Sandalwood Leading OnlineMedia

ನಿತ್ಯ ಜಗಳ, ನಮ್ಮ ನಡುವೆ ಭಿನ್ನಾಭಿಪ್ರಾಯವಿದೆ ಎಂದ ಐಶ್ವರ್ಯಾ ರೈ! ಬಿಗ್ ಬಿ ಮಗ-ಸೊಸೆಯ ಡಿವೊರ್ಸ್ ಸುದ್ದಿ ನಿಜನಾ?

Abhishek-Aishwarya Rai: ನಿತ್ಯ ಜಗಳ, ನಮ್ಮ ನಡುವೆ ಭಿನ್ನಾಭಿಪ್ರಾಯವಿದೆ ಎಂದ ಐಶ್ವರ್ಯಾ ರೈ! ಬಿಗ್ ಬಿ ಮಗ-ಸೊಸೆಯ ಡಿವೊರ್ಸ್ ಸುದ್ದಿ ನಿಜನಾ?
ಇತ್ತೀಚಿಗೆ ಸೆಲೆಬ್ರೆಟಿಗಳ ಡಿವೋರ್ಸ್ ವಿಚಾರ ಭಾರೀ ಸುದ್ದಿ ಆಗ್ತಿದೆ. ಅಭಿಷೇಕ್ ಬಚ್ಚನ್-ಐಶ್ವರ್ಯಾ ರೈ ಇಬ್ಬರೂ ವೈಯಕ್ತಿಕ ವಿಚಾರಕ್ಕೆ ಕೂಡ ಅನೇಕ ಬಾರಿ ಚರ್ಚೆಯಾಗಿದೆ. ಇದೀಗ ಅಭಿಷೇಕ್-ಐಶ್ವರ್ಯಾ ಡಿವೋರ್ಸ್ ರೂಮರ್ಸ್ ಹರಿದಾಡುತ್ತಿದೆ.ಐಶ್ವರ್ಯಾ ರೈ ಜೊತೆ ಅಭಿಷೇಕ್ ಹೆಚ್ಚಾಗಿ ಕಾಣಿಸಿಕೊಳ್ತಿಲ್ಲ. ಐಶ್ವರ್ಯಾ ಹೊರಗೆ ಹೋದಾಗಲೆಲ್ಲಾ ಮಗಳ ಜೊತೆಯೇ ಇರ್ತಾರೆ. ಬಿಗ್ ಬಿ ಬರ್ತ್ ಡೇ ದಿನ ಕೂಡ ಮಗಳನ್ನು ಕರೆದುಕೊಂಡು ವಿದೇಶಕ್ಕೆ ಹಾರಿದ್ರು.
ಐಶ್ವರ್ಯಾ ರೈ ಬರ್ತ್ ಡೇ ದಿನ ಕೂಡ ಅಭಿಷೇಕ್ ಸಿಂಗಲ್ ಫೋಟೋ ಹಾಕಿ ಹ್ಯಾಪಿ ಬರ್ತ್ಡೇ ಎಂದಷ್ಟೇ ಬರೆದಿದ್ರು. ಇತ್ತೀಚಿಗಷ್ಟೇ ವೆಡ್ಡಿಂಗ್ ರಿಂಗ್ ಧರಿಸಿದೆ ಅಭಿಷೇಕ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ಬಳಿಕ ರೂಮರ್ಸ್ಗೆ ಪುಷ್ಠಿ ನೀಡಿದೆ.ಡಿವೋರ್ಸ್ ರೂಮರ್ಸ್ ವೇಳೆ ಐಶ್ವರ್ಯಾ ರೈ ಹಳೇ ಸಂದರ್ಶನದ ವಿಡಿಯೋ ವೈರಲ್ ಆಗಿದೆ. 2010ರಲ್ಲಿ ನಡೆದ ಸಂದರ್ಶನವೊಂದರಲ್ಲಿ ಐಶ್ವರ್ಯಾ ರೈ, ಅಭಿಷೇಕ್ ಜೊತೆ ನಾನು ಪ್ರತಿದಿನ ಜಗಳವಾಡುತ್ತೇನೆ ಎಂದು ಹೇಳಿದ್ದರು.
ನನ್ನ ಹಾಗೂ ಅಭಿಷೇಕ್ ಬಚ್ಚನ್ ನಡುವೆ ಭಿನ್ನಾಭಿಪ್ರಾಯವಿದೆ. ಈ ಭಿನ್ನಾಭಿಪ್ರಾಯ ಬೇಗ ಇತ್ಯರ್ಥವಾಗುತ್ತವೆ. ನಮ್ಮ ಸಂಬಂಧದಲ್ಲಿ ಏರಿಳಿತ ಕೂಡ ಇದೆ. ಇಬ್ಬರ ಪರಸ್ಪರ ಬಗೆಹರಿಸಿಕೊಳ್ಳಲು ಪ್ರಯತ್ನಿಸಿದ್ದೇವೆ ಎಂದು ಐಶ್ವರ್ಯಾ ರೈ ಈ ಹಿಂದೆ ಹೇಳಿಕೊಂಡಿದ್ರು.ಅಭಿಷೇಕ್ ಹಾಗೂ ಐಶ್ವರ್ಯಾ ಮಧ್ಯೆ ಇರುವ ಭಿನ್ನಾಭಿಪ್ರಾಯದ ದೊಡ್ಡದಾಗಿ ಬೆಳೆದಿದ್ದು ವಿಚ್ಛೇದನದವರೆಗೆ ಬಂದಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಸಿನಿಮಾ ವಿಶ್ಲೇಷಕ ಉಮೈರ್ ಸಂಧು ಟ್ವೀಟ್ ಕೂಡ ಮಾಡಿದ್ದಾರೆ.
ಅಭಿಷೇಕ್-ಐಶ್ವರ್ಯಾ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ ಎಂದು ಉಮೈರ್ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಉಮೈರ್ ಆಗಾಗ ಸೆಲೆಬ್ರೆಟಿಗಳ ಬಗ್ಗೆ ಪೋಸ್ಟ್ ಮಾಡುತ್ತಿರುತ್ತಾರೆ. ಈತನ ಪೋಸ್ಟ್ ಬಹುತೇಕ ಸುಳ್ಳಾಗಿರುತ್ತದೆ.ಐಶ್ವರ್ಯಾ ರೈ, ಅಭಿಷೇಕ್ 2007ರಲ್ಲಿ ಮದುವೆಯಾದರು. 2011ರಲ್ಲಿ ಐಶ್ವರ್ಯಾ ಆರಾಧ್ಯಗೆ ಜನ್ಮ ನೀಡಿದರು. ಈಗ ಇಬ್ಬರ ವಿಚ್ಛೇದನದ ಭಾರೀ ವೈರಲ್ ಆಗ್ತಿದ್ದು, ಬಚ್ಚನ್ ಮನೆಯ ಫ್ಯಾನ್ಸ್ ಶಾಕ್ ಆಗಿದ್ದಾರೆ.

Share this post:

Related Posts

To Subscribe to our News Letter.

Translate »