದ ವಾಪಾಸ್ ಆಗುತ್ತಿದ್ದೆವು. ದಾರಿ ಮಧ್ಯೆ ಮುಂಗುಸಿ ಒಂದು ಅಡ್ಡ ಬಂತು. ಅದನ್ನು ತಪ್ಪಿಸಲು ಹೋಗಿ ಈ ಅಪಘಾತ ಆಗಿದೆ. ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಕಿರಣ್ ರಾಜ್ ಹಿಂದೆ ಕುಳಿತುಕೊಂಡು ವಿಡಿಯೋ ಎಡಿಟಿಂಗ್ ಮಾಡುತ್ತಿದ್ದರು. ಆಕ್ಸಿಡೆಂಟ್ ಆಗುತ್ತಿದ್ದಂತೆ ಅವರಿಗೆ ಜೋರಾಗಿ ಪೆಟ್ಟು ಬಿದ್ದಿದೆ. ನಾನು ನೋಡಿದಾಗ ಅವರಿಗೆ ಪ್ರಜ್ಞೆ ಇರಲಿಲ್ಲ. ಅಭಿಮಾನಿಗಳು ಆತಂಕ ಪಡಬೇಡಿ. ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದಿದ್ದಾರೆ.

Share this post:

Related Posts

To Subscribe to our News Letter.

Translate »