ಚಿತ್ರರಂಗದಲ್ಲಿ ಸದ್ಯ ಕೇಳಿ ಬರುತ್ತಿರುವ ಚಿತ್ರದ ಹೆಸರು `ವಿಕ್ರಾಂತ್ ರೋಣ’ . ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ನಿರೀಕ್ಷಿತ ಸಿನಿಮಾ `ವಿಕ್ರಾಂತ್ ರೋಣ’ ಚಂದನವನದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಚಿತ್ರದ ಮೊದಲ ಸಾಂಗ್ `ರಾ ರಾ ರಕ್ಕಮ್ಮ’ ಸಾಂಗ್‌ನಿಂದ ಹಿಡಿದು ಈಗ ರಿಲೀಸ್ ಆಗಿರುವ `ಗುಮ್ಮ ಬಂದ ಗುಮ್ಮ’ ಸಾಂಗ್‌ವೆರೆಗೂ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸುತ್ತಿದೆ.
‘ವಿಕ್ರಾಂತ್ ರೋಣ’ ಚಿತ್ರದ ಮೊದಲ ಹಾಡು ‘ರಾ ರಾ ರಕ್ಕಮ್ಮ..’ ಈ ಸಾಂಗ್ ಸೂಪರ್ ಹಿಟ್ ಕೂಡ ಆಗಿದೆ. ಇದಾದ ಬಳಿಕ ‘ರಾಜಕುಮಾರಿ..’ ಹೆಸರಿನ ಮೆಲೋಡಿ ಸಾಂಗ್ ಬಿಡುಗಡೆ ಮಾಡಲಾಯಿತು. ನಂತರ ರಿಲೀಸ್ ಆಗಿದ್ದು ‘ಹೇ ಫಕೀರಾ..’ ಹಾಡು. ಇದೀಗ ಬಹಳ ಕುತೂಹಲ ಮೂಡಿಸಿದ್ದ ಹಾಡು ‘ಗುಮ್ಮಾ ಬಂದ ಗುಮ್ಮಾ..’ ಈ ಹಾಡು ಇದೀಗ ಬಿಡುಗಡೆಯಾಗಿದೆ. ‘ರಾತ್ರಿ ಕುದುರೆ ಬೆನ್ನ ಹೇರಿ ಬೀಸೊ ಗಾಳಿ ಜೊತೆಗೆ ಸೇರಿ’ ಎಂಬ ಸಾಹಿತ್ಯದ ಮೂಲಕ ಶುರು ಆಗೊ ಈ ಹಾಡು ಆಲಿಸುವ ಪ್ರೇಕ್ಷಕನಿಗೆ ರೋಮಾಂಚನ ಗೊಳಿಸುವಂತಿದೆ.
ಈ ಹಾಡು ಸಿನಿರಸಿಕರ ಗಮನ ಸೆಳೆಯುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಸಾಂಗ್ ವೈರಲ್ ಆಗುತ್ತಿದೆ. ರಕ್ಕಮ್ಮನ ಕಿಕ್‌ನಲ್ಲಿರುವ ಫ್ಯಾನ್ಸ್ಗೆ ಗುಮ್ಮನ ಸಾಂಗ್ ದಿಲ್ ಗೆದ್ದಿದೆ.
ಚಿತ್ರದಲ್ಲಿ ಕಿಚ್ಚ ಸುದೀಪ್ ಜತೆ ನಿರೂಪ್ ಭಂಡಾರಿ, ನೀತಾ ಅಶೋಕ್ ಪ್ರಮುಖ ಪಾತ್ರದಲ್ಲಿ ಸಾಥ್ ನೀಡಿದ್ದಾರೆ. ಇದೇ ಜುಲೈ 28ಕ್ಕೆ 3ಡಿ ರೂಪದಲ್ಲಿ ತೆರೆಗೆ ಅಬ್ಬರಿಸುತ್ತಿದೆ.