ಕಳೆದ ದಿನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಂದ ಖಡಕ್ ಕಲ್ಟ್ ಸಿನಿಮಾ ’ಪೆಪೆ’ ಚಿತ್ರದ ಟ್ರೈಲರ್ ಲಾಂಚ್ ಆಯ್ತು.. ಲಾಂಚ್ ಆಗಿದ್ದೇ ತಡ ವಿನಯ್ ರಾಜ್ ಕುಮಾರ್ ಅವರ ಲುಕ್ಗೆ ಅವರ ಆ್ಯಕ್ಷನ್ ಕಿಕ್ಗೆ ಪ್ರೇಕ್ಷಕ ಮಹಾ ಪ್ರಭು ಉಘೇ ಉಘೇ ಎನ್ನುತ್ತಿದ್ದಾನೆ , ಆಗಸ್ಟ್ 30ನೇ ತಾರೀಖ್ ‘ಪೆಪೆ’ ಥಿಯೇಟರ್ ಗೆ ಹೋದು ಪಕ್ಕ ಎನ್ನುತ್ತಿದ್ದಾನೆ. ಪೆಪೆ ಬಗ್ಗೆ ಕನ್ನಡ ಪ್ರೇಕ್ಷಕರಿಗೆ ಈ ಮಟ್ಟದ ನಿರೀಕ್ಷೆ ಏರುತ್ತಿರುವಾಗಲೆ ಈಗ ಅಕ್ಕ ಪಕ್ಕದ ಇಂಡಸ್ಟ್ರಿಯಿಂದಲೂ ಪೆಪೆ ರತ್ನಗಂಬಳಿ ಹಾಸಿ ಸ್ವಾಗತ ಬುಲಾವು ಬರುತ್ತಿದೆ.
ಹೌದು.. ಪೆಪೆ ಚಿತ್ರದ ಟ್ರೈಲರ್ ಬಿಡುಗಡೆಯಾಗಿ 24ಗಂಟೆಯೊಳಗೆ 10 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆಯುತ್ತಿರುವ ಬೆನ್ನಲೆ ತಮಿಳು ಮತ್ತು ತೆಲುಗು ಚಿತ್ರರಂಗದಿಂದ ಪೆಪೆ ಸಿನಿಮಾ ಡಬ್ಬಿಂಗ್ ರೈಟ್ಸ್ಗೆ ನಿರ್ಮಾಪಕರುಗಳಾದ ಬಿ.ಎಮ್. ಶ್ರೀರಾಮ್ ಹಾಗೂ ಉದಯ್ ಶಂಕರ್ ಅವರಿಗೆ ಬೇಡಿಕೆಯ ಕರೆಗಳು ಬರುತ್ತಿವೆ.
ಶ್ರೀಲೇಶ್ ನಾಯರ್ ನಿರ್ದೇಶನದ ಪೂರ್ಣ ಚಂದ್ರ ತೇಜಸ್ವಿ ಸಂಗೀತ ನೀಡಿರುವ ಪೆಪೆ ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆಗಳು ಗರಿಗೆದರುತ್ತಿದೆ. ಕ್ಲಾಸ್ ಆಗಿದ್ದ ಹೀರೋ ಮಾಸ್ ಅದ್ರಲೂ ಕಲ್ಟ್ ಆ್ಯಕ್ಷನ್ ಚಿತ್ರದಲ್ಲಿ ಹೇಗೆ ರಾರಾಜಿಸುತ್ತಾರೆ ಅನ್ನೋದನ್ನ ಕಾದುನೋಡಬೇಕು.