`ವಿಜಯಾನಂದ’ ಚಿತ್ರ ಟೈಟಲ್‌ನಲ್ಲೇ ವಿಜಯವನ್ನಿಟ್ಟುಕೊಂಡು ಭರ್ಜರಿಯಾಗಿ ಬಿಡುಗಡೆಗೊಂಡಿದೆ. `ಅಪ್ಪ ಹಾಕಿದ ಆಲದ ಮರಕ್ಕೆ’ ನೇತು ಹಾಕಿಕೊಳ್ಳದೆ ತನ್ನದೇ ದಾರಿಯಲ್ಲಿ ವಿಜಯವೆಂಬ ಹೆಮ್ಮರಗಳನ್ನು ಬೆಳೆಸಿದ ಸಾಹಸಿಗನೊಬ್ಬನ ಅಸಮಾನ್ಯ ಸಾಹಸಗಾಥೆಯಿದು. ಉತ್ಸಾಹಿ ಯುವಕನೊಬ್ಬ ತಾನು ಕಂಡ ಕನಸನ್ನು ನನಸು ಮಾಡುವ ಭರದಲ್ಲಿ ಸಾಮ್ರಾಜ್ಯವೊಂದನ್ನು ಕಟ್ಟಿಬಿಡುವ ಚೇತೋಹಾರಿ ಪಯಣವಿದು. ನಿರ್ದೇಶಕಿ ರಿಶಿಕಾ ಶರ್ಮ ಬಯೋಪಿಕ್ ಒಂದಕ್ಕೆ ಕಮರ್ಶಿಯಲ್ ಅಂಶಗಳನ್ನು ಬೆರೆಸುವಲ್ಲಿ ತೆಗೆದುಕೊಳ್ಳಬೇಕಾದ ಚಾಚು ತಪ್ಪದೆ ಪಾಲಿಸಿ, ಉದ್ಯಮಿ ವಿಜಯ ಸಂಕೇಶ್ವರರ ಒಟ್ಟು ಬದುಕಿನ ಇಂಟ್ರೆಸ್ಟಿAಗ್ ಅಂಶಗಳನ್ನು ಎರಡು ಗಂಟೆ ನಲ್ವತ್ತು ನಿಮಿಷಗಳಲ್ಲಿ ಕಟ್ಟಿಕೊಡುವ ಪ್ರಯತ್ನದಲ್ಲಿ ಗೆದ್ದಿದ್ದಾರೆ.
Vijayanand Movie Team Exclusive Interview: `ವಿಜಯಾನಂದ’ ಚಿತ್ರತಂಡದೊ0ದಿಗಿನ ವಿಶೇಷ ಸಂದರ್ಶನ
1950 ರಿಂದ 1999 ರವರೆಗಿನ ಕಾಲಘಟ್ಟದ ಸೀನ್‌ಗಳಲ್ಲಿ ಕಾಣುವ ಅಂದಿನ ಕಾಲದ ರೈಲು, ನಿಲ್ದಾಣ, ಮುದ್ರಣ ಯಂತ್ರ, ವಾಹನ ವಿನ್ಯಾಸ, ಮನೆಗಳು, ಸಂಕೇಶ್ವರ ಕುಟುಂಬದ ಹಾಗೂ ಗದಗ ಹುಬ್ಬಳ್ಳಿ ಭಾಗದ ಉಡುಗೆ ತೊಡುಗೆ ಎಲ್ಲವೂ ಅಚ್ಚುಕಟ್ಟಾಗಿ ಮೂಡಿ ಬಂದಿದೆ. ನಿರ್ದೇಶಕಿಯಾಗಿದ್ದುಕೊಂಡೂ ಕಲಾವಿಭಾಗ ಮತ್ತು ವಸ್ತçವಿನ್ಯಾಸ ಎರಡನ್ನೂ ನಿಭಾಯಿಸಿರುವ ರಿಶಿಕಾ ಅವರ ಸಿನಿಮಾ ಪ್ರೀತಿ ಮೆಚ್ಚಬೇಕಾದದ್ದೆ. ಆದರೆ, ಕಾಸ್ಟೂö್ಯಮ್ ವಿಚಾರಕ್ಕೆ ಬರೋದಾದರೆ `ಸಿನಿಮ್ಯಾಟಿಕ್ ಫ್ರೀಡಂ’ನ್ನು ನೆಚ್ಚಿಕೊಳ್ಳದೆ ಒಂದಷ್ಟು ಸೀಸನಿಂಗ್ ಬಗ್ಗೆ ಮುತುವರ್ಜಿ ವಹಿಸಿದ್ದೇ ಆದರೆ ಇಡೀ ಸಿನಿಮಾ ಇನ್ನಷ್ಟು ಆಪ್ತವಾಗುತ್ತಿತ್ತು.
ಕನ್ನಡ ಸಿನಿಮಾ ಮೇಲೆ ಪ್ರೀತಿ ಇದೆ, ಉಳಿದಿದ್ದು ಅವರಿಗೆ ಬಿಟ್ಟದ್ದು: ಬ್ಯಾನ್ ಬಗ್ಗೆ ರಶ್ಮಿಕಾ ಪ್ರತಿಕ್ರಿಯೆ
ವಿಜಯ ಸಂಕೇಶ್ವರರು ಎದುರಿಸಿದ ಇನ್‌ಸೆಕ್ಯೂರಿಟಿ, ಅವಮಾನಗಳನ್ನೇ ವಿಜಯದ ಮೆಟ್ಟಿಲುಗಳನ್ನಾಗಿ ಮಾರ್ಪಾಡಿಸಿಕೊಂಡಿದ್ದನ್ನು ಸಿನಿಮಾ ನಿರೂಪಿಸುತ್ತಾ ಹೋಗುತ್ತದೆ. ವಿಜಯ ಸಂಕೇಶ್ವರ ಅವರ ಪುತ್ರ ಆನಂದ ಸಂಕೇಶ್ವರ (ಭರತ್ ಬೋಪಣ್ಣ ) ಅಪ್ಪನ ಬದುಕನ್ನು ನರೇಶನ್ ಮಾಡುವ ರೀತಿಯಲ್ಲಿ ಸಿನಿಮಾವನ್ನು ಪ್ರಸೆಂಟ್ ಮಾಡಲಾಗಿದ್ದು, ಪ್ರಸೆಂಟ್ ಮತ್ತು ಫ್ಲಾಶ್‌ಬ್ಯಾಕ್ ತಂತ್ರದ ಮೂಲಕ ಮನಮುಟ್ಟುವಂತೆ ಕಥೆ ಹೇಳಲಾಗಿದೆ. ತಮ್ಮನ್ನು ನಿರಂತರ ಅವಮಾನಿಸಿದ, ಕಾಲೆಳೆದ ಪತ್ರಿಕೋದ್ಯಮದ `ಶಕುನಿ’ಯೊಬ್ಬರಿಗೆ (ಪ್ರಕಾಶ್ ಬೆಳವಾಡಿ) ತಾವು ಪತ್ರಿಕೊದ್ಯಮಕ್ಕಿಳಿದು ಗೆದ್ದು ಬೀಗಿದ ಸನ್ನಿವೇಶ ಇಡೀ ಚಿತ್ರಕ್ಕೊಂದು ಓಘವನ್ನು ಕಲ್ಪಿಸಿದೆ. ಪತ್ರಿಕೆ, ಮಾಧ್ಯಮ ಮಾರುಕಟ್ಟೆ ಸಂಬAಧಿಸಿ ಸಂಕೇಶ್ವರರ ಬಿಸಿನೆಸ್ ಇಂಟೆಲಿಜೆನ್ಸ್ ಅನ್ನು ಸಿನಿಮಾ ಭಾಷೆಗಾಗಿ ಸ್ವಲ್ಪ ಬದಲಾಯಿಸಿದ್ದು ಅರಿವಿಗೆ ಬಂದರೂ, ಚಿತ್ರ ಹೇಳ ಹೊರಟ ಸಂದೇಶಕ್ಕೆ ಅದು ಅಡ್ಡಿಯಾಗುವುದಿಲ್ಲ.
Vijayanand Movie Team Exclusive Interview: `ವಿಜಯಾನಂದ’ ಚಿತ್ರತಂಡದೊ0ದಿಗಿನ ವಿಶೇಷ ಸಂದರ್ಶನ
ಫಸ್ಟ್ಆಫ್ ವಿಆರಲ್ ಮಲ್ಟಿ ಆಕ್ಸೆಲ್ ಬಸ್‌ನಂತೆ ಸರಾಗವಾಗಿ ಸಾಗಿದರೆ, ಸೆಕೆಂಡ್ ಆಫ್ ಓವರ್ ಲೋಡ್‌ನಿಂದ ತುಂಬಿದ ಟ್ರಕ್‌ನಂತೆ ನಿಧಾನಕ್ಕೆ ಸಾಗುತ್ತದೆ. ಸೆಕೆಂಡ್ ಆಫ್‌ನಲ್ಲಿನ ನಿಧಾನಗತಿಗೆ ಒಂದಷ್ಟು ಸನ್ನಿವೇಶಗಳ ಅನಾವಶ್ಯಕ `ಎಳೆತ’ ಕಾರಣ. ಬಯೋಪಿಕ್ ಸಿನಿಮಾ ಆಗಿರುವುದರಿಂದ ನಿರ್ದೇಶಕಿಗೆ ಸಂಕೇಶ್ವರ ಬದುಕನ್ನು ತೆರೆಯಮೇಲೆ ಕಟ್ಟಿಕೊಡಲು ಎಲ್ಲಾ ಸನ್ನಿವೇಶಗಳು ಅತ್ಯಗತ್ಯವಾಗಿತ್ತು ಅನ್ನುವುದನ್ನೂ ಇಲ್ಲಿ ತಳ್ಳಿಹಾಕುವಂತಿಲ್ಲ.
ನಂದಮೂರಿ ಬಾಲಕೃಷ್ಣರ ಸಿನಿಮಾಕ್ಕೆ ಜೋಡಿಯಾದ ನಟಿ ಶ್ರೀಲೀಲಾ
ಸಂಕೇಶ್ವರರ ಬದುಕಿನ ಮೂರು ಕಾಲಘಟ್ಟಗಳಲ್ಲಿ ಕಾಣಿಸಿದ ನಿಹಾಲ್ ರಜಪೂತ್ ಪಾತ್ರಕ್ಕೆ ಮಾಡಿಕೊಂಡ ಸಿದ್ಧತೆ ಪ್ರತೀ ದೃಶ್ಯದಲ್ಲೂ ಕಾಣುತ್ತದೆ. ಚಿತ್ರಕ್ಕಾಗಿ ದೇಹವನ್ನು ಹಿಗ್ಗಿಸಿಕೊಂಡಿದ್ದು ಮಾತ್ರವಲ್ಲದೇ, ಮಾನಸಿಕವಾಗಿಯೂ ಸಂಕೇಶ್ವರರನ್ನು ಅನಾಯಾಸವಾಗಿ ಒಗ್ಗಿಸಿಕೊಂಡಿದ್ದಾರೆ. ಬಿ.ಜಿ.ಸಂಕೇಶ್ವರ ಪಾತ್ರದಲ್ಲಿ ಅನಂತ್‌ನಾಗ್, ಚಂದ್ರಮ್ಮನಾಗಿ ವಿನಯಾಪ್ರಸಾದ್ ಮತ್ತು ಪ್ರಕಾಶ್‌ಬೆಳವಾಡಿ ಅವರ ಮೆಚ್ಯೂರ್ಡ್ ಪರ್‌ಫಾಮೆನ್ಸ್ ನಿಹಾಲ್ ಪಾತ್ರವನ್ನು ಇನ್ನಷ್ಟು ಅರ್ಥಪೂರ್ಣವನ್ನಾಗಿಸಿದೆ. ಲಲಿತಾ ಸಂಕೇಶ್ವರ್ ಪಾತ್ರಕ್ಕೆ ಸಿರಿ ಪ್ರಹ್ಲಾದ್ ಬೆಸ್ಟ್ ಆಯ್ಕೆ. ಗೆಸ್ಟ್ಅಪಿಯರೆನ್ಸ್ ಕೊಡುವ ರವಿಚಂದ್ರನ್ ಎಂದಿನAತೆಯೇ ಕಾಣುತ್ತಾರೆ. ಉಳಿದಂತೆ ಭರತ್ ಬೋಪಣ್ಣ, ಅನೀಶ್, ರಮೇಶ್ ಭಟ್, ದಯಾಳ್ ಪದ್ಮನಾಭನ್, ಶೈನ್ ಶೆಟ್ಟಿ ಮತ್ತು ಅರ್ಚನಾ ಕೊಟ್ಟಿಗೆ ಪಾತ್ರಗಳನ್ನು ಅನುಭವಿಸಿ ಅಭಿನಯಿಸಿದ್ದಾರೆ.
ಹರಿಪ್ರಿಯಾ, ವಸಿಷ್ಠ ಸಿಂಹ ನಿಶ್ಚಿತಾರ್ಥದ ಫೋಟೋಸ್ ವೈರಲ್
ಕೀರ್ತಿನ್ ಪೂಜಾರಿ ಕ್ಯಾಮಾರಾ ಕಣ್ಣು ಸಂಕೇಶ್ವರ ಸಾಮ್ರಾಜ್ಯವನ್ನು ಅದ್ಭುತವಾಗಿ ಕಟ್ಟಿಕೊಡವಲ್ಲಿ ಗೆದ್ದಿದ್ದು, ಬಯೋಪಿಕ್ ಸಿನಿಮಾದಲ್ಲಿರಬಹುದಾದ ಸೀಮಿತತೆಯ ಎಲ್ಲೆಯನ್ನು ಮೀರಿದೆ. ಗೋಪಿಸುಂದರ್ ಅವರ ಹಿನ್ನಲೆ ಸಂಗೀತ ನಿರ್ದೇಶಕಿಯ ಆಶಯವನ್ನು ಎತ್ತಿಹಿಡಿದಿದೆ. ಇನ್ನು, ಸಂಜಯ್ ಉಪಾಧ್ಯ ಸಂಭಾಷಣೆ ಮತ್ತು ರವಿವರ್ಮ ಅವರ ಸಾಹಸ ಸಾಹಸಿಗನೊಬ್ಬನ ಕಥೆಗೆ ಪೂರಕವಾಗಿದೆ. ಒಟ್ಟಿನಲ್ಲಿ, ಸಿನಿಮಾ ನೋಡಿ ಒಬ್ಬನೇ ಒಬ್ಬ ನೋಡುಗ ಸ್ಫೂರ್ತಿಗೊಂಡು ತಾನು ಏನಾದರೂ ಸಾಧಿಸಬೇಕು ಎಂದು ಮನಸ್ಸು ಮಾಡಿದ್ದೇ ಆದರೆ, ಅದು ಕನ್ನಡದ ಮೊಟ್ಟ ಮೊದಲ ಬಯೋಪಿಕ್ ಒಂದನ್ನು ಅತ್ಯಂತ ಯಶಸ್ವಿಯಾಗಿ ತೆರೆಗೆ ತಂದಿರುವ `ವಿಜಯಾನಂದ’ ತಂಡದ ದೊಡ್ಡ ವಿಜಯ.
– By ಬಿ.ನವೀನ್‌ಕೃಷ್ಣ, ಪುತ್ತೂರು