`ಖಾಕಿ’ ಸಿನಿಮಾ ನಿರ್ದೆಶನ ಮಾಡಿದ್ದ ನವೀನ್ ರೆಡ್ಡಿ ಈಗ ಮಾದೇವ ಸಿನಿಮಾ ಮೂಲಕ ಬರುತ್ತಿದ್ದಾರೆ. `ಮಾದೇವ’ ಸಿನಿಮಾ ವಿನೋದ್ ಪ್ರಭಾಕರ್ ಸಿನಿ ಬದುಕಿನಲ್ಲಿ ಸ್ಪೆಷಲ್ ಆದಂತ ಸಿನಿಮಾ. ವಿಭಿನ್ನ ಪಾತ್ರವನ್ನು ನಿಭಾಯಿಸಿದ್ದಾರೆ. ಇದೊಂದು ನೈಜ ಘಟನೆಯ ಆಧಾರಿತ ಸಿನಿಮಾ. ೧೬೬೫, ೧೯೮೦, ೧೯೯೦ರ ಕಾಲಘಟ್ಟದಲ್ಲಿ ನಡೆಯುವಂತೆ ಕಥೆ ಇದಾಗಿದೆ. ಹಾಗಂತ ಈ ಪೀಳಿಗೆಗೆ ಕನೆಕ್ಟ್ ಆಗುತ್ತಾ ಎಂದುಕೊಳ್ಳಬೇಡಿ. ಕಥೆಯನ್ನು ಸಿಕ್ಕಾಪಟ್ಟೆ ಎಮೋಷನಲ್ ಆಗಿ ಕಟ್ಟಿಕೊಟ್ಟಿದ್ದಾರೆ ನವೀನ್ ರೆಡ್ಡಿ. ಹೀಗಾಗಿ ಈ ಸಿನಿಮಾ ಎಲ್ಲಾ ಕಾಲಕ್ಕೂ, ಎಲ್ಲಾ ಪೀಳಿಗೆಗೂ ಇಷ್ಟವಾಗಲಿದೆ. ಕಥೆಯನ್ನು ಮನಮುಟ್ಟುವಂತೆ ತಯಾರಿ ಮಾಡುವುದಕ್ಕೆ ನಿರ್ದೇಶಕರು ಕಡಿಮೆ ಸಮಯವನ್ನೇನು ತೆಗೆದುಕೊಂಡಿಲ್ಲ. ಸುಮಾರು ೭-೮ ವರ್ಷಗಳ ಕಾಲ ಈ ಸಿನಿಮಾಗಾಗಿ ಕಷ್ಟಪಟ್ಟಿದ್ದಾರೆ. ಕಥೆಯನ್ನು ಸಿದ್ಧ ಮಾಡಿದ್ದಾರೆ. ಈ ಕಥೆ ಸಿದ್ಧವಾದ ಮೇಲೂ ಒಂದಷ್ಟು ಹೋಂ ವರ್ಕ್ ಮಾಡಿದ್ದಾರೆ. `ಮಾದೇವ’ ನ ಕಥೆ ಹಿಡಿದು ಯಾವ ಹೀರೋಗೆ ಮ್ಯಾಚ್ ಆಗುತ್ತದೆ ಎಂಬದನ್ನು ಥಿಂಕ್ ಮಾಡಿದ್ದಾರೆ.
ನಿರ್ದೇಶಕ ತಂಡಕ್ಕೆ `ಮಾದೇವ’ನಾಗಿ ಕಂಡಿದ್ದು ಮರಿ ಟೈಗರ್ ವಿನೋದ್ ಪ್ರಭಾಕರ್. ಬಳಿಕ ಅವರಿಗೆ ಕಥೆಯನ್ನು ಹೇಳಿ, ಸಿನಿಮಾ ಶುರು ಮಾಡಿದ್ದಾರೆ. ಈ ಸಿನಿಮಾದಲ್ಲಿ ಮತ್ತೊಂದು ವಿಶೇಷ ಕೂಡ ಇದೆ. `ರಾಬರ್ಟ್’ನಲ್ಲಿ ಮೋಡಿ ಮಾಡಿದ್ದಂತ ಜೋಡಿಯನ್ನು ಮತ್ತೆ ತೆರೆಮೇಲೆ ಒಂದು ಮಾಡುವ ಪ್ರಯತ್ನ ಮಾಡಿದ್ದಾರೆ. ಯಾವುದೇ ಫೀಲಿಂಗ್ಸ್ ಇಲ್ಲದ ರೀತಿ, ಒರಟು ಒರಟನಂತೆ ಬೆಳೆದ ಮಾದೇವನ ಮನಸ್ಸಲ್ಲಿ ಪ್ರೀತಿ ಹುಟ್ಟಿಸಲು ಸೋನಲ್ ಜೊತೆಯಾಗಿದ್ದಾರೆ. ರಾಧಾಕೃಷ್ಣ ಬ್ಯಾನರ್‌ನಡಿ ಆರ್ ಆರ್ ಕೇಶವ ದೇವಸಂದ್ರ ಈ ಸಿನಿಮಾಗೆ ಬಂಡವಾಳ ಹೂಡಿದ್ದು, ಬಾಹುಬಲಿ, ಆರ್‌ಆರ್‌ಆರ್ ಸಿನಿಮಾಗಳ ಛಾಯಾಗ್ರಾಹಕ ಸೆಂಥಿಲ್ ಕುಮಾರ್ ಬಳಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಬಾಲಕೃಷ್ಣ ತೋಟ ‘ಮಾದೇವ’ ಚಿತ್ರಕ್ಕೆ ಛಾಯಾಗ್ರಾಹಕರಾಗಿದ್ದಾರೆ. ಉಳಿದಂತೆ ಶ್ರೀನಗರಕಿಟ್ಟಿ, ಶ್ರುತಿ ಮತ್ತು ಅಚ್ಯುತ್ ಕುಮಾರ್, ಕಾಕ್ರೋಚ್ ಸುಧಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ :ಪುನೀತ್ ರಾಜ್‌ಕುಮಾರ್ ಜಾಕಿ ಚಿತ್ರ ಮರು-ಬಿಡುಗಡೆ ಬಾಕ್ಸ್ ಆಫೀಸ್ ಕಲೆಕ್ಷನ್ 2024
`ಪರಪ್ಪನ ಅಗ್ರಹಾರ ಜೈಲಿಗೆ ಹೋಗಿ ಸಿನಿಮಾಗಾಗಿ ಸಾಕಷ್ಟು ರಿಸರ್ಚ್ ಮಾಡಿದ್ದೀವಿ. ಅಲ್ಲಿದ್ದಂತ ಜೈಲರ್ ತಿಮ್ಮಯ್ಯ ಅವರು ತುಂಬ ಸಪೋರ್ಟ್ ಮಾಡಿದ್ದರು. ಅಷ್ಟೇ ಅಲ್ಲ ರೈಲು ಸಿಬ್ಬಂದಿಗಳ ಸಹಕಾರವೂ ಇದೆ. ನಮ್ಮ ಸಿನಿಮಾ ಅಂತ ಹೊಗಳಿಕೆಯ ಮಾತುಗಳನ್ನು ಆಡುತ್ತಿಲ್ಲ. ಆದರೆ ಸಿನಿಮಾ ಅದ್ಭುತವಾಗಿ ಅಂತು ಮೂಡಿ ಬಂದಿದೆ. ಆನಕ್ಕೆ ಕನೆಕ್ಟ್ ಆಗುವಂತ ಕಾನ್ಫಿಡೆನ್ಸ್ ನಮ್ಮಲ್ಲಿ ಈಗಾಗಲೆ ಬಂದಿದೆ. `ಮಾದೇವ’ನಲ್ಲಿ ಕಮರ್ಷಿಯಲ್ ಜೊತೆಗೆ ಎಮೋಷನಲ್ ಕೂಡ ಜಾಸ್ತಿ ಇದೆ. ಸಿನಿಮಾ ನೋಡಿದವರು ಖಂಡಿತ ಕಣ್ಣಲ್ಲಿ ನೀರಾಕಿಕೊಂಡು ಹೊರಗೆ ಬರ್ತಾರೆ. ವಿನೋದ್ ಸರ್ ಎಂದಾಗ ಬರೀ ಮಾಸ್ ಹೀರೋ ಎಂದುಕೊಳ್ಳುತ್ತಾರೆ. ಆದರೆ ಈ ಸಿನಿಮಾದಲ್ಲಿ ನೀವೆಂದು ನೋಡಿರದ ವಿನೋದ್ ಸರ್‌ನ ಕಾಣುತ್ತೀರಾ. ಈ ಸಿನಿಮಾವನ್ನು ಸುಲಭವಾಗಿ ಯಾರೂ ಒಪ್ಪಿಕೊಳ್ಳುವುದಿಲ್ಲ. ಇಡೀ ಸಿನಿಮಾದಲ್ಲಿ ಎಂಟು ಡೈಲಾಗ್ ಕೂಡ ಇಲ್ಲ. ಆದರೆ ಈ ಸಿನಿಮಾ ನೋಡಿದ ಮೇಲೆ ಮನೆಗೆ ಹೊದರು ಆ ಕಥೆ ನಿಮ್ಮ ಮನಸ್ಸಲ್ಲಿ ಕಾಡದೆ ಇರುವುದಿಲ್ಲ. ವಿನೋದ್ ಸರ್ ಪರ್ಫಾಮೆನ್ಸ್ ಅಷ್ಟು ಅದ್ಭುತವಾಗಿದೆ. ಇಡೀ ಸಿನಿಮಾ ಮುಗಿಯುವ ತನಕ ಅವರು ಯಾರ ಬಳಿಯೂ ಮಾತನಾಡುತ್ತಿರಲಿಲ್ಲ. ಇಡೀ ಸಿನಿಮಾ ಒಂದೇ ಎಕ್ಸ್ಪ್ರೆಷನ್‌ನಲ್ಲಿ ಇರಬೇಕಿತ್ತು. ಸ್ಮೆಲ್ ಮಾಡ್ತಾ ಇರ್ಲಿಲ್ಲ, ಮಾತನಾಡುತ್ತಿರಲಿಲ್ಲ. ಯಾಕಂದ್ರೆ ಎಕ್ಸ್ಪ್ರೆಷನ್ ಚೇಂಜ್ ಆಗಿ ಬಿಡುತ್ತೆ ಎಂಬ ಕಾರಣಕ್ಕೆ. ಇಡೀ ಸಿನಿಮಾವನ್ನು ಭುಜದ ಮೇಲೆ ಹಾಕಿಕೊಂಡು ತೆಗೆದುಕೊಂಡು ಹೋಗಿದ್ದಾರೆ. ಒನ್ ಮ್ಯಾನ್ ಆರ್ಮಿಯಾಗಿ ಕೆಲಸ ಮಾಡಿದ್ದಾರೆ. ವಿನೋದ್ ಸರ್ ಅಷ್ಟು ಡೆಡಿಕೇಟೆಡ್ ಆಗಿ ವರ್ಕ್ ಮಾಡಿದ್ದಾರೆ’ ಎಂದಿದ್ದಾರೆ ನಿರ್ದೇಶಕ ನವೀನ್ ರೆಡ್ಡಿ.
`ಸಿನಿಮಾದ ಕಥೆ ಅದ್ಭುತವಾಗಿದೆ. ಈ ಸಿನಿಮಾಗಾಗಿ ಒಂದಷ್ಟು ಲೊಕೇಷನ್ಸ್ ಬೇಕಾಗಿತ್ತು. ಆರಂಭದಲ್ಲಿ ಕೊಟ್ಟಿದ್ದ ಬಜೆಟ್ ಶೂಟಿಂಗ್ ಆಮೇಲೆ ಹೆಚ್ಚಾಯ್ತು. ಆದರೆ ಪ್ರಾಡೆಕ್ಟ್ ಚೆನ್ನಾಗಿ ಕೊಟ್ಟರೆ ತಾನೇ ಬಂಡವಾಳ ವಾಪಾಸ್ ಬರುವುದು. ಪ್ರಾಡಕ್ಟ್ ಕಳಪೆಯಾದರೆ ಉತ್ತಮ ಲಾಭಾಂಶ ಬರುವುದಿಲ್ಲ. ನಾನು ಒಬ್ಬ ಬಿಸಿನೆಸ್ ಮ್ಯಾನ್ ಆಗಿ ಆ ನೀತಿಯನ್ನು ನಂಬಿದ್ದೀನಿ. ಜನಕ್ಕೆ ಕ್ವಾಲಿಟಿ ಸಿನಿಮಾ ಕೊಡಬೇಕು ಎಂಬುದೇ ನನಗೆ ಇದ್ದ ಉದ್ದೇಶ. ಜೊತೆಗೆ ನಾನು ಬಂಡವಾಳ ಹಾಕಿರುವಂತ ಮೊದಲ ಸಿನಿಮಾ ಇದು. ಹೀಗಾಗಿ ಹೆಸರು ಕೂಡ ಉಳಿಯಬೇಕು. ಖರ್ಚು ಜಾಸ್ತಿಯಾಗಿದೆ, ಆದರೆ ಜನಕ್ಕೆ ತೀರಾ ಕನೆಕ್ಟ್ ಆಗುವಂತ ಸಿನಿಮಾ ಕೊಟ್ಟಿದ್ದೀವಿ ಎಂಬ ಆತ್ಮ ತೃಪ್ತಿ ಇದೆʼ ಎಂದಿದ್ದಾರೆ ನಿರ್ಮಾಪಕ ಆರ್ ಆರ್ ಕೇಶವ ದೇವಸಂದ್ರ