ದೊಡ್ಮನೆ ಕುಡಿ ವಿನಯ್ ರಾಜ್ಕುಮಾರ್ ನಟನೆಯ ‘ಒಂದು ಸರಳ ಪ್ರೇಮಕಥೆ’ ಸಿನಿಮಾ ನಾಳೆ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಅದ್ಧೂರಿಯಾಗಿ ಪ್ರಚಾರ ನಡೆಸಿರುವ ಚಿತ್ರತಂಡ ನಿನ್ನೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಪ್ರೀ-ರಿಲೀಸ್ ಕಾರ್ಯಕ್ರಮ ಏರ್ಪಡಿಸಿತ್ತು. ಕಾರ್ಯಕ್ರಮಕ್ಕೆ ದೊಡ್ಮನೆಯ ಹಲವು ಅತಿಥಿಗಳು ಆಗಮಿಸಿದ್ದರು. ಅಶ್ವಿನಿ ಪುನೀತ್ ರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಹಾಗೂ ಅವರ ಪತ್ನಿ. ವಿನಯ್ ರಾಜ್ಕುಮಾರ್ ಸಹೋದರ ಯುವ ರಾಜ್ಕುಮಾರ್, ಶ್ರೀಮುರಳಿ, ಧಿರೇನ್ ರಾಮ್ ಕುಮಾರ್ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಇದನ್ನೂ ಓದಿ ಶಭ್ಬಾಷ್ ಮೊದಲ ಹಂತದ ಚಿತ್ರೀಕರಣ ಮುಕ್ತಾಯ!
ಶ್ರೀಮುರಳಿ ಮಾತನಾಡಿ, ಒಂದು ಸರಳ ಪ್ರೇಮಕಥೆಯಲ್ಲಿ ವಿನು ಬಹಳ ಚೆನ್ನಾಗಿ ಕಾಣಿಸಿದ ಎನಿಸುತ್ತಿದೆ. ವಿನು ಕ್ಯಾರೆಕ್ಟರ್ ಬಿಟ್ಟು ಕಿಂಚಿತ್ತು ಅಲ್ಲಾಡದೆ, ಪಾತ್ರವನ್ನು ಬಹಳ ತೂಕದಿಂದ, ಜವಾಬ್ದಾರಿಯಿಂದ ನಿಭಾಯಿಸಿದ್ದಾರೆ ಎಂಬ ನಂಬಿಕೆ ಇದೆ. ಈ ಬಗ್ಗೆ ಹೆಮ್ಮೆ ಇದೆ. ಈ ಚಿತ್ರದಲ್ಲಿ ಪ್ರತಿಯೊಂದು ಕ್ಯಾರೆಕ್ಟರ್ಸ್, ಆಕ್ಟರ್ಸ್ ತುಂಬಾ ಅಚ್ಚುಕಟ್ಟಾಗಿ ಕಾಣಿಸಿದ್ರಿ. ಇಬ್ಬರು ಹೀರೋಯಿನ್ ಇಬ್ಬರು ಮುದ್ದಾಗಿ ಕಾಣಿಸ್ತಾರೆ. ಸುನಿ ಅವರ ಮೇಕಿಂಗ್ ಸ್ಟೈಲ್ ಸೂಪರ್. ಅವರು ಚೆನ್ನಾಗಿ ಪ್ರಿಪೇರ್ ಆಗ್ತಾರೆ. ಅವರು ಹೀರೋನಾ ಪ್ರೀತಿಸ್ತಾರೆ. ಸಿನಿಮಾ ಚೆನ್ನಾಗಿ ಮೂಡಿ ಬರುತ್ತದೆ. ನಾಳೆ ಚಿತ್ರ ಬಿಡುಗಡೆಯಾಗುತ್ತಿದ್ದು, ಇಡೀ ಸರಳ ಪ್ರೇಮಕಥೆ ತಂಡಕ್ಕೆ ಒಳ್ಳೆಯದಾಗಲಿ ಎಂದು ತಿಳಿಸಿದರು.
ಇದನ್ನೂ ಓದಿ ಅರ್ಥಪೂರ್ಣವಾಗಿ ಸಂಪನ್ನಗೊಂಡ ಸ್ವರಮೇಧಾ ಸಂಗೀತೋತ್ಸವ
ವಿನಯ್ ರಾಜ್ ಕುಮಾರ್ ಮಾತನಾಡಿ, ಕಳೆದೊಂದು ವಾರದಿಂದ ಸಾಕಷ್ಟು ಪ್ರಚಾರ ಮಾಡಿದ್ದೇವೆ. ತುಂಬಾ ಒಳ್ಳೆ ಪ್ರತಿಕ್ರಿಯೆ ಬಂತು. ಸಾಕಷ್ಟು ಪ್ರೀತಿ ಬಂತು. ಶೂಟಿಂಗ್ ನಂತರ ಎಲ್ಲರನ್ನೂ ನೋಡುತ್ತಿದ್ದೇನೆ. ಖುಷಿಯಾಗುತ್ತಿದೆ. ರೋಮ್ಯಾಂಟಿಕ್ ಕಾಮಿಡಿ ಸಿನಿಮಾ ಎಂದರೆ ನನಗೆ ತುಂಬಾ ಇಷ್ಟ. ಮನಸಿಗೆ ಸಾಕಷ್ಟು ಸಮಾಧಾನ ಕೊಡುತ್ತದೆ. ಖುಷಿ, ತೃಪ್ತಿ ಸಿಗುತ್ತದೆ. ಅತಿಶಯ ಪಾತ್ರ ಪ್ಲೇ ಮಾಡಲು ತುಂಬಾ ಖುಷಿಕೊಡ್ತು ಎಂದರು.
ಇದನ್ನೂ ಓದಿ ಬಿಡುಗಡೆಯಾಯ್ತು ಬಹುನಿರೀಕ್ಷಿತ “ಇಮೇಲ್” ಚಿತ್ರದ ಟ್ರೇಲರ್ ಹಾಗೂ ಹಾಡು
ನಿರ್ದೇಶಕ ಸಿಂಪಲ್ ಸುನಿ ಮಾತನಾಡಿ, ನಮ್ಮ ಸಿನಿಮಾಗೆ ಹಾರೈಸಲು ಬಂದಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳು. ಅಶ್ವಿನಿಮೇಡಂ ಸಿನಿಮಾ ಸೆಟ್ ಗೆ ಬಂದಿದ್ರಿ, ಸಾಂಗ್ ರಿಲೀಸ್ ಮಾಡಿಕೊಟ್ರಿ. ಪ್ರತಿಯೊಂದು ಹೆಜ್ಜೆಯಲ್ಲಿ ನಮ್ಮ ಜೊತೆಗೆ ಇರೋದಿಕ್ಕೆ ಧನ್ಯವಾದ. ಒಂದು ಸರಳ ಪ್ರೇಮಕಥೆ ನಾನು ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದಾಗ ರಿಜಿಸ್ಟ್ರಾರ್ ಮಾಡಿದ ಟೈಟಲ್. ನಾಳೆ ನಮ್ಮ ಸಿನಿಮಾ ನಿಮ್ಮ ಎದುರು ಬರಲಿದೆ ನಿಮ್ಮ ಬೆಂಬಲ ಹಾರೈಕೆ ಇರಲಿ ಎಂದರು.
ಇದನ್ನೂ ಓದಿ ವಿನೋದ್ ಪ್ರಭಾಕರ್ ಅಭಿನಯದ 25 ನೇ ಚಿತ್ರ “ಬಲರಾಮನ ದಿನಗಳು” .
ನಾಯಕಿ ಸ್ವಾತಿಷ್ಠ ಕೃಷ್ಣನ್ ಮಾತನಾಡಿ, ಒಂದು ಸರಳ ಪ್ರೇಮ ಕಥೆ ನನ್ನ ಮೊದಲ ಕನ್ನಡ ಸಿನಿಮಾ. ತುಂಬಾ ಖುಷಿಯಾಗುತ್ತಿದೆ. ನಾನು ಜರ್ನಲಿಸ್ಟ್ ಪಾತ್ರ ಮಾಡಿದ್ದೇನೆ. ರಿಯಲ್ ಲೈಫ್ ನಲ್ಲಿ ನಾನು ಜರ್ನಲಿಸಂ ಸ್ಟೂಡೆಂಟ್. ಸುನಿ ಸರ್, ವಿನಯ್ ಅವರ ಜೊತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ. ಇಡೀ ತಂಡಕ್ಕೆ ತುಂಬಾ ಧನ್ಯವಾದಗಳು. ಇದೊಂದು ಪಕ್ಕ ಫ್ಯಾಮಿಲಿ ಎಂಟರ್ ಟೈನರ್. ನಿಮ್ಮ ಕುಟುಂಬದ ಜೊತೆ ನೋಡಿ ನಿಮಗೆ ಇಷ್ಟವಾಗುತ್ತದೆ ಎಂದುಕೊಳ್ಳುತ್ತೇನೆ. ಕನ್ನಡ ಹುಡುಗಿಯನ್ನು ಬಿಟ್ಟುಕೊಂಡುವುದಿಲ್ಲ ಅಂತಾ ಗೊತ್ತು. ನಿಮ್ಮ ಬೆಂಬಲ ಬೇಕು ಎಂದರು.
ಇದನ್ನೂ ಓದಿ ರಾಜಸ್ಥಾನ್ ಚಲನ ಚಿತ್ರೋತ್ಸವದಲ್ಲಿ ಪ್ರಶಸ್ತಿ ಗೆದ್ದ “ತಾರಿಣಿ”
ಸಿಂಪಲ್ ಸುನಿ ನಿರ್ದೇಶನದ ಒಂದು ಸರಳ ಪ್ರೇಮಕಥೆ ಸಿನಿಮಾದಲ್ಲಿ ವಿನಯ್ ರಾಜ್ಕುಮಾರ್ ನಾಯಕನಾಗಿ, ‘ರಾಧಾ ಕೃಷ್ಣ’ ಧಾರಾವಾಹಿ ಖ್ಯಾತಿಯ ಮಲ್ಲಿಕಾ ಸಿಂಗ್ , ಸ್ವಾತಿಷ್ಠ ಕೃಷ್ಣನ್ ನಾಯಕಿಯರಾಗಿ ನಟಿಸಿದ್ದಾರೆ. ರಾಘವೇಂದ್ರ ರಾಜ್ಕುಮಾರ್ ಅವರು ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ರಾಜೇಶ್ ನಟರಂಗ, ಅರುಣಾ ಬಾಲರಾಜ್, ಸಾಧುಕೋಕಿಲ ಮುಂತಾದ ತಾರಾಬಳಗ ಚಿತ್ರದಲ್ಲಿದೆ. ಆದಿ ಅವರ ಸಂಕಲನವಿದ್ದು, ಹಾಡುಗಳಿಗೆ ವೀರ್ ಸಮರ್ಥ್ ಸಂಗೀತ ಹಾಗೂ ಕಾರ್ತಿಕ್ ಅವರ ಕ್ಯಾಮರಾ ಶ್ರಮವಿದೆ.ರಾಮ್ ಮೂವೀಸ್ ಬ್ಯಾನರ್ ಅಡಿ ಮೈಸೂರು ರಮೇಶ್ ಬಂಡವಾಳ ಹೂಡಿದ್ದಾರೆ.ನಾಳೆ ಒಂದು ಸರಳ ಪ್ರೇಮಕಥೆ ಸಿನಿಮಾ ರಾಜ್ಯಾದ್ಯಂತ ತೆರೆಗೆ ಬರಲಿದೆ.