ಕೆ.ಮಂಜು ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಕೆ.ಮಂಜು ಅವರು ನಿರ್ಮಿಸಿರುವ ಎಮೋಷನಲ್ ಲವ್ ಸ್ಟೋರಿ ಒಳಗೊಂಡ ಚಿತ್ರ ವಿಷ್ಣು ಪ್ರಿಯ. ಸದ್ಯದಲ್ಲೇ ಬಿಡುಗಡೆಗೆ ಸಿದ್ದವಾಗಿರುವ ಈ ಚಿತ್ರದಲ್ಲಿ ಕೆ.ಮಂಜು ಅವರ ಪುತ್ರ ಶ್ರೇಯಸ್ ಮಂಜು ನಾಯಕನಾಗಿ ನಟಿಸಿದ್ದಾರೆ. ಕಣ್ಸನ್ನೆ ಬೆಡಗಿ ಎಂದೇ ಹೆಸರಾದ ಮಲಯಾಳಿ ಚೆಲುವೆ ಪ್ರಿಯಾ ಪ್ರಕಾಶ್ ವಾರಿಯರ್ ನಾಯಕಿಯಾಗಿ ನಟಿಸಿದ್ದಾರೆ. ಏ.5ರ ಬುಧವಾರ ನಾಯಕ ಶ್ರೇಯಸ್ ಹುಟ್ಟುಹಬ್ಬ. ಆ ಪ್ರಯುಕ್ತ ಚಿತ್ರದ ಹೊಸ ಟೀಸರ್ ನ್ನು ಬಿಡುಗಡೆ ಮಾಡಲಾಯಿತು. ಕೆ.ಮಂಜು ಅವರ ಮನೆಯ ಮುಂದೆ ಹಾಕಿದ್ದ ವೇದಿಕೆಯಲ್ಲಿ ನಾಯಕ ಶ್ರೇಯಸ್ ಅಭಿಮಾನಿಗಳೇ ಸೇರಿ ಟೀಸರನ್ನು ರಿಲೀಸ್ ಮಾಡಿದರು. ದೂರದೂರುಗಳಿಂದ ಬಂದ ನೂರಾರು ಅಭಿಮಾನಿಗಳು ನೆಚ್ಚಿನ ನಟನಿಗೆ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕ ಕೆ.ಮಂಜು, ಚಿತ್ರವನ್ನು ಮೇ ಅಥವಾ ಜೂನ್ ವೇಳೆಗೆ ಬಿಡುಗಡೆ ಮಾಡಬೇಕೆಂದು ಸಿದ್ದತೆ ಮಾಡಿಕೊಂಡಿದ್ದೇವೆ. ಇಷ್ಟೊತ್ತಿಗಾಗಲೇ ಸಿನಿಮಾ ರಿಲೀಸಾಗಿರಬೇಕಿತ್ತು. ಕಾರಣಾಂತರಗಳಿಂದ ತಡವಾಯಿತು. ಒಂದೊಳ್ಳೆ ಲವ್ ಸ್ಟೋರಿಯ ಜೊತೆಗೆ ತಂದೆ ತಾಯಿಗಳು ಮಕ್ಕಳನ್ನು ಯಾವರೀತಿ ನೋಡಿಕೊಳ್ಳಬೇಕು ಎಂದೂ ಹೇಳಲಾಗಿದೆ. ಚಿತ್ರ ಎಲ್ಲಾ ವರ್ಗದವರಿಗೂ ಇಷ್ಟವಾಗುತ್ತದೆ ಎಂದು ಹೇಳಿದರು.
Pentagon’ Kannada Movie Review : ಪಂಚ ಕಥೆಗಳ ಪವರ್‌ಫುಲ್ ಪಂಚ್!`
ನಂತರ ನಾಯಕ ಶ್ರೇಯಸ್ ಮಾತನಾಡಿ, ನನಗೆ ಶುಭ ಹಾರೈಸಲು ಬಂದ ಎಲ್ಲರಿಗೂ ಧನ್ಯವಾದ. ಈ ಸಲ ನನ್ನ ಫ್ಯಾನ್ಸ್ ಮುಂದೆ ಚಿತ್ರದ ಟೀಸರ್ ರಿಲೀಸ್ ಮಾಡಬೇಕು ಅಂತ ಅವರಿಂದಲೇ ಮಾಡಿಸಿದ್ದೇವೆ. ನನ್ನ ಅಭಿಮಾನಿಗಳಿಗೆ ಕೇಕ್ ಕತ್ತರಿಸುವುದು, ಹಾರ, ಬೊಕ್ಕೆ ಯಾವುದನ್ನೂ ತರಬೇಡಿ, ಅದರ ಬದಲು ಅನಾಥಾಶ್ರಮಗಳಿಗೆ ಆಹಾರ ಸಾಮಗ್ರಿಗಳನ್ನು ನೀಡಿ, ರಕ್ತದಾನ ಮಾಡಿ ಎಂದು ವಿನಂತಿಸಿಕೊಂಡಿದ್ದೆ. ಅವರು ಅದರಂತೆಯೆ ನಡೆದುಕೊಂಡಿದ್ದಾರೆ. ನಾವೆಲ್ಲ ರಕ್ತದಾನ ಮಾಡೋಣ ಎಂದು ಹೇಳಿದರು. ನಿರ್ದೇಶಕ ಮಹೇಶ್ ಮಾತನಾಡಿ ನಾನೀಗಾಗಲೇ ಚಿತ್ರವನ್ನು ನೋಡಿದ್ದೇನೆ. ಶ್ರೇಯಸ್ ಅವರ ಪಡ್ಡೆಹುಲಿ, ರಾಣಾ ಎರಡನ್ನೂ ಮೀರಿಸುವಂತೆ ಮೂಡಿಬಂದಿದೆ ಎಂದರು. ಮಲಯಾಳಂನ ವಿ.ಕೆ.ಪ್ರಕಾಶ್ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಗೋಪಿಸುಂದರ್ ಅವರ ಸಂಗೀತ ಸಂಯೋಜನೆ, ವಿನೋದ್ ಭಾರತಿ ಅವರ ಛಾಯಾಗ್ರಹಣ, ಸುರೇಶ್ ಅರಸ್ ಅವರ ಸಂಕಲನ ಈ ಚಿತ್ರಕ್ಕಿದೆ.