ಸ್ಯಾಂಡಲ್ವುಡ್ನಲ್ಲಿ ಪೋಷಕ ಪಾತ್ರಗಳ ಮೂಲಕ ಗುರುತಿಸಿಕೊಂಡ ಪ್ರತಿಭೆ ‘ಕಾಕ್ರೋಚ್’ ಸುಧಿ. ಅದರಲ್ಲೂ ‘ಟಗರು’ ಸಿನಿಮಾದ ಕಾಕ್ರೋಚ್ ಪಾತ್ರ ಸುಧಿಗೆ ಸಾಕಷ್ಟು ಹೆಸರನ್ನು ತಂದುಕೊಡ್ತು. ಸದ್ಯ ಕಾಕ್ರೋಚ್ ಸುಧಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.
ಯಾವುದೇ ಪಾತ್ರವನ್ನು ಕೊಟ್ಟರು ನಿಭಾಯಿಸುವ ಸುಧಿ ನಟನೆಯ ೩೦ ಸಿನಿಮಾಗಳು ರಿಲೀಸ್ ಆಗಬೇಕಿದೆ. ಅದರ ಜೊತೆಗೆ ಇನ್ನು ಐದು ಸಿನಿಮಾಗಳು ಕೈನಲ್ಲಿದ್ದು, ಅವುಗಳ ಶೂಟಿಂಗ್ಗೆ ಕೂಡ ತಯಾರಿ ನಡೆಸುತ್ತಿದ್ದಾರೆ.ಇದನ್ನೂ ಓದಿ:ದೀಕ್ಷಿತ್ ಶೆಟ್ಟಿ ಅಭಿನಯದ “ಬ್ಯಾಂಕ್ of ಭಾಗ್ಯಲಕ್ಷ್ಮಿ” ಚಿತ್ರದ ಅನಿಮೇಷನ್ ಟೀಸರ್ ಗೆ ಮೆಚ್ಚುಗೆಯ ಮಹಾಪೂರ .
ಖುಷಿಯ ವಿಚಾರ ಏನು ಅಂದ್ರೆ ‘ಕಾಕ್ರೋಚ್’ ಸುಧಿ ಹೀರೋ ಆಗಿ ಬಡ್ತಿ ಪಡೆದುಕೊಂಡಿದ್ದಾರೆ. ಹೆಚ್ಚಾಗಿ ವಿಲನ್ ಪಾತ್ರಗಳಿಂದಲೇ ಫೇಮಸ್ ಆಗಿದ್ದ ಸುಧಿ ಈಗ ಹೀರೋ ಆಗಿದ್ದು, ಸಿನಿಮಾಕ್ಕೆ ಇನ್ನೂ ಹೆಸರಿಟ್ಟಿಲ್ಲ.
ಕ್ರೈಮ್ ಥ್ರಿಲ್ಲರ್ ಮಾದರಿಯ ಕಥೆಗಳಿಗೆ ಹೀರೋ ಆಗುತ್ತಿದ್ದಾರೆ ಎಂಬ ಮಾಹಿತಿ ಇದೆ. ಕಾಕ್ರೋಚ್ ಸುಧಿಗೆ ಫುಲ್ ಡಿಮ್ಯಾಂಡ್ ಇದೆ. ಇನ್ನಿಬ್ಬರು ನಿರ್ದೇಶಕರು ಕೂಡ ಸುಧಿ ಅವರ ಕಾಲ್ಶೀಟ್ಗಾಗಿ ಕಾಯುತ್ತಿದ್ದಾರೆ ಎಂಬ ಟಾಕ್ ಇದೆ.ಇದನ್ನೂ ಓದಿ:‘ಇಂಡಿಯನ್-2’ ಸಿನಿಮಾದ ಎರಡನೇ ಹಾಡು ರಿಲೀಸ್..ಕೇಳಿ ಸಿದ್ಧಾರ್ಥ್,ರಾಕುಲ್ ಪ್ರೇಮಗೀತೆ
ಹೊಸ ಸಿನಿಮಾಗೆ ಹೀರೋ ಆದ ಮೇಲೆ ಸುಧಿ ಲುಕ್ ಸಂಪೂರ್ಣವಾಗಿ ಬದಲಾಗಿದೆ. ಉದ್ದನೆಯ ಕೂದಲಿನ ಬದಲು, ಶಾರ್ಟ್ ಹೇರ್ ಲುಕ್ನಲ್ಲಿ ಇನ್ನಷ್ಟು ಸ್ಮಾರ್ಟ್ ಆಗಿ ಸುಧಿ ಕಾಣಿಸುತ್ತಿದ್ದಾರೆ.
ಶಿವರಾಜ್ಕುಮಾರ್ ನಟನೆಯ ‘ಟಗರು’ ಸಿನಿಮಾದಲ್ಲಿ ಡಾಲಿ ತಮ್ಮ ಕಾಕ್ರೋಚ್ ಪಾತ್ರದಲ್ಲಿ ಸುಧಿ ನಟಿಸಿದ್ದರು. ಆ ಪಾತ್ರ ಸುಧಿಗೆ ಸಖತ್ ಹೆಸರು ತಂದುಕೊಡ್ತು. ದುನಿಯಾ ವಿಜಯ್ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದ ‘ಸಲಗ’ ಚಿತ್ರದಲ್ಲಿ ಕಾಕ್ರೋಚ್ ಸುಧಿ, ಸಾವಿತ್ರಿ ಎಂಬ ಪಾತ್ರ ಮಾಡಿದ್ದರು. ಆ ಪಾತ್ರ ಕೂಡ ಸಖತ್ ಫೇಮಸ್ ಆಗಿತ್ತು.