Sandalwood Leading OnlineMedia

ವಿಕ್ರಮ್ ಇಂದೇ ಡಿಸ್ಚಾರ್ಜ್

 

 

ತಮಿಳು ನಟ ವಿಕ್ರಮ್ ಅವರ ಆರೋಗ್ಯದಲ್ಲಿ ಧೀಡಿರ್ ಏರುಪೇರಾಗಿದ್ದರಿಂದಾಗಿ ಅವರನ್ನು ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಸದ್ಯ ಅವರು ಆರೈಕೆಯಲ್ಲಿದ್ದು, ಇಂದು ಸಾಯಂಕಾಲ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

 

ಡಾಲಿ ಸಿನ್ಮಾ ಸೆಟ್‌ಗೆ ಕೊಟ್ಟ ಖ್ಯಾತ ಕ್ರಿಕೆಟ್ ಆಟಗಾರ್ತಿ!

 

ಇಂದು ಸಂಜೆ ಅವರು ನಿರ್ದೇಶಕ ಮಣಿರತ್ನಂ ಅವರ ಬಹುನಿರೀಕ್ಷಿತ ಚಿತ್ರ ಪೊನ್ನಿಯಿನ್ ಸೆಲ್ವನ್ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು ಎನ್ನಲಾಗಿದೆ.ಸದ್ಯ ನಟ ವಿಕ್ರಮ್ ಅವರ ಮುಂದೆ ಹಲವಾರು ಚಿತ್ರಗಳ ಯೋಜನೆಗಳಿವೆ, ಅದರಲ್ಲಿ ಪ್ರಮುಖವಾಗಿ ಪೊನ್ನಿಯಿನ್ ಸೆಲ್ವನ್, ನಾಗರಹಾವು ಮತ್ತು ಪಾ ರಂಜಿತ್ ಅವರ ನಿರ್ದೇಶನದ ಚಿತ್ರಗಳು ಸೇರಿವೆ.

 

ಚಾಲಾಕಿ ಚಾಲಕಿಯ ಕಥೆ ಬಿಚ್ಚಿಡ್ತಾ `DRIVER JAMUNA’ ಟ್ರೇಲರ್?

 

 

 

ಇತ್ತೀಚಿಗಷ್ಟೇ ಅವರು ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ಮಹಾನ್ ಚಿತ್ರದಲ್ಲಿ ಕಾಣಿಸಿಕೊ0ಡಿದ್ದರು, ವಿಶೇಷವೆಂದರೆ ಚಿತ್ರದಲ್ಲಿ ಅವರ ಮಗ ಧ್ರುವ ವಿಕ್ರಮ್ ನಾಯಕನಾಗಿ ನಟಿಸಿದ್ದಾರೆ. ಚಿತ್ರವು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ತೆರೆಕಂಡಿತ್ತು.ಅವರ ಇನ್ನೊಂದು ಬಹು ಬಹುನಿರೀಕ್ಷಿತ ಚಿತ್ರ ಕೋಬ್ರಾ ಆಗಸ್ಟ್ 11 ರಂದು ತೆರೆಗೆ ಬರಲಿದೆ, ಚಿತ್ರದಲ್ಲಿ ಮಾಜಿ ಕ್ರಿಕೆಟ್ ಆಟಗಾರ ಇರ್ಫಾನ್ ಪಠಾಣ್, ಕನ್ನಡ ನಟಿ ಶ್ರೀನಿಧಿ ಶೆಟ್ಟಿ, ಮಿರ್ನಾಲಿನಿ ರವಿ, ಕೆಎಸ್ ರವಿಕುಮಾರ್ ಮತ್ತು ಮಿಯಾ ಜಾರ್ಜ್ ಅವರು ಚಿತ್ರದ ತಾರಾ ಬಳಗದಲ್ಲಿದ್ದಾರೆ.

ಹೊಸ ಲುಕ್ ಮೂಲಕ ಲಕ್ ಅರಸಿ ಹೊರಟ ಸಚಿನ್

 

ಇನ್ನೊಂದೆಡೆಗೆ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಪೊನ್ನಿಯಿನ್ ಸೆಲ್ವನ್: ಭಾಗ 1, ಚಿತ್ರದಲ್ಲಿ ಐಶ್ವರ್ಯಾ ರೈ ಬಚ್ಚನ್, ಕಾರ್ತಿ, ಜಯಂ ರವಿ, ಶರತ್ ಕುಮಾರ್ ಮತ್ತು ತ್ರಿಷಾ ನಟಿಸಿದ್ದು, ಚಿತ್ರವು ಸೆಪ್ಟೆಂಬರ್ 30 ರಂದು ಬಿಡುಗಡೆಯಾಗಲಿದೆ.

 

 

 

 

 

Share this post:

Related Posts

To Subscribe to our News Letter.

Translate »