ಜೀ ಕನ್ನಡದಲ್ಲಿ ಮಹಾನಟಿ ಶೋ ಕಳೆದ ಎರಡು ವಾರದಿಂದ ಶುರುವಾಗಿದೆ. ಹಾನಟಿ ವೇದಿಕೆಯಲ್ಲಿ ಸ್ಪರ್ಧಿಗಳಿಗೆ ಹೊಸ ಸವಾಲೊಂದನ್ನು ನೀಡಲಾಗಿದೆ. ಒಬ್ಬೊಬ್ಬರು ಹಿರಿಯ ಮಹಾನಟಿಯರನ್ನು ಸ್ಪೂರ್ತಿಯಾಗಿಟ್ಟುಕೊಂಡು ನಟಿಸಬೇಕು.
ಈಗಿನ ದೃಶ್ಯಗಳಲ್ಲ. ಹಿಂದೆ ನಟನೆಯಿಂದಾನೇ ಎಲ್ಲರ ಮನಗೆದ್ದಂತ ಹಿರಿಯ ಕಲಾವಿದರ ಸಿನಿಮಾಗಳ ಮೂಲಕ ತಮ್ಮ ನಟನೆಯನ್ನು ತೋರಿಸಬೇಕಿದೆ. ಲೀಲಾವತಿ ಅವರು ನಿಧನರಾಗಿ ಕೆಲ ತಿಂಗಳುಗಳೇ ಆಗಿದೆ. ಇಂದು ಜೀ ಕನ್ನಡ ಮಾಹಾನಟಿ ವೇದಿಕೆಯಲ್ಲಿ ಅವರಿಗೆ ನಮನ ಸಲ್ಲಿಸಿದೆ.
ಸ್ಪರ್ಧಿಗಳಿಂದ ಲೀಲಾವತಿ ಹಾಗೂ ರಾಜ್‍ಕುಮಾರ್ ಅವರ ಸಿನಿಮಾದ ಬಿಂಕದ ಸಿಂಗಾರಿ ಎಂಬ ಹಾಡಿಗೆ ನಟನೆ ಮಾಡಿ ತೋರಿಸಿದ್ದಾರೆ.
ಇದನ್ನು ಕಂಡು ವಿನೋದ್ ರಾಜ್ ಭಾವುಕರಾಗಿದ್ದಾರೆ. ಅಮ್ಮ ಮಗ ಎಷ್ಟು ಅನ್ಯೋನ್ಯವಾಗಿದ್ದರು ಎಂಬುದು ಎಲ್ಲರು ನೋಡಿರುವ ವಿಚಾರವೇ. ಲೀಲಾವತಿ ಅವರು ಹೋದ ಮೇಲೆ ವಿನೋದ್ ರಾಜ್ ಅಕ್ಷರಶಃ ಒಂಟಿತನ ಅನುಭವಿಸುತ್ತಿದ್ದಾರೆ. ಇದೀಗ ಅಮ್ಮನ ಸಿನಿಮಾದ ಹಾಡು ನೋಡಿ ಭಾವುಕರಾಗಿದ್ದಾರೆ. ಅಮ್ಮನಿಲ್ಲದ ನಾಲ್ಕು ತಿಂಗಳನ್ನು ನೆನೆದು ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ :ಅಪರೂಪದ ಕಥೆ ಹೊತ್ತು ತಂದ ‘ಕಾಂಗರೂ’
ಬಿಂಕದ ಸಿಂಗಾರಿ ಪರ್ಫಾಮೆನ್ಸ್ ಮುಗಿದ ಬಳಿಕ ಇಡೀ ವೇದಿಕೆಯ ಮಂದಿ ಎದ್ದು ನಿಂತು ಲೀಲಾವತಿ ಅವರಿಗೆ ಗೌರವ ಸಲ್ಲಿಕೆ ಮಾಡಿದರು. ಈ ವೇಳೆ ‘ಎಷ್ಟೇ ಮರೆತು ಜೀವನ ಮಾಡಬೇಕು ಎಂದುಕೊಂಡರು ಅದು ಕಷ್ಟವಾಗುತ್ತದೆ.
ಇದನ್ನೂ ಓದಿ :ಸ್ಯಾಂಡಲ್‌ವುಡ್ ಚಿತ್ರ ನಿರ್ಮಾಪಕ, ಜೆಟ್‌ಲಾಗ್ ಪಬ್ ಮಾಲೀಕ,ಸೌಂದರ್ಯ ಜಗದೀಶ್ ಆತ್ಮಹತ್ಯೆ
ನೋಡುತ್ತಾ ನೋಡುತ್ತಾ ಕೊನೆ ಫೋಟೋ ನೋಡಿ ನೋವು ತಡೆದುಕೊಳ್ಳುವುದಕ್ಕೆ ಆಗಲಿಲ್ಲ. ಅಮ್ಮ ಬಿಟ್ಟು ಹೋಗಿದ್ದಾರೆ. ನಾನು ಕೂಡ ಹೇಗೆ ನಾಲ್ಕು ತಿಂಗಳು ಕಳೆದುಬಿಟ್ಟರ ಅನ್ನಿಸುತ್ತಾ ಇದೆ. ಮತ್ತೆ ಅದನ್ನ ನೋಡೊದಾಗ ಆ ನೋವು ಮರುಕಳಿಸುತ್ತೆ, ಎದೆ ಹಿಂಡಿದಂತೆ ಆಗಿ ಬಿಡುತ್ತದೆ’ ಎಂದು ವಿನೋದ್ ರಾಜ್ ಭಾವುಕರಾಗಿದ್ದಾರೆ. ಇದನ್ನು ಕಂಡ ಇಡೀ ವೇದಿಕೆ ಕಣ್ಣೀರಾಗಿದೆ.
ಇದನ್ನೂ ಓದಿ :ಧನಂಜಯ್ ʻಕೋಟಿʼಗೆ ಜೊತೆಯಾದ ನಾಯಕಿ ಮೋಕ್ಷಾ ಯಾರು ಗೊತ್ತಾ..?
‘ದೇವರು ಯಾಕೆ ಇಷ್ಟು ಬೇಗ ಇಬ್ಬರಲ್ಲಿ ಒಬ್ಬರನ್ನ ಹೀಗೆ ಬೇಗ ಕರೆದುಕೊಂಡು ಬಿಟ್ಟ. ಯಾವಾಗಲೂ ಕೇಳುತ್ತಿದ್ದರು ಮಗ ಬಂದನಾ, ಎಲ್ಲಿ ಹೋಗಿದ್ದಾನೆ ಕೇಳಿ ಎನ್ನುತ್ತಿದ್ದರು. ಈಗ ಕೇಳೋದಕ್ಕೆ ಯಾರೂ ಇಲ್ಲ. ಎರಡು ನಾಯಿ ಮಾತ್ರ ಇದೆ.
ಇಷ್ಟು ಪ್ರೀತಿ ಮಾಡಬಾರದು ತಾಯಿ ಮಕ್ಳಳನ್ನ. ಕ್ಷಮಿಸಿ ಜಡ್ಜಸ್. 56 ವರ್ಷ ವಯಸ್ಸಾದರೂ ಅದೆ ಅರಿವಿಲ್ಲದೆ ಅಳುತ್ತಾ ಇದ್ದೀನಿ. ಬೇಜಾರು ಮಾಡಿಕೊಳ್ಳಬೇಡಿ’ ಎಂದಿದ್ದಾರೆ. ಇದಕ್ಕೆ ಅನುಶ್ರೀ ಕೂಡ ಸಮಾಧಾನ ಮಾಡಿದ್ದು, ನಿಮ್ಮ ನೋವು ಅರ್ಥವಾಗುತ್ತದೆ. ಕ್ಷಮೆ ಕೇಳಬೇಡಿ ಎಂದಿದ್ದಾರೆ.