Sandalwood Leading OnlineMedia

ಮಾದೇವ’ನ ಮಾಸ್ ಮೆರವಣಿಗೆ..ರಗಡ್ ಅವತಾರದಲ್ಲಿ ಮರಿ ಟೈಗರ್ ವಿನೋದ್ ಪ್ರಭಾಕರ್..

ಮರಿ ಟೈಗರ್ ವಿನೋದ್ ಪ್ರಭಾಕರ್ ನಟನೆಯ ಬಹುನಿರೀಕ್ಷಿತ ಸಿನಿಮಾ ಮಾದೇವ. ಪೋಸ್ಟರ್ ಗಳ ಮೂಲಕವೇ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ ಟೀಸರ್ ಅನಾವರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಾಯಕ ವಿನೋದ್ ಪ್ರಭಾಕರ್, ನಾಯಕಿ ಸೋನಲ್, ಹಿರಿಯ ನಟಿ ಶೃತಿ, ನಿರ್ದೇಶಕ ನವೀನ್ ರೆಡ್ಡಿ ಸೇರಿದಂತೆ ಇಡೀ ಚಿತ್ರತಂಡಕ್ಕೆ ನಿರ್ದೇಶಕ ತರುಣ್ ಸುಧೀರ್, ನಟರಾದ ಅಭಿಷೇಕ್ ಅಂಬರೀಶ್, ಧನ್ವೀರ್ ಗೌಡ, ಝೈದ್ ಖಾನ್ ಸಾಥ್ ಕೊಟ್ಟರು.

ಇದನ್ನೂ ಓದಿ ಕನ್ನಡದ ಮೊದಲ ಹೈಪರ್ ಲಿಂಕ್ ರಾಮ್‌ ಕಾಮ್‌ ಚಿತ್ರ `ಚೌ ಚೌ ಬಾತ್’ ಟ್ರೈಲರ್ ಬಿಡುಗಡೆ!

ಟೀಸರ್ ಬಿಡುಗಡೆ ಬಳಿಕ ಮಾತನಾಡಿದ ನಿರ್ದೇಶಕ ತರುಣ್ ಸುಧೀರ್, ವಿನೋದ್ ನನ್ನದು ಒಂದೊಳ್ಳೆ ಬಾಂಡಿಂಗ್ ಇದೆ. ರಿಯಲ್ ಲೈಫ್ ಫೈಟರ್ ವಿನೋದ್. ಮಾದೇವ ಪ್ರಸೆಂಟೇಷನ್,ಅವರ ಲುಕ್ ಬಹಳ ಚೆನ್ನಾಗಿದೆ. ಬಿಯರ್ಡ್ ಲುಕ್ ನಲ್ಲಿ ಅವರು ಚೆನ್ನಾಗಿ ಕಾಣಿಸುತ್ತಾರೆ. ಕೆಲಸದ ವಿಚಾರದಲ್ಲಿ ಪ್ರಾಮಾಣಿಕ, ಡಿಡಿಕೇಟೇಡ್, ಹಾರ್ಡ್ ವರ್ಕರ್. ಸಿನಿಮಾಗೆ ತುಂಬಾ ಎಫರ್ಟ್ ಹಾಕಿ ಕೆಲಸ ಮಾಡುತ್ತಾರೆ. ಈ ಜಾನರ್ ತುಂಬಾ ಕಷ್ಟ. ತುಂಬಾ ವರ್ಕ್, ರಿಸರ್ಚ್ ಇರುತ್ತದೆ. ಅದ್ಭುತವಾಗಿ ತೆರೆಮೇಲೆ ತಂದಿದ್ದಾರೆ. ಇಡೀ ತಂಡಕ್ಕೆ ಒಳ್ಳೆದಾಗಲ್ಲಿ ಎಂದರು.

ಇದನ್ನೂ ಓದಿ ಟ್ರೆಂಡಿಂಗ್ ನಲ್ಲಿ “ಜಸ್ಟ್ ಪಾಸ್” ಚಿತ್ರದ ಫಸ್ಟ್ ಕ್ಲಾಸ್ ಟ್ರೇಲರ್ ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರ ಫೆಬ್ರವರಿ 9ರಂದು ಬಿಡುಗಡೆ

ನಟ ಅಭಿಷೇಕ್ ಅಂಬರೀಶ್ ಮಾತನಾಡಿ, ಟೈಗರ್ ಅವರ ಆಕ್ಟಿಂಗ್, ಫೈಟ್ ಬಗ್ಗೆ ಅಥವ ಸ್ಕ್ರೀನ್ ಪ್ರೆಸೆನ್ಸ್ ಬಗ್ಗೆ ಮಾತನಾಡುವ ಬಗ್ಗೆ ದೊಡ್ಡವನಲ್ಲ ನಾನು. ನಮ್ಮೆಲ್ಲರಿಗಿಂತ ಅವರು ಹಿರಿಯರು. ಆದರೆ ಯುವಕರಾಗಿ ಕಾಣಿಸಿಕೊಳ್ಳುತ್ತಾರೆ. ವಿಷ್ಯುವಲ್ಸ್, ಕ್ಯಾಮೆರಾವರ್ಕ್, ಮ್ಯೂಸಿಕ್ ಚೆನ್ನಾಗಿದೆ. ಸಬ್ಜೆಕ್ಟ್ ಬೇರೆ ತರ ಇದೆ. ಇತ್ತೀಚೆಗಿನ ದಿನ 70ರ ಕಥೆ ಸಕ್ಸಸ್ ಆಗಿದೆ. ಈಗ 80ರ ಕಥೆಗೆ ಬಂದಿದ್ದೇನೆ. 2023 ಹಿಟ್ ಕಾಟೇರ..2024ರ ಹಿಟ್ ನಿಮ್ಮದಾಗಲಿ ಎಂದು ವಿನೋದ್ ಪ್ರಭಾಕರ್ ಚಿತ್ರಕ್ಕೆ ಶುಭ ಹಾರೈಸಿದರು.

ಇದನ್ನೂ ಓದಿ ನಾನೇ ಭಾರತ ಎಂದ ದೀಕ್ಷಿತ್ ಶೆಟ್ಟಿ !! ಗಣರಾಜ್ಯೋತ್ಸವದ ದಿನ ಬ್ಲಿಂಕ್ ಚಿತ್ರತಂಡದಿಂದ ವಿನೂತನ ಪ್ರಯತ್ನ

ನಾಯಕ ವಿನೋದ್ ಪ್ರಭಾಕರ್ ಮಾತನಾಡಿ, ನಾವು ಏನ್ ಅನ್ನೋದನ್ನು ಕೆಲಸದಲ್ಲಿ ತೋರಿಸುತ್ತೇವೆ. ಇದು ಬೇರೆ ರೀತಿಯ ಜಾನರ್. ಬಹಳಷ್ಟು ಜನ ಟಚ್ ಮಾಡಲು ಆಗದ ಕಥೆ. ನನ್ನ ಗೆಟಪ್ ನಿಮಗೆ ಇಷ್ಟ ಆಗಿದೆ ಅಂದುಕೊಳ್ಳುತ್ತೇನೆ. ಬೆಸ್ಟ್ ಲುಕ್ ಮಾದೇವ ಅಂತಾ ನನಗೆ ಅನಿಸುತ್ತದೆ. ಪ್ರೊಡ್ಯೂಸರ್ ಕೇಶವಣ್ಣ ಬಹಳಷ್ಟು ಕಷ್ಟ ಎದುರಿಸಿ ಸಿನಿಮಾ ಮಾಡಿದ್ದೀರಾ? ನಿಮಗೆ ಒಳ್ಳೆದಾಗಲಿ. ಸಿನಿಮಾ ಬಗ್ಗೆ ಮಾತಾನಾಡುವುದು ತುಂಬಾ ಇದೆ. ಟ್ರೇಲರ್ ಇವೆಂಟ್ ನಲ್ಲಿ ಮಾತನಾಡುತ್ತೇನೆ ಎಂದರು.

ನಾಯಕಿ ಸೋನಲ್ ಮಾತನಾಡಿ, ರಾಬರ್ಟ್ ಆದ್ಮೇಲೆ ನನಗೆ ವಿನೋದ್ ಸರ್ ಜೋಡಿಯಾಗಿ ತುಂಬಾ ಸಿನಿಮಾಗಳು ಬಂದವು. ಆದರೆ ಯಾವುದು ಸೆಟ್ ಆಗಲಿಲ್ಲ. ಮಾದೇವ ಸಿನಿಮಾ ವಿನೋದ್ ಸರ್ ಗೆ ಬಂದಿದ್ದು, ಅವರು ನನ್ನ ಕಾಸ್ಟ್ ಮಾಡಿದರೆ ಚೆನ್ನಾಗಿ ಇರುತ್ತದೆ ಎಂದಾಗ ನನ್ನ ಜರ್ನಿ ಶುರುವಾಯ್ತು. ಹಳ್ಳಿ ಹುಡ್ಗಿ ಪಾತ್ರ ನನ್ನದು. ನಾನು ತುಂಬಾ ಎಂಜಾಯ್ ಮಾಡಿ ನನ್ನ ಪಾತ್ರ ಮಾಡಿದ್ದೇನೆ ಎಂದು ತಿಳಿಸಿದರು.

ನಿರ್ದೇಶಕ ನವೀನ್ ರೆಡ್ಡಿ ಮಾತನಾಡಿ, ಶೃತಿ ಮೇಡಂ ಪಾತ್ರ ಚಾಲೆಂಜಿಂಗ್ ಆಗಿದೆ. ಇಡೀ ಸಿನಿಮಾವನ್ನು ವಿನೋದ್ ಸರ್ ಭುಜದ ಮೇಲೆ ಹಾಕಿತೆಗೆದುಕೊಂಡು ಹೋಗುತ್ತಾರೆ.ಅಚ್ಯುತ್ ಸರ್ ಗೆಸ್ಟ್ ಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಲನ್ ಆಗಿ ಕಿಟ್ಟಿ ಸರ್ ನಟಿಸಿದ್ದಾರೆ. ಇಡೀ ತಂಡದ ಶ್ರಮ ಇದು ಎಂದರು.

ಮಾದೇವ ಟೀಸರ್ ಮಾಸ್ ಅಂಶಗಳಿಂದ ಕೂಡಿದೆ. ಮರಿ ಟೈಗರ್ ವಿನೋದ್ ಪ್ರಭಾಕರ್ ರಗಡ್ ಅವಾತರಲ್ಲಿ ಕಾಣಿಸಿಕೊಂಡಿದ್ದಾರೆ. ಹಿಂದೆಂದೂ ಕಂಡಿರದಂತಹ ಗೆಟಪ್ ನಲ್ಲಿ ಮರಿ ಟೈಗರ್ ಮಿಂಚಿದ್ದಾರೆ. ಖಳನಾಯಕನಾಗಿ ಶ್ರೀನಗರಕಿಟ್ಟಿ, ಶ್ರುತಿ ಮತ್ತು ಅಚ್ಯುತ್ ಕುಮಾರ್, ಕಾಕ್ರೋಚ್ ಸುಧಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ‘ರಾಬರ್ಟ್’ ಸಿನಿಮಾದಲ್ಲಿ ರಾಘವ್ ಮತ್ತು ತನು ಪಾತ್ರಗಳ ಮೂಲಕ ಪ್ರೇಕ್ಷಕರಿಗೆ ಸಖತ್ ಇಷ್ಟವಾಗಿದ್ದ ವಿನೋದ್ ಪ್ರಭಾಕರ್ ಮತ್ತು ಸೋನಲ್ ಮೊಂಥೆರೋ ಮಾದೇವ’ ಚಿತ್ರದಲ್ಲೂ ಜೋಡಿಯಾಗಿ ಅಭಿನಯಿಸಿದ್ದಾರೆ.

ನೈಜ ಘಟನೆಗಳಿಂದ ಸ್ಪೂರ್ತಿ ಪಡೆದ ಈ ಸಿನಿಮಾದ ಕಥೆಯು 1965, 1980 ಮತ್ತು 1999ರ ಕಾಲಘಟ್ಟದಲ್ಲಿ ನಡೆಯಲಿದೆ. ಕನಕಪುರ, ಚನ್ನಪಟ್ಟಣ, ಶಿವಮೊಗ್ಗ, ರಾಮೋಜಿ ಫಿಲ್ಮಂಸಿಟಿ, ಹೆಸರಘಟ್ಟ ಭಾಗಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಬಾಹುಬಲಿ, ಆರ್ಆರ್ಆರ್ ಸಿನಿಮಾಗಳ ಛಾಯಾಗ್ರಾಹಕ ಸೆಂಥಿಲ್ ಕುಮಾರ್ ಬಳಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಬಾಲಕೃಷ್ಣ ತೋಟ ‘ಮಾದೇವ’ ಚಿತ್ರಕ್ಕೆ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದಾರೆ. ರಾಧಾಕೃಷ್ಣ ಬ್ಯಾನರ್ ನಡಿ ಆರ್ ಆರ್ ಕೇಶವ ದೇವಸಂದ್ರ ಚಿತ್ರಕ್ಕೆ ಹಣ ಹಾಕಿದ್ದಾರೆ. ಮಾರ್ಚ್ ತಿಂಗಳಲ್ಲಿ ಸಿನಿಮಾವನ್ನು ತೆರೆಗೆ ತರಲು ಚಿತ್ರತಂಡ ಸಜ್ಜಾಗಿದೆ.

Share this post:

Related Posts

To Subscribe to our News Letter.

Translate »