Left Ad
ರಮ್ಯಾ ಜೊತೆಗಿನ ದುಷ್ಮನಿ ಬಗ್ಗೆ ನಟಿ ರಕ್ಷಿತಾ ಹೇಳಿದ್ದೇನು..? - Chittara news
# Tags

ರಮ್ಯಾ ಜೊತೆಗಿನ ದುಷ್ಮನಿ ಬಗ್ಗೆ ನಟಿ ರಕ್ಷಿತಾ ಹೇಳಿದ್ದೇನು..?

 

ಸ್ಯಾಂಡಲ್ವುಡ್ ಕಂಡ ಸ್ಟಾರ್ ನಟಿಯರ ಪೈಕಿ ರಮ್ಯಾ ಮತ್ತು ರಕ್ಷಿತಾ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತದೆ. ಎರಡು ದಶಕಗಳ ಹಿಂದೆ ಈ ನಟಿಯರು ಇಡೀ ಸ್ಯಾಂಡಲ್ವುಡ್ ಚಿತ್ರರಂಗವನ್ನೇ ಆಳುತ್ತಿದ್ದರು. ಸ್ಟಾರ್ ಹೀರೋಗಳಿಗೆ ನಾಯಕಿಯರಾಗಿ ಒಂದಾದ ಮೇಲೊಂದು ಹಿಟ್ ಸಿನಿಮಾಗಳನ್ನು ನೀಡುತ್ತಲೇ ಬಂದಿದ್ದರು.

 

ರಮ್ಯಾ-ರಕ್ಷಿತಾ ನಡುವೆ ಈಗ ಎಂತಹ ಸಂಬಂಧ ಉಳಿದಿದೆ? ಇಲ್ಲಿದೆ ಉತ್ತರ - Kannada News | Ramya gifts a beautiful saree for actress rakshita prem mdn Kannada News

ಇದನ್ನೂ ಓದಿ:ನನ್ನ ಶಕ್ತಿ – ಕನ್ನಡ , ನನ್ನ ದೌರ್ಬಲ್ಯ – ಕನ್ನಡಿ ! -ಮಾಸ್ತಿ (ಖ್ಯಾತ ಸಂಭಾಷಣೆಗಾರ) ; Chittara Exclusive

ಬರೀ ಕನ್ನಡ ಸಿನಿಮಾಗಳಿಗಷ್ಟೇ ಸೀಮಿತವಾಗದ ಈ ಇಬ್ಬರು ನಟಿಯರು, ಪಕ್ಕದ ತೆಲುಗು, ತಮಿಳು ಚಿತ್ರೋದ್ಯಮದಲ್ಲೂ ಹೆಸರು ಮಾಡಿದ್ದರು. ಸ್ಟಾರ್ ಡಮ್ ಸೃಷ್ಟಿಸಿಕೊಂಡಿದ್ದರು.

2002ರಲ್ಲಿ ವಜ್ರೇಶ್ವರಿ ಕಂಬೈನ್ಸ್ನಲ್ಲಿ ಪುನೀತ್ ರಾಜ್ಕುಮಾರ್ ಅವರ ಅಪ್ಪು ಸಿನಿಮಾ ಮೂಲಕ ಚಂದನವನಕ್ಕೆ ಪರಿಚಿತರಾದರು ರಕ್ಷಿತಾ. ಮೊದಲ ಚಿತ್ರವೇ ಸೂಪರ್ ಹಿಟ್ ಆಗ್ತಿದ್ದಂತೆ, ಸಾಕಷ್ಟು ಸಿನಿಮಾ ಅವಕಾಶಗಳೂ ರಕ್ಷಿತಾ ಅವರನ್ನು ಅರಸಿ ಬಂದವು.

Happy Happy Birthdayyyy... - Divya Spandana/Ramya | Facebook

 

 

ಅದಾದ ಬಳಿಕ 2003ರಲ್ಲಿ ಅದೇ ಪುನೀತ್ ರಾಜ್ಕುಮಾರ್ ಜತೆಗೆ ಅಭಿ ಚಿತ್ರದಲ್ಲಿ ರಮ್ಯಾ ಅವರನ್ನು ಪರಿಚಯಿಸಿದರು ಪಾರ್ವತಮ್ಮ ರಾಜ್ಕುಮಾರ್. ಆ ಚಿತ್ರವೂ ಹಿಟ್ ಪಟ್ಟ ಪಡೆಯಿತು. ಅಲ್ಲಿಂದ ಶುರುವಾಯ್ತು ರಮ್ಯ ಚೈತ್ರ ಕಾಲ.

ಹೀಗೆ ಒಂದೇ ಸಮಯದಲ್ಲಿಯೇ ಸಿನಿಮಾರಂಗಕ್ಕೆ ಬಂದ ಈ ಇಬ್ಬರೂ ನಟಿಯರು ಒಂದಾದ ಮೇಲೊಂದು ಹಿಟ್ ಸಿನಿಮಾಗಳನ್ನು ನೀಡಿದರು. ಯಶಸ್ಸಿನ ಓಟದಲ್ಲಿ ರಮ್ಯಾ ಓಡುತ್ತಿದ್ದರೆ, ಇತ್ತ ಅದೇ ವೇಗದಲ್ಲಿ ರಕ್ಷಿತಾ ಸಹ ಗೆಲುವಿನ ಓಟ ಮುಂದುವರಿಸಿದ್ದರು. ಆ ವೇಳೆ ಒಬ್ಬರಿಗೊಬ್ಬರು ಮುಖ ನೋಡಲಾರದಷ್ಟು ದುಷ್ಮನಿ ಇಬ್ಬರಲ್ಲೂ ಇತ್ತು ಎಂಬ ಮಾತಿದೆ.

ಇದನ್ನೂ ಓದಿ:ನಟಿ ಪರಿಣಿತಿ ಚೋಪ್ರಾ ಪತಿಯ ಕಣ್ಣಿಗೆ ಲಂಡನ್ ನಲ್ಲಿ ಶಸ್ತ್ರ ಚಿಕಿತ್ಸೆ

ಈ ಬಗ್ಗೆ Rapid Rashmi ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಉತ್ತರಿಸಿದ್ದಾರೆ ರಕ್ಷಿತಾ, ” ಇದು ಹೇಗೆ ಕ್ರಿಯೇಟ್ ಆಗ್ತಿತ್ತು ಎಂಬುದು ನನಗಂತೂ ಗೊತ್ತಿಲ್ಲ. ನನ್ನ ಕಡೆಯಂತೂ ಆ ಥರ ಇರಲಿಲ್ಲ. ನಾನು ಯಾವತ್ತೂ ಪೈಪೋಟಿಗೆ ಬಿದ್ದಿರಲಿಲ್ಲ. ನಾನು ಈಗ ನೆನಪಿಸಿಕೊಂಡರೆ, ನಮ್ಮಿಬ್ಬರ ನಡುವಿನ ಆ ಜಗಳ ಇಲ್ಲದೇ ಇದ್ದಿದ್ದರೆ, ನಮ್ಮ ಈ ಸಿನಿಮಾ ಪಯಣವೇ ಅಪೂರ್ಣ ಅಲ್ವಾ ಅಂತ ಅನಿಸಿದ್ದಿದೆ.

 

 

Rakshitha Prem On Appu, Love, Marriage, Nepotism, Life Struggles, Money & Spiritual Beliefs

 

ಇದನ್ನೂ ಓದಿ :Chittara exclusive : ಕಿರುತೆರೆಯ ಡಾಲ್.. ಎಲ್ಲರ ಮುದ್ದಿನ ಬೆಡಗಿ.. ಮಲೈಕಾ ಟಿ ವಸುಪಾಲ್

ಆ ಒಂದು ದ್ವೇಷ ಇದ್ದಿದ್ದಕ್ಕೇ ನಾವು ಜಿದ್ದಿಗೆ ಬಿದ್ದಂತೆ ಸಾಧನೆ ಮಾಡಲು ಸಾಧ್ಯವಾಯ್ತು. ಆ ಒಂದು ಜಿದ್ದು ಇಲ್ಲದಿದ್ದರೆ ನಾವು ಈ ಮಟ್ಟಕ್ಕೆ ಬರುತ್ತಿರಲಿಲ್ಲವೇನೋ? ಅದನ್ನ ಮಾಡಬೇಕು, ಇದನ್ನ ಮಾಡಬೇಕು ಅನ್ನೋ ತುಡಿತ ಇಬ್ಬರಲ್ಲೂ ಇತ್ತು. ಆದರೆ, ಇದು ಆರೋಗ್ಯಕರ ಕಾಂಪಿಟೇಷನ್ ಆಗಿರಲಿಲ್ಲ. ವೈಯಕ್ತಿಕವಾಗಿ ನೋಡಿದರೆ, ನಮಗೇನು ಸಿಕ್ತು ಅನ್ನೋ ಭಾವ ಕಾಡುತ್ತದೆ. ಆವತ್ತು ನಮ್ಮಿಬ್ಬರ ನಡುವೆ ತುಂಬ ಕಾಂಪಿಟೇಷನ್ ಇತ್ತು.

ಅದು ಒಳ್ಳೆಯ ಕಾಂಪಿಟೇಷನ್ ಆಗಿರಲಿಲ್ಲ. ಆಗ ಸೋಷಿಯಲ್ ಮೀಡಿಯಾ ಇರುತ್ತಿರಲಿಲ್ಲ. ಟ್ಯಾಬ್ಲಾಯ್ಡ್ಗಳಿಗೆ ರಮ್ಯಾ ಸಂದರ್ಶನ ಕೊಟ್ಟಿದ್ದರೆ, ಅದರ ಹಿಂದಿನ ದಿನ ನನಗೆ ಫೋನ್ ಬರ್ತಿತ್ತು. ರಮ್ಯಾ ಕುರಿತ ಒಂದು ಆರ್ಟಿಕಲ್ ಬರ್ತಿದೆ.

ನೀವೂ ನಿಮ್ಮ ಸ್ಟೇಟ್ಮೆಂಟ್ ಕೊಡಿ ಎನ್ನುತ್ತಿದ್ದರು. ಇದಕ್ಕೆ ನಿಮ್ಮ ಅನಿಸಿಕೆ ಏನು ಎಂದು ಕೇಳುತ್ತಿದ್ದರು. ಆಗ ನಾನು ಏನನ್ನೂ ಹೇಳುತ್ತಿರಲಿಲ್ಲ. ಆದರೆ, ಆ ಟೈಮ್ ನೆನಪಿಸಿಕೊಂಡರೆ, ಈಗಲೂ ನನಗೆ ಇರಿಟೇಟ್ ಆಗುತ್ತೆ ಎಂದಿದ್ದಾರೆ.

Spread the love
Translate »
Right Ad