ಮೋಹನ್ ಬಾಬು, ಮೋಹನ್ ಲಾಲ್, ಶಿವರಾಜಕುಮಾರ್, ಪ್ರಭಾಸ್ ಮುಂತಾದ ಈ ದೇಶದ ಪ್ರತಿಭಾವಂತ ಕಲಾವಿದರ ನಡುವೆ ‘ಕಣ್ಣಪ್ಪ’ ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸುತ್ತಿರುವವರು ಟಾಲಿವುಡ್ ನಟ ವಿಷ್ಣು ಮಂಚು. ಇಂದು ತಮ್ಮ ಹುಟ್ಟುಹಬ್ಬವನ್ನು ವಿಷ್ಣು ಆಚರಿಸಿಕೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಚಿತ್ರತಂಡವು ಅವರ ಮೊದಲ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಹುಟ್ಟುಹಬ್ಬವನ್ನು ಇನ್ನಷ್ಟು ಅದ್ದೂರಿಯಾಗಿಸುವುದರ ಜೊತೆಗೆ ನೆನಪಿನಲ್ಲುಳಿಯುವಂತೆ ಮಾಡಿದೆ.
ಇದನ್ನೂ ಓದಿ 54ನೇ ಅಂತಾರಾಷ್ಟ್ರೀಯ ಚಿತ್ರೋತ್ಸವದ ರೆಡ್ ಕಾರ್ಪೆಟ್ ಗಾಲಾ ಪ್ರೀಮಿಯರ್ ಗೆ ‘ಗ್ರೇ ಗೇಮ್ಸ್’ ಚಿತ್ರ ಆಯ್ಕೆ
ಮುಕೇಶ್ ಕುಮಾರ್ ಸಿಂಗ್ ನಿರ್ದೇಶನದ ‘ಕಣ್ಣಪ್ಪ’ ಚಿತ್ರದ ಶೇ.80ರಷ್ಟು ಚಿತ್ರೀಕರಣ ನ್ಯೂಜಿಲ್ಯಾಂಡ್‍ನ ರಮಣೀಯ ಪ್ರದೇಶಗಳಲ್ಲಿ ನಡೆದಿದ್ದು, ಹಾಲಿವುಡ್ ಛಾಯಾಗ್ರಾಹಕ ಶೆಲ್ಡನ್ ಚಾವ್, ಈ ಸುಂದರ ಪರಿಸರವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.
‘ಕಣ್ಣಪ್ಪ’ ಚಿತ್ರದ ಕುರಿತು ಮಾತನಾಡುವ ವಿಷ್ಣು ಮಂಚು, ‘ಈ ಚಿತ್ರವು ಬರೀ ಕನಸುಗಳಿಂದಲ್ಲ, ನಮ್ಮೆಲ್ಲರ ರಕ್ತ, ಬೆವರು ಮತ್ತು ಕಣ್ಣೀರಿನಿಂದ ನಿರ್ಮಾಣವಾಗುತ್ತಿದೆ. ಒಬ್ಬ ನಾಸ್ತಿಕ, ಶಿವನ ಅಪ್ರತಿಮ ಭಕ್ತನಾದ ಕಥೆ ಈ ಚಿತ್ರದಲ್ಲಿದೆ’ ಎನ್ನುತ್ತಾರೆ.
ಇದನ್ನೂ ಓದಿ 54ನೇ ಅಂತಾರಾಷ್ಟ್ರೀಯ ಚಿತ್ರೋತ್ಸವದ ರೆಡ್ ಕಾರ್ಪೆಟ್ ಗಾಲಾ ಪ್ರೀಮಿಯರ್ ಗೆ ‘ಗ್ರೇ ಗೇಮ್ಸ್’ ಚಿತ್ರ ಆಯ್ಕೆ
ದೃಶ್ಯ ವೈವಿಧ್ಯತೆ, ಆಧುನಿಕ ತಂತ್ರಜ್ಞಾನ ಮತ್ತು ಮೈನವಿರೇಳಿಸುವ ಆ್ಯಕ್ಷನ್ ದೃಶ್ಯಗಳು ಈ ಚಿತ್ರದ ಹೈಲೈಟ್ ಆಗಿದ್ದು, ಸದ್ಯ ನ್ಯೂಜಿಲ್ಯಾಂಡ್‍ನಲ್ಲಿ ಚಿತ್ರೀಕರಣ ಪ್ರಗತಿಯಲ್ಲಿದೆ. ವಿಷ್ಣು ಮಂಚು ತಮ್ಮ ನಟನಾ ಸಾಮರ್ಥ್ಯ ಮತ್ತು ಸಮರ್ಪಣಾ ಭಾವವನ್ನು ಈ ಚಿತ್ರಕ್ಕಾಗಿ ಧಾರೆ ಎದರೆದಿದ್ದು, ಪ್ರೇಕ್ಷಕರ ಪಾಲಿಗೆ ಇದೊಂದು ಅದ್ಭುತ ಸಿನಿಮೀಯ ಅನುಭವವಾಗಲಿದೆ