ಬಾಲಿವುಡ್ ಖ್ಯಾತ ನಟ ಆಮೀರ್ ಖಾನ್ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ಗೆ ಎಂಟ್ರಿ ಕೊಟ್ಟಿದ್ದರು. ಕಪಿಲ್ ಶರ್ಮಾ ನಿರೂಪಣೆಯಲ್ಲಿ ನಟ ಆಮೀರ್ ಖಾನ್ ತಮ್ಮ ಪಿಕೆ (PK) ಸಿನಿಮಾದ ರೇಡಿಯೊ ದೃಶ್ಯದ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ :ಕಲ್ಕಿ 2898 AD ಚಿತ್ರದ ಬಿಡುಗಡೆ ದಿನಾಂಕ ಘೋಷಣೆ; ಜೂನ್ 27ರಂದು ಪ್ರಭಾಸ್ ಸಿನಿಮಾ ರಿಲೀಸ್
ಪಿಕೆ ಸಿನಿಮಾದ ಒಂದು ದೃಶ್ಯದಲ್ಲಿ ನಟ ಆಮೀರ್ ಖಾನ್ ಅವರು ಸಂಪೂರ್ಣ ನಗ್ನರಾಗಿ ಟೇಪ್ ರೆಕಾರ್ಡರ್ ಹಿಡಿದು ಓಡಿ ಹೋಗಿದ್ದರು. ಆಮೀರ್ ಖಾನ್ ನಗ್ನ ಪೋಸ್ಟರ್ಗೆ ಬಟ್ಟೆ ತೊಡಿಸಿ ಕಾಂಗ್ರೆಸ್ ಶಾಸಕನೋರ್ವ ಆಕ್ರೋಶ ಹೊರಹಾಕಿದ್ದ.
ಈಗ ಇದೇ ವಿಚಾರವಾಗಿ ನಟ ಆಮೀರ್ ಖಾನ್ ಕಪಿಲ್ ಶರ್ಮಾ ಶೋನಲ್ಲಿ ಮಾತಾಡಿದ್ದಾರೆ. ಶೂಟಿಂಗ್ ಸಂದರ್ಭದಲ್ಲಿ ಆ ಪಾತ್ರಕ್ಕೆ ತಕ್ಕಂತೆ ಹೋಲುವ ಒಂದು ಜೋಡಿ ಶಾರ್ಟ್ಸ್ ನೀಡಲಾಗುವುದು ಎಂದು ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಹೇಳಿದ್ದರು.
ಇದನ್ನೂ ಓದಿ :‘ಡೇರ್ ಡೆವಿಲ್ ಮುಸ್ತಾಫ’ ತಂಡದಿಂದ ಮತ್ತೊಂದು ವಿಭಿನ್ನ ಸಿನಿಮಾ ‘ಫ್ಯಾಮಿಲಿ ಡ್ರಾಮ’
ಆಗ ನಾವು ರಾಜಸ್ಥಾನದ ದೂರದ ಹಳ್ಳಿಯಲ್ಲಿ ಸಿನಿಮಾ ಶೂಟಿಂಗ್ ಮಾಡಲು ಶುರು ಮಾಡಿದ್ದೆವು. ಸೆಟ್‌ನಲ್ಲಿ ಯಾರೂ ಇರುವುದಿಲ್ಲ. ಸೀಮಿತ ಜನರು ಮಾತ್ರ ಸೆಟ್‌ನಲ್ಲಿ ಇರುತ್ತಾರೆ ಎಂದಿದ್ದರು ಹಿರಾನಿ. ಇದಕ್ಕೆ ಸರಿ ಎಂದು ಶೂಟಿಂಗ್ ದಿನದಂದು ನಾನು ಶಾರ್ಟ್ಸ್ ಧರಿಸಿಕೊಂಡೆ. ಜೊತೆಗೆ ಆ ಶಾರ್ಟ್ಸ್ ಧರಿಸಿಕೊಂಡು ನಾನು ತುಂಬಾ ಜೋರಾಗಿ ಓಡಬೇಕಿತ್ತು. ಆಗ ನಾನು ಧರಿಸಿದ್ದ ಶಾರ್ಟ್ಸ್ ಟೇಪ್ ಉದುರಿ ಹೋಗುತ್ತಿತ್ತು.
ಇದನ್ನೂ ಓದಿ :ಕೆಡಿ’ ತಂಡದಿoದ `ಮಚ್ ಲಕ್ಷ್ಮಿ’ಗೆ ಮಸ್ತ್ ಬರ್ತ್ಡೇ ಗಿಫ್ಟ್!
ಆ ಸಂದರ್ಭದಲ್ಲಿ ನಾನು ಸಾಕಷ್ಟು ತೊಂದರೆಗಳನ್ನು ಎದುರಿಸಿದೆ. ಎಷ್ಟಾದರೂ ನನಗೆ ಆ ಶೂಟ್ ಮಾಡಲು ಸಾಧ್ಯವಾಗಲಿಲ್ಲ. ಬಳಿಕ ಎರಡು ಪ್ರಯತ್ನಗಳ ನಂತರ ನಾನು ರಾಜುಗೆ ಹೇಳಿದೆ, ನಾವು ಅದನ್ನು ತೆಗೆದುಹಾಕೋಣ. ಯಾವಾಗಲೂ ನಾನು ಪರ್ಫೆಕ್ಟ್ ಶಾಟ್ ನೀಡಲು ಬಯಸುತ್ತೇನೆ.
ಇದನ್ನೂ ಓದಿ :ಶಾರುಖ್ ಖಾನ್ ಆಸೆಯನ್ನು ರಿವೀಲ್ ಮಾಡಿದ ಕಮಲ್ ಹಾಸನ್
ಈ ಶೂಟ್ನಲ್ಲೂ ಪರ್ಫೆಕ್ಟ್ ಶಾಟ್ ನೀಡಲು ನಾನು ಆ ಶಾರ್ಟ್ಸ್ ತೆಗೆದು ಹಾಕಿ ನಾನು ಓಡಿದೆ. ಸೆಟ್‌ನಲ್ಲಿ ಬೆತ್ತಲೆಯಾಗಿ ನಡೆಯುವುದು ನಿಜವಾಗಿಯೂ ವಿಚಿತ್ರವಾಗಿದೆ ಎಂದು ನಾನು ಭಾವಿಸುತ್ತಿದ್ದೆ. ನಮಗೆ ಅದು ಅಭ್ಯಾಸವಿಲ್ಲ. ನಾನು ಅದನ್ನು ಹೇಗೆ ಮಾಡುತ್ತೇನೆ ಎಂದು ನನಗೆ ಭಯವಾಗುತ್ತಿತ್ತು.
ಎಲ್ಲರೂ ನೋಡುತ್ತಾರೆ. ನನಗೆ ತುಂಬಾ ಮುಜುಗರವಾಗುತ್ತಿತ್ತು ಎಂದು ಶೂಟಿಂಗ್ ಸಂದರ್ಭದಲ್ಲಿ ಉಂಟಾದ ಅನುಭವದ ಬಗ್ಗೆ ನಟ ಹೇಳಿಕೊಂಡಿದ್ದಾರೆ.